ಉದಾಂಪುರ್​:ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ಬದಿಗೊತ್ತಿ, ಸುತ್ತಲಿನ ಅಡೆತಡೆಗಳನ್ನು ಮೆಟ್ಟಿನಿಂತ ಜಮ್ಮು ಮತ್ತು ಕಾಶ್ಮೀರದ 21 ವರ್ಷದ ಯುವತಿಯೊಬ್ಬಳು ತಂದೆಗೆ ನೆರವಾಗಲು ಆಟೋ ಚಾಲನೆ ವೃತ್ತಿಗೆ ಇಳಿಯುವ ಮೂಲಕ ಹೆಣ್ಣು ಮನಸ್ಸು ಮಾಡಿದರೆ ಯಾವ ಕೆಲಸ ಬೇಕಾದರೂ ಮಾಡಬಲ್ಲಳು ಎಂಬುದನ್ನು ದೇಶಕ್ಕೆ ಸಾರಿದ್ದಾಳೆ.
ಯುವತಿಯ ಹೆಸರು ಬಂಜೀತ್​ ಕೌರ್​. ಈಕೆ ಜಮ್ಮು ಮತ್ತು ಕಾಶ್ಮೀರದ ಉದಾಂಪುರ್​ ಜಿಲ್ಲೆಯ ನಿವಾಸಿ. ನನ್ನ ತಂದೆ ಸ್ಕೂಲ್​ಬಸ್​ ಡ್ರೈವರ್​ ಆಗಿದ್ದರು. ಕೋವಿಡ್​ ಲಾಕ್​ಡೌನ್​ನಿಂದಾಗಿ ಶಾಲೆಗಳು ತೆರೆಯದೇ ಇದ್ದುದ್ದರಿಂದ ತಂದೆ ಕೆಲಸ ಕಳೆದುಕೊಂಡರು. ಬಳಿಕ ಆಟೋ ಚಾಲನೆ ಮಾಡಲು ಆರಂಭಿಸಿದರು. ಆದರೆ, ಸಂಪಾದನೆ ಇರಲಿಲ್ಲ. ಹೀಗಾಗಿ ನಾನು ಸಹ ಆಟೋ ಚಾಲನೆ ಕಡೆ ಮುಖ ಮಾಡಿದೆ ಎನ್ನುತ್ತಾರೆ ಬಂಜೀತ್​.
ಇದನ್ನೂ ಓದಿ:ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!
ನಾನು ರಕ್ಷಣಾ ಇಲಾಖೆಯನ್ನು ಸೇರಬೇಕೆಂದು ಬಯಸಿದ್ದೇನೆ. ಹೀಗಾಗಿ ನನ್ನ ಅಧ್ಯಯನವನ್ನು ಮುಂದುವರಿಸಿದ್ದೇನೆ. ನಾನೀಗ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿನಿಯಾಗಿದ್ದು, ಆಟೋ ಚಾಲನೆಯನ್ನು ಪಾರ್ಟ್​ ಟೈಂ ಕೆಲಸವನ್ನಾಗಿ ಮಾಡುತ್ತಿದ್ದೇನೆ. ಹುಡುಗಿಯರಾದ ನಾವು ಎಲ್ಲ ಪರಿಸ್ಥಿತಿಗು ಸಿದ್ಧರಾಗಿರಬೇಕು ಎಂದಿದ್ದಾರೆ.
ಅನೇಕರ ಜೀವನದ ಮೇಲೆ ಬಂಜೀತ್​ ಪ್ರಭಾವ ಬೀರಿರುವುದು ಸಹೋದರಿ ದೇವಿಂದರ್​ ಕೌರ್​ಗೆ ಸಂತಸವಾಗಿದೆಯಂತೆ. ಅಲ್ಲದೆ, ತನಗೂ ಚಾಲನೆ ಮಾಡುವುದು ಬರುವುದಾಗಿ ಹೇಳಿಕೊಂಡಿದ್ದಾರೆ.
ತಂದೆ ಸರ್ದಾರ್​ ಗೋರಕ್​ ಸಿಂಗ್​ ಮಗಳ ಬಗ್ಗೆ ಮಾತನಾಡಿ, ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದು. ಅವರವರ ಇಚ್ಛೆಗೆ ಅನುಗುಣವಾಗಿ ಅವರ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡ ಬಳಿಕ ಆಟೋ ರಿಕ್ಷಾವನ್ನು ಹೇಗೆ ಚಲಾಯಿಸಬೇಕೆಂದು ಮಕ್ಕಳಿಗೆ ಹೇಳಿಕೊಟ್ಟಿದ್ದೆ. ನಾನು ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆಂದು ಹೇಳಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಮಹಿಳೆಯ ಬರ್ಬರ ಹತ್ಯೆ: ಫೋನ್​ ಕರೆ ಸ್ವೀಕರಿಸಿದ ಮೃತಳ ಭಾವನಿಗೆ ಕಾದಿತ್ತು ಶಾಕ್​!
ತಂದೆಗೆ ಬೆಂಬಲವಾಗಿ ನಿಲ್ಲಲು ಆಟೋ ಚಾಲನೆ ಮಾಡುವ ಬಂಜೀತ್​ ಕೌರ್​ರಂತಹ ಹುಡುಗಿಯರು ಸಮಾಜಕ್ಕೆ ಮಾದರಿ ಎಂದು ಉದಾಂಪುರ್​ನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್​ಟಿಒ) ರಚನಾ ಶರ್ಮಾ ಶ್ಲಾಘಿಸಿದ್ದು, ಉದಾಂಪುರ್​ ಎಆರ್​ಟಿಒಗೆ ವರ್ಗಾವಣೆಯಾದಾಗ ಹುಡುಗಿಯರು ಸಹ ಡ್ರೈವಿಂಗ್​ ಕಲಿಯಬಹುದು ಎಂದು ನಾನು ಅಭಿಯಾನ ಮಾಡಿದ್ದೆ. ಈ ವೇಳೆ ಅನೇಕ ಹುಡುಗಿಯರು ಡ್ರೈವಿಂಗ್​ ಕಲಿತಿದ್ದಾರೆ ಎಂದರು.(ಏಜೆನ್ಸೀಸ್​​)
ಧರ್ಮಬೋಧಕನಿಗೆ 1,075 ವರ್ಷ ಜೈಲು ಶಿಕ್ಷೆ: ಸೆಕ್ಸ್​ ಆರಾಧಿಸೋ ಈತನ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​

ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 13 =
Remember me
