ಅಹಮದಾಬಾದ್​:ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡು ಕರೊನಾ ಸೋಂಕಿತರಾಗಿರುವ ಜಮಾತಿಗಳು ಚಿಕಿತ್ಸೆ ಪಡೆಯಲು ನಿರಾಕರಿಸಿ, ಸಾಕಷ್ಟು ಗಲಭೆ ಎಬ್ಬಿಸಿದ್ದರು. ಅಲ್ಲದೆ, ಸರ್ಕಾರ ನಮ್ಮನ್ನು ಕೊಲ್ಲುವ ಉದ್ದೇಶ ಹೊಂದಿದೆ ಎಂದು ಆರೋಪಿಸಿ, ಗಲಾಟೆ ಮಾಡುತ್ತಿದ್ದರು.
ಆದರೆ, ಜಿಲ್ಲಾಧಿಕಾರಿ ಕೈಗೊಂಡ ಈ ಕ್ರಮದ ಬಳಿಕ ಅವರೆಲ್ಲರೂ ಚಿಕಿತ್ಸೆ ಪಡೆಯಲು ಸಮ್ಮತಿಸಿದರು. ಹಾಗಾದರೆ, ಈ ಚಮತ್ಕಾರ ಆಗಿದ್ದಾರೂ ಹೇಗೆ? ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮವಾದರೂ ಏನು?
ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡು ಸೋಂಕಿತರಾಗಿರುವವರನ್ನು ದೇಶದೆಲ್ಲಡೆ ಪತ್ತೆ ಮಾಡಿ, ಐಸೋಲೇಷನ್​ಗೆ ಕಳುಹಿಸಲಾಗುತ್ತಿದೆ. ಅಲ್ಲಿ ಅವರು ವೈದ್ಯರು, ನರ್ಸ್​ಗಳೊಂದಿಗೆ ಅಸಭ್ಯವಾಗಿ ವರ್ತಿಸುವ ಸುದ್ದಿ ಸಾಮಾನ್ಯವಾಗುತ್ತಿದೆ. ಅದರಂತೆ ಅಹಮದಾಬಾದ್​ ದರಿಯಾಪುರದ ಸೊಲಾ ಸಿವಿಲ್​ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ 26 ಜಮಾತಿಗಳು ಗಲಾಟೆ ಆರಂಭಿಸಿದ್ದರು.
ವಿಷಯ ತಿಳಿದ ಜಿಲ್ಲಾಧಿಕಾರಿ, ಮುಸ್ಲಿಂ ವೈದ್ಯರನ್ನು ಐಸೋಲೇಷನ್​ ವಾರ್ಡ್​ಗೆ ಕಳುಹಿಸಿ, ಅಂದಾಜು ಒಂದು ಗಂಟೆ ಕೌನ್ಸೆಲಿಂಗ್​ ಕೊಡಿಸಿದರು. ನಿಮ್ಮನ್ನು ಕೊಲ್ಲುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬದಲಿಗೆ ನಿಮ್ಮೆಲ್ಲರನ್ನೂ ಉಳಿಸಲು ಅದು ಯತ್ನಿಸುತ್ತಿದೆ ಎಂದು ಮುಸ್ಲಿಂ ವೈದ್ಯರು ಜಮಾತಿಗಳಿಗೆ ಮನವರಿಕೆ ಮಾಡಿಕೊಟ್ಟರು. ಆನಂತರದಲ್ಲಿ ಅವರೆಲ್ಲರೂ ಚಿಕಿತ್ಸೆ ಪಡೆಯಲು ಸಮ್ಮತಿಸಿದರು.
ನನಗೆ ಕೋವಿಡ್​-19 ಬಂದಿದೆ ಎಂದು ಹಾಡು ಹೇಳುತ್ತಾ ಆಸ್ಪತ್ರೆಯ ವಾರ್​ರೂಂನಲ್ಲಿ ನರ್ತಿಸಿದ ಸೋಂಕಿತ ವ್ಯಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
