ಜಾಲಂಧರ್​:ಕೋವಿಡ್​ 19 ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮಾ.24ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದೆ. ಇದು ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಜಾಲಂಧರ್​ನಂಥ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ. ಜಾಲಂಧರ್​ನಲ್ಲಂತೂ ಮರೆತೇ ಹೋಗಿದ್ದ ಪ್ರಕೃತಿಯ ಸೊಬಗನ್ನು ಹಲವು ದಶಕಗಳ ಬಳಿಕ ಕಣ್ತುಂಬಿಕೊಳ್ಳುವ ಅವಕಾಶ ಅಲ್ಲಿನ ಜನರಿಗೆ ಲಭಿಸಿದೆ.
ಏನದು ಅವಕಾಶ? ಜಾಲಂಧರ್​ ನಗರ ಮಿತಿಮೀರಿ ಬೆಳೆದು, ವಾಯುಮಾಲಿನ್ಯ ಹೆಚ್ಚಾಗಿತ್ತು. ಇದರಿಂದಾಗಿ ದಶಕದ ಹಿಂದೆ ಸೊಬಗಿನ ನೋಟ ಒದಗಿಸುತ್ತಿದ್ದ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದೃಶ್ಯ ಕಾಣುವುದೇ ದುಸ್ತರವಾಗಿತ್ತು.
ಆದರೆ ಈಗ ಲಾಕ್​ಡೌನ್​ನಿಂದಾಗಿ ವಾಹನಗಳ ಸಂಚಾರ ಕಡಿಮೆಯಾಗಿದೆ. ಕೈಗಾರಿಕೆಗಳು ಸ್ತಬ್ಧವಾಗಿವೆ. ಇದರಿಂದಾಗಿ ವಾಯುಮಾಲಿನ್ಯ ಕೂಡ ಕಡಿಮೆಯಾಗಿದ್ದು, ದಶಕಗಳ ನಂತರ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಗಳು ದರ್ಶನ ನೀಡಲಾರಂಭಿಸಿವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ತಮ್ಮ ಮನೆಗಳ ಮಾಡಿನ ಮೇಲೆ ದಿನವೂ ಬಂದು ನಿಲ್ಲುವುದು ಸಾಮಾನ್ಯವಾಗುತ್ತಿದೆ.
ಈ ದೃಶ್ಯ ಇನ್ನು ಕೆಲವು ದಿನಗಳವರೆಗೆ ಮಾತ್ರ ಕಾಣಿಸಲಿದೆ. ಲಾಕ್​ಡೌನ್​ ಅಂತ್ಯಗೊಂಡ ನಂತರದಲ್ಲಿ ಮತ್ತೊಮ್ಮೆ ಈ ದೃಶ್ಯ ಕಣ್ಮರೆಯಾಗಲಿದೆ ಎಂಬುದು ಸ್ಥಳೀಯರ ಕೊರಗಾಗಿದೆ.
ಲಾಕ್​ಡೌನ್​ ಯಾವಾಗ ಅಂತ್ಯವಾಗುತ್ತೆ…? 14ಕ್ಕೆ ಮುಗಿಯುತ್ತಾ, ವಿಸ್ತರಣೆ ಆಗುತ್ತಾ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
