ಕೇಂದ್ರಾಡಳಿತ ಪ್ರದೇಶಜಮ್ಮು&ಕಾಶ್ಮೀರದ ೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ನ್ಯಾ.ರಂಜನಾ ಪ್ರಕಾಶ್​ ದೇಸಾಯಿ ನೇತೃತ್ವದ ನಿಯೋಗ ಪೂರ್ಣಗೊಳಿಸಿದ್ದು, ಅಂತಿಮ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಕಾಶ್ಮೀರಕ್ಕೆ 47 ಮತ್ತು ಜಮ್ಮುವಿಗೆ 43 ವಿಧಾನಸಭಾ ೇತ್ರಗಳನ್ನು ನಿಗದಿಗೊಳಿಸಿರುವ ಆಯೋಗ, ಮೊದಲ ಬಾರಿ ಕಣಿವೆ ಪ್ರದೇಶಕ್ಕೆ 9 ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳನ್ನು ಘೋಷಿಸಿದೆ. ಅವುಗಳಲ್ಲಿ 6 ಮೀಸಲು ಕ್ಷೇತ್ರಗಳು ಜಮ್ಮುವಿನಲ್ಲಿದ್ದರೆ, 3 ಕ್ಷೇತ್ರಗಳು ಕಾಶ್ಮೀರದ ವ್ಯಾಪ್ತಿಯಲ್ಲಿರಲಿವೆ. ಆಯೋಗಕ್ಕೆ ಸಲ್ಲಿಕೆಯಾಗಿರುವ ಈ ಶಿಫಾರಸುಗಳ ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ. ಈ ಹಿಂದೆ 1995ರಲ್ಲಿ ಇಲ್ಲಿನ ವಿಧಾನಸಭಾ ಕ್ಷೇತ್ರಗಳನ್ನು 1981ರ ಜನಗಣತಿ ಆಧಾರದ ಮೇಲೆ ವಿಂಗಡಿಸಲಾಗಿತ್ತು. ಈಗ 41 ವರ್ಷಗಳ ಬಳಿಕ ಮರುವಿಂಗಡಣೆ ಪ್ರಕ್ರಿಯೆ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 5 ಲೋಕಸಭಾ ಕ್ಷೇತ್ರಗಳಿವೆ. ಮರುವಿಂಗಡಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಎರಡನ್ನೂ ಒಂದೇ ಕೇಂದ್ರಾಡಳಿತ ಪ್ರದೇಶ ಎಂದು ಪರಿಗಣಿಸಿದ್ದು, ಕಾಶ್ಮೀರದ ಅನಂತನಾಗ್​ ಹಾಗೂ ಜಮ್ಮುವಿನ ರಜೌರಿ ಮತ್ತು ಪೂಂಚ್​ನ್ನು ಒಟ್ಟುಗೂಡಿಸಿ ಲೋಕಸಭೆ ಕ್ಷೇತ್ರವೊಂದರ ಮರುರಚನೆ ಮಾಡಿದೆ. ಇದರಿಂದಾಗಿ ಪ್ರತಿ ಸಂಸದೀಯ ಕ್ಷೇತ್ರ ಸಮಾನವಾಗಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರಲಿದೆ. ಜೆ&ಕೆ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳ್ಳುವ ಮುನ್ನ 87 ವಿಧಾನಸಭಾ ಕ್ಷೇತ್ರಗಳಿದ್ದವು. 2019ರ ಆಗಸ್ಟ್​ ಬಳಿಕ ಲಡಾಖ್​ನ್ನು ಕೇಂದ್ರಾಡಳಿತ ಪ್ರದೇಶವಾಗಿ ಬೇರ್ಪಡಿಸಿದ ಪರಿಣಾಮ ಜಮ್ಮು & ಕಾಶ್ಮೀರ 83 ಕ್ಷೇತ್ರಗಳಿಗೆ ಸೀಮಿತಗೊಂಡಿತು. ಈಗ ಕ್ಷೇತ್ರಗಳನ್ನು 90ಕ್ಕೆ ನಿಗದಿಪಡಿಸಲಾಗಿದೆ.
