ನವದೆಹಲಿ:ಜ್ಞಾನವ್ಯಾಪಿ ಕುರಿತ ವರದಿಯನ್ನು ತಿರಸ್ಕರಿಸುವ ಜನರು ತುಕಡೆ ತುಕಡೆ ಗ್ಯಾಂಗ್‍ನ ಭಾಗವಾಗಿದ್ದಾರೆ ಎಂದು ಮುಸ್ಲಿಂ ವಿದ್ವಾಂಸರಾದ ಕಾರಿ ಅಬ್ರಾರ್ ಜಮಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಗ ಟೀಂ ಇಂಡಿಯಾ ಆಟಗಾರ, ಅಪ್ಪ ಈಗಲೂ ಸಿಲಿಂಡರ್ ವಿತರಕ: ವಿಡಿಯೋ ವೈರಲ್..
ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಲಾಗಿದೆ. ಇದನ್ನು ವಿರೋಸುವ ಜನರಿಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲವೇ? ಅವರಿಗೆ ಪ್ರತ್ಯೇಕ ನ್ಯಾಯಾಲಯ ಮತ್ತು ಪ್ರತ್ಯೇಕ ದೇಶ ಬೇಕೇ ಎಂದು ಪ್ರಶ್ನಿಸಿದ್ದಾರೆ.
ಹಿಂದುಗಳು ಮಸೀದಿಯಲ್ಲಿ ಶಿವಲಿಂಗವನ್ನು ಕಾಣಬಾರದು ಎಂದು ಆರ್‍ಎಸ್‍ಎಸ್ ಮುಖ್ಯಸ್ಥರು ಈಗಾಗಲೇ ಹೇಳಿದ್ದಾರೆ. ಈಗ ಎಎಸ್‍ಐ ವರದಿ ನಂತರ ಮುಸ್ಲಿಮರಾದ ನಾವೂ ಕೂಡ ದೊಡ್ಡ ಹೃದಯ ವೈಶಾಲ್ಯತೆಯನ್ನು ಪ್ರದರ್ಶಿಸಬೇಕು. ಸಾಮರಸ್ಯಕ್ಕಾಗಿ ಹಿಂದು ಪರವಾಗಿರಬೇಕು ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿದ ರಾಮಜನ್ಮಭೂಮಿ ಟ್ರಸ್ಟ್‍ನ ಎಲ್ಲಾ ಮುಖಂಡರಿಗೂ ನಾವು ಕೃತಜ್ಞರಾಗಿದ್ದೇವೆ ಎಂದಿದ್ದಾರೆ.
ಅಯೋಧ್ಯೆಗೆ ಹೋಗಿ ಬಂದ ನಂತರ ನಾವು ಬೇರೆ ಕಡೆಗೆ ಹೋಗಿ ಬಂದಿದ್ದೇವೆ ಎಂದು ನಮಗೆ ಅನ್ನಿಸಲೇ ಇಲ್ಲ. ಇದು ನಮಗೆ ಒಂದು ಐತಿಹಾಸಿಕ ಕ್ಷಣವಾಗಿದೆ. ಸಾಧು-ಸಂತರು, ಋಷಿಮುನಿಗಳು ಸೇರಿ ನಡೆಸಿದ ಮಹತ್ತರ ಧಾರ್ಮಿಕ ಕಾರ್ಯಕ್ರಮ ಇದಾಗಿತ್ತು. ಇದನ್ನು ಕಣ್ತುಂಬಿಕೊಂಡು ನಾವು ಧನ್ಯರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಲ್ಲಿ ನಮ್ಮನ್ನು ತುಂಬಾ ಆದರವಾಗಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಎಲ್ಲಾ ಸಂತರು ಮತ್ತು ಋಷಿಗಳ ನಡುವೆ ನಾವು ಜೈ ಶ್ರೀರಾಮ್ ಜಪಿಸಿದೆವು ಎಂದು ಹೇಳಿದರು.
ಜರ್ಮನಿಯಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ, ಯಾಕೆ ಈ ಪ್ರಯೋಗ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 5 =
Remember me
