ಬೆಂಗಳೂರು:ಕರೊನಾ ಸೋಂಕು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್​ಡೌನ್​ ತೆರವಾಗುತ್ತಿದ್ದಂತೆ ಶೈಕ್ಷಣಿಕ ಚಟುವಟಿಕೆಗಳಿಗೂ ಅವಕಾಶ ದೊರೆಯಲಿದೆ ಎಂದೇ ಹೇಳಲಾಗಿತ್ತು. ಇದೇ ಕಾರಣಕ್ಕೆ ಹಲವು ರಾಜ್ಯ ಶಿಕ್ಷಣ ಮಂಡಳಿಗಳು ಹಾಗೂ ಸಂಸ್ಥೆಗಳು ಪರೀಕ್ಷೆ ದಿನಾಂಕ ಪ್ರಕಟಿಸಿದ್ದವು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ನಿಗದಿಯಂತೆ ಪರೀಕ್ಷೆ ನಡೆಸುವುದು ಸಾಧ್ಯವೇ ಎಂಬ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬೇಡ ಎಂದು ದೊಡ್ಡ ಕೂಗೆದ್ದಿದೆ. ಈ ನಡುವೆ ಹಲವು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಹಲವು ವಿಶ್ವವಿದ್ಯಾಲಯಗಳು ಕೂಡ ಇದೇ ಹಾದಿ ಹಿಡಿದಿವೆ.
ಇದನ್ನೂ ಓದಿ;‘ಸೇಲ್ಸ್​ಮನ್​’ ಆಗಲಿಲ್ಲ ಶಿಕ್ಷಕ; ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದವನ ಕೈಹಿಡಿದ ವಿದ್ಯಾರ್ಥಿಗಳು
ಅಂತೆಯೇ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಅಂತಿಮ ವರ್ಷ ಹಾಗೂ ಸೆಮಿಸ್ಟರ್​ಗಳ ಆಫ್​ಲೈನ್​ ಪರೀಕ್ಷೆಗಳನ್ನು ರದ್ದುಪಡಿಸಿದೆ.
ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಪರಿಸ್ಥಿತಿ ಪೂರಕವಾಗಿಲ್ಲ. ಹೀಗಾಗಿ ಆನ್​ಲೈನ್​ ಪರೀಕ್ಷೆ ಹಾಗೂ ಅಸೈನ್​ಮೆಂಟ್​ ಆಧಾರದಲ್ಲಿ ಮೌಲ್ಯಮಾಪನ ನಡೆಸಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಆದಷ್ಟು ಬೇಗ ಆನ್​ಲೈನ್​ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ವಿವಿ ಸೂಚಿಸಿದೆ.
ಇದನ್ನೂ ಓದಿ;ಅಲ್ಪಸಂಖ್ಯಾತ ಹಿಂದುಗಳ ಕೈಗೆ ಶಸ್ತ್ರಾಸ್ತ್ರ ನೀಡಿ; ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಒತ್ತಾಯ
ವಿಶ್ವವಿದ್ಯಾಲಯವು ಜೂನ್​ 1ರಿಂದ 15ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಿತ್ತು. ಬಳಿಕ ಅದನ್ನು ಜೂನ್​ 30ರವರೆಗೆ ವಿಸ್ತರಿಸಿದೆ. ಜುಲೈ 1ರಿಂದ ನಡೆಸಲುದ್ದೇಶಿಸಲಾಗಿದ್ದ ಆಫ್​​ಲೈನ್​ ಪರೀಕ್ಷೆಯನ್ನು ರದ್ದುಪಡಿಸುವುದಾಗಿ ಘೋಷಿಸಿದೆ.
https://www.vijayavani.net/murder-convicts-presence-at-wedding-of-kerala-cms-daughter-kicks-up-row/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