ಕಾನೂನು ತಜ್ಞರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕಣಿವೆ ಜನರು ಹಾಗೂ ಇಲ್ಲಿನ ನಾಗರಿಕ ಸಮಾಜದ ವಿವಿಧ ಗುಂಪುಗಳೊಂದಿಗೆ ಸಮಾಲೋಚಿಸಿ 9 ವಿಧಾನಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. 3 ಕ್ಷೇತ್ರಗಳು ಪರಿಶಿಷ್ಟ ಜಾತಿಗಳಿಗೆ ಮೀಸಲಿರಲಿವೆ. ಅದೇ ರೀತಿ, ಸ್ಥಳಿಯರ ಬೇಡಿಕೆ ಪರಿಗಣಿಸಿ ಹಲವು ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಬದಲಿಸಲಾಗಿದೆ. ಉದಾಹರಣೆಗೆ; ತಂಗ್​ಮಾರ್ಗ್​ನ್ನು ಗುಲ್ಮಾರ್ಗ್​ ಎಂದು, ಜೂನಿಮಾರ್​ನ್ನು ಜೈದಿಬಾಲ್​, ಸೋನ್ವಾರ್​ನ್ನು ಲಾಲ್​ಚೌಕ್​, ಕಥುವಾ ನಾರ್ತ್​ ಕ್ಷೇತ್ರವನ್ನು ಜಸ್ರೋತಾ ಎಂದು ಬದಲಿಸಲಾಗಿದೆ.
ರಾಜಕೀಯ ಲೆಕ್ಕಾಚಾರಕ್ಷೇತ್ರ ಮರುವಿಂಗಡಣೆ ಮತ್ತು ಪರಿಶಿಷ್ಟ ಪಂಗಡದ ಹೊಸ ಮೀಸಲು ಕ್ಷೇತ್ರಗಳ ಘೋಷಣೆಯಿಂದ ಬಿಜೆಪಿಗೆ ನೇರ ಲಾಭವಾಗಲಿದೆ ಎಂದು ಈಗಲೇ ಹೇಳಲಾಗದು. ಈ ಕ್ರಮವನ್ನು ಅಲ್ಲಿನ ಜನರು ಹೇಗೆ ವಿಶ್ಲೇಷಿಸುತ್ತಾರೆ ಮತ್ತು ಸ್ಥಳಿಯ ರಾಜಕೀಯ ಪಗಳು ಮುಂದಿನ ದಿನಗಳಲ್ಲಿ ಇಡುವ ಹೆಜ್ಜೆಗಳು ಭವಿಷ್ಯದ ರಾಜಕೀಯ ಚಿತ್ರಣವನ್ನು ನಿರ್ಧರಿಸಬಲ್ಲವು. ಆದರೂ, ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿಗೆ ಮತ ಹಾಕುವ ವರ್ಗ ಹೆಚ್ಚಿರುವುದರಿಂದ ಈ ಭಾಗದಲ್ಲಿ ಕ್ಷೇತ್ರಗಳ ಸಂಖ್ಯೆ ಏರಿಸಿರುವುದು ಬಿಜೆಪಿಗೆ ರಾಜಕೀಯವಾಗಿ ನೆರವಾಗುವ ಸಾಧ್ಯತೆಯಿದೆ.
