ಜೈಪುರ:ಕರೊನಾ ಮತ್ತು ಲಾಕ್‌ಡೌನ್ ಅಟ್ಟಹಾಸ ಇನ್ನೂ ಏನೇನಿದೆಯೋ, ದಿನಕ್ಕೊಂದು ಮನಮಿಡಿಯುವ ಪ್ರಸಂಗಗಳು ನಡೆಯುತ್ತಲೇ ಇವೆ. ಇಲ್ಲೊಬ್ಬ ನರ್ಸ್‌ಗೆ ಮೃತ ತಾಯಿಯ ಅಂತಿಮ ದರ್ಶನ ಭಾಗ್ಯವನ್ನೂ ಪಡೆಯಲು ಸಾಧ್ಯವಾಗದಂತಹ ಹೃದಯವಿದ್ರಾವಕ ಪ್ರಸಂಗ ನಡೆದಿದೆ.
ನರ್ಸ್ ರಾಮ್‌ಮೂರ್ತಿ ಮೀನಾ ತಮ್ಮ ತಾಯಿ ಮೃತರಾದಾಗ ರಾಜಸ್ಥಾನದ ಜೈಪುರದ ಎಸ್‌ಎಂಎಸ್ ಆಸ್ಪತ್ರೆಯ ಕರೊನಾ ಚಿಕಿತ್ಸೆಯ ಐಸೋಲೇಷನ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಸಹೋದರರು ಹಾಗೂ ತಂದೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದುದನ್ನು ಅವರು ವಿಡಿಯೋ ಕಾಲ್‌ನಲ್ಲಿ ನೋಡಿದರು.
‘93 ವರ್ಷ ವಯಸ್ಸಿನ ತಾಯಿಯ ಅಂತಿಮ ಸಂಸ್ಕಾರವನ್ನು ತಪ್ಪಿಸಿಕೊಂಡಿರುವುದು ನಮ್ಮ ಜೀವನದ ಅತ್ಯಂತ ನೋವಿನ ಸಂಗತಿಯಾಗಿದೆ. ನನ್ನ ತಾಯಿ ಮೃತರಾದಾಗ ಮಾರ್ಚ್ 30 ರಂದು ನಾನು ಐಸೋಲೇಷನ್ ವಾರ್ಡ್ ನರ್ಸಿಂಗ್ ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಕೊನೆಯ ಬಾರಿ ನನ್ನ ತಾಯಿಯ ಮುಖವನ್ನು ವಿಡಿಯೋ ಕಾಲ್‌ನಲ್ಲಿ ನೋಡಿದೆ’ ಎಂದು ಮೀನಾ ನೆನಪಿಸಿಕೊಂಡರು.
ಐಸೋಲೇಷನ್ ವಾರ್ಡ್‌ನಲ್ಲಿ ಇರುವುದು ಅಷ್ಟು ಸುಲಭವಲ್ಲ. ವೈದ್ಯಕೀಯ ಸಿಬ್ಬಂದಿ ರೋಗಿಯ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ನಾವೂ ಸಹ ಸೋಂಕಿಗೆ ಒಳಗಾಗುತ್ತೇವೆ. ಆದ್ದರಿಂದ ನಾವೂ ಕೂಡ ಪ್ರತ್ಯೇಕವಾಗಿ ಇರುತ್ತೇವೆ. ಇದು ವೈದ್ಯಕೀಯ ಸಿಬ್ಬಂದಿಗೆ ಸವಾಲಿನ ಸಮಯ ಎಂದು ಅವರು ಹೇಳಿದ್ದಾರೆ.(ಏಜೆನ್ಸೀಸ್​)
95 ಸಾವಿರ ಜೀವ ಪಡೆದ ಮಹಾಮಾರಿಗೆ 100 ದಿನ: ವಿವಿಧ ದೇಶಗಳ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಕರೊನಾ ಪಿಡುಗಿನ ವಾತಾವರಣದಲ್ಲಿ ದವಸಧಾನ್ಯಗಳನ್ನು ಸ್ಯಾನಿಟೈಸ್​ ಮಾಡುವುದು ಹೇಗೆಂಬ ಚಿಂತೆಯೇ…? ಅದಕ್ಕೆ ಇಲ್ಲಿದೆ ಪರಿಹಾರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
