ಲಂಡನ್​:ಜೇಮ್ಸ್​ ಬಾಂಡ್ ಖ್ಯಾತಿಯ ನಟ ಸೀನ್​ ಕಾನೆರಿ ತಮ್ಮ 90ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು.
1962 ಹಾಗೂ 1983ರ ಅವಧಿಯಲ್ಲಿ ಏಳು ಬಾಂಡ್​ ಸಿನಿಮಾಗಳಲ್ಲಿ ನಟಿಸಿದ್ದ ಅವರು, ಆಸ್ಕರ್ ಪ್ರಶಸ್ತಿಗೂ ಪಾತ್ರರಾಗಿದ್ದರು. ‘ದ ಅನ್​ಟಚೇಬಲ್ಸ್’ ಸಿನಿಮಾದಲ್ಲಿನ ಟಫ್ ಐರಿಷ್ ಕಾಪ್​ ಪಾತ್ರಕ್ಕಾಗಿ ಅವರಿಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಸ್ಕಾಟಿಷ್​ ಮೂಲದ ಈ ನಟ ಆಸ್ಕರ್ ಮಾತ್ರವಲ್ಲದೆ ಮೂರು ಗೋಲ್ಡನ್ ಗ್ಲೋಬ್ಸ್​ ಹಾಗೂ ಎರಡು ಬಫ್ತಾ ಪ್ರಶಸ್ತಿಗೂ ಪಾತ್ರರಾಗಿದ್ದರು.
ಇವರು ಮೊದಲು ನಟಿಸಿದ ಬಾಂಡ್ ಸಿನಿಮಾ 1962ರಲ್ಲಿ ತೆರೆಕಂಡಿದ್ದ ‘ಡಾ. ನೋ’. ಬಳಿಕ ‘ಫ್ರಮ್ ರಷ್ಯಾ ವಿದ್ ಲವ್’, ‘ಗೋಲ್ಡ್​ ಫಿಂಗರ್’​, ‘ಥಂಡರ್ ಬಾಲ್’​, ‘ಯೂ ಓನ್ಲಿ ಲಿವ್ ಟ್ವೈಸ್​’, ‘ಡೈಮಂಡ್ಸ್ ಆರ್​ ಫಾರೆವರ್’​ ಹಾಗೂ ‘ನೆವರ್ ಸೇ ನೆವರ್ ಅಗೇನ್’​ ಸಿನಿಮಾಗಳಲ್ಲಿ ನಟಿಸಿದ್ದರು.
ಆರಂಭದಲ್ಲಿ ತೀರಾ ಬಡತನದಲ್ಲಿ ಬದುಕಿದ್ದ ಕಾನೆರಿ, ಎಡಿನ್​ಬರೋದ ಸ್ಲಮ್​ಗಳಲ್ಲಿ ಜೀವನ ನಡೆಸಿದ್ದರು. ಮಾತ್ರವಲ್ಲ ಶವದ ಪೆಟ್ಟಿಗೆ ಪಾಲಿಶ್ ಮಾಡುವ, ಹಾಲು ಮಾರುವ ಹಾಗೂ ಬಾಡಿ ಗಾರ್ಡ್​ ಕೆಲಸವನ್ನೂ ಮಾಡಿದ್ದರು. ನಂತರ ಇವರ ಬಾಡಿ ಬಿಲ್ಡಿಂಗೇ ಅವರನ್ನು ಸಿನಿಮಾ ಜಗತ್ತಿನತ್ತ ಕರೆ ತಂದಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 15 =
Remember me