ಆಯೋಗದಲ್ಲಿ ಇದ್ದವರು* ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾ. ರಂಜನಾ ಪ್ರಕಾಶ್​ ದೇಸಾಯಿ* ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ* ಜಮ್ಮು&ಕಾಶ್ಮೀರದ ಚುನಾವಣಾ ಆಯುಕ್ತ ಕೆ.ಕೆ. ಶರ್ಮ
ವಿಧಾನಸಭೆಯಲ್ಲಿ ಪ್ರಾತಿನಿಧ್ಯಸಾರ್ವಜನಿಕ ಅಹವಾಲು ಸ್ವೀಕಾರ ವೇಳೆ ಕಾಶ್ಮೀರಿ ವಲಸಿಗರು ಮತ್ತು ಪಾಕ್​ ಆಕ್ರಮಿತ ಜಮ್ಮು & ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳು ತಮ್ಮ ಬವಣೆಗಳನ್ನು ತೋಡಿಕೊಂಡರು. ಕಳೆದ ಮೂರು ದಶಕಗಳಿಂದ ಅವರು ಯಾವ ರೀತಿಯಲ್ಲಿ ಕಿರುಕುಳ ಹಾಗೂ ಶೋಷಣೆಗೊಳಗಾಗಿದ್ದಾರೆ ಎಂಬುದನ್ನು ಆಯೋಗ ಕಂಡುಕೊಂಡಿತು. ತಮ್ಮ ದೇಶದಲ್ಲೆ ನಿರಾಶ್ರಿತರಾಗಿ, ದೇಶಭ್ರಷ್ಟರಂತೆ ಬದುಕಬೇಕಾದ ಅಸಹನೀಯ ಸ್ಥಿತಿ ಇಲ್ಲಿದೆ ಎಂದೂ ವಲಸಿಗರು ಮನವಿಯಲ್ಲಿ ವಿವರಿಸಿದರು. ಹೀಗಾಗಿ, ಅವರ ರಾಜಕೀಯ ಹಕ್ಕುಗಳನ್ನು ಕಾಪಾಡಲು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅವರಿಗೆ ಪ್ರತ್ಯೇಕ ಸ್ಥಾನಗಳನ್ನು ಮೀಸಲಿಡಬೇಕು ಎಂದು ವಲಸಿಗರು ಮತ್ತು ನಿರಾಶ್ರಿತರ ಆಯೋಗ ಒತ್ತಾಯಿಸಿತು. ಈ ಹಿನ್ನೆಲೆಯಲ್ಲಿ ಮರು ವಿಂಗಡಣಾ ಆಯೋಗವು ಕೇಂದ್ರ ಸರ್ಕಾರಕ್ಕೆ 2 ಪ್ರಮುಖ ಶಿಫಾರಸುಗಳನ್ನು ಮಾಡಿದೆ.
1. ಜಮ್ಮು&ಕಾಶ್ಮೀರ ವಿಧಾನಸಭೆಗೆ ಕಾಶ್ಮೀರಿ ವಲಸಿಗರ ಸಮುದಾಯದಿಂದ ಕನಿಷ್ಠ ಇಬ್ಬರು ಸದಸ್ಯರನ್ನು (ಒಬ್ಬರು ಮಹಿಳೆಯಾಗಿರಬೇಕು) ನೇಮಿಸಬೇಕು. ಅಂತಹ ಸದಸ್ಯರಿಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭೆಯ ನಾಮನಿರ್ದೇಶಿತ ಸದಸ್ಯರ ಅಧಿಕಾರಕ್ಕೆ ಸಮಾನವಾಗಿ ಅಧಿಕಾರ ನೀಡಬಹುದು.
2. ಪಾಕ್​ ಆಕ್ರಮಿತ ಜಮ್ಮು&ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳಿಗೂ ವಿಧಾನಸಭೆಯಲ್ಲಿ ನಾಮನಿರ್ದೇಶಿತ ಸದಸ್ಯತ್ವದಂಥ ಪ್ರಾತಿನಿಧ್ಯ ನೀಡಲು ಕೇಂದ್ರ ಸರ್ಕಾರ ಪರಿಗಣಿಸಬಹುದು.
ರಾಜ್ಯ ಸ್ಥಾನಮಾನ ಸನಿಹ?ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಂಡ ಬಳಿಕ ಜಮ್ಮು&ಕಾಶ್ಮೀರ ಕೇಂದ್ರ ಸರ್ಕಾರ ನೇಮಿಸಿರುವ ಲೆಫ್ಟಿನಂಟ್​ ಗವರ್ನರ್​ ಅವರ ಆಡಳಿತಕ್ಕೊಳಪಟ್ಟಿದ್ದರೂ, “ರಾಜ್ಯ ಸ್ಥಾನಮಾನವನ್ನು ಮರು ಸ್ಥಾಪನೆಗೊಳಿಸುವುದು ನಮ್ಮ ಆಶಯವೂ ಆಗಿದೆ’ ಎಂದು ಈ ಹಿಂದೆ ಗೃಹ ಸಚಿವ ಅಮಿತ್​ ಷಾ ಹೇಳಿದ್ದರು. ಅದೇ ರೀತಿ, “ಚುನಾವಣೆ ನಡೆಸಲೂ ನಾವು ಮುಂದಾಗಲಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪಗಳ ಪ್ರತಿನಿಧಿಗಳ ಬಳಿಯೂ ತಿಳಿಸಿದ್ದರು. ಮರುವಿಂಗಡಣೆ ಪ್ರಕ್ರಿಯೆ ಅಂತಿಮಗೊಂಡಿರುವುದರಿಂದ ಶ್ರೀದಲ್ಲೆ ಚುನಾವಣೆ ನಡೆಸಲು ಕೇಂದ್ರ ಮುಂದಾಗಬಹುದೇ? ಅಲ್ಲದೆ, ರಾಜ್ಯ ಸ್ಥಾನಮಾನ ಮರುಸ್ಥಾಪನೆಯಾಗಿ ಚುನಾವಣೆಯಾಗುವುದೋ ಅಥವಾ ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣೆ ನಡೆಸುವ ಮಾದರಿಯಲ್ಲಿ ಚುನಾವಣೆ ನಡೆಸಲಾಗುತ್ತದೋ ಎಂಬ ಪ್ರಶ್ನೆಗಳೂ ಕಾಡುತ್ತಿವೆ.
ಸವಾಲಿನ ಹಾದಿಜಮ್ಮು&ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ನಿಷ್ಕ್ರಿಯಗೊಳಿಸಿದ ಬಳಿಕ ಕ್ಷೇತ್ರ ಮರುವಿಂಗಡಣೆ ಕ್ರಮಕ್ಕೆ ಕೇಂದ್ರ ಮುಂದಾಗಿತ್ತು. ಇದನ್ನು ಪಿಡಿಪಿ, ನ್ಯಾಷನಲ್​ ಕಾನ್ಫರೆನ್ಸ್​ ಸೇರಿ ಹಲವು ಸ್ಥಳಿಯ ರಾಜಕೀಯ ಪಗಳು ವಿರೋಧಿಸಿದ್ದವು. ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ಅಲ್ಲಿನ ಪ್ರಮುಖ ರಾಜಕೀಯ ಪಗಳ ಪ್ರತಿನಿಧಿಗಳನ್ನು ದೆಹಲಿಗೆ ಕರೆಸಿ ಐತಿಹಾಸಿಕ ಮಾತುಕತೆ ಪ್ರಕ್ರಿಯೆ ಕೈಗೊಂಡು, ಮರುವಿಂಗಡಣೆ ಪ್ರಕ್ರಿಯೆಗೆ ಸಹಕಾರ ನೀಡುವಂತೆ ಕೋರಿದ್ದರು. ಆದರೆ ಆಯೋಗ ರಚನೆಗೆ ಮೆಹಬೂಬಾ ಮುಫ್ತಿ ಸೇರಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರು ಮತ್ತು ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಿದ್ದರು. ಆದರೆ, ಕೇಂದ್ರ ಇದಕ್ಕೆ ಸೊಪ್ಪು ಹಾಕಲಿಲ್ಲ. ಅದಾಗಲೇ ನೇಮಕಗೊಂಡಿದ್ದ ಆಯೋಗ ತನ್ನ ಕಾರ್ಯ ಮುಂದುವರಿಸಿತು. ಆಯೋಗ ಜಮ್ಮು&ಕಾಶ್ಮೀರಕ್ಕೆ 2 ಭಾರಿ ಭೇಟಿ ನೀಡಿತು. ಮೊದಲ ಭೇಟಿ ವೇಳೆ ಸುಮಾರು 242 ನಿಯೋಗಗಳೊಂದಿಗೆ ನಾಲ್ಕು ವಿವಿಧ ಸ್ಥಳಗಳಲ್ಲಿ ( ಶ್ರೀನಗರ, ಪಹಲ್ಗಾಮ್​, ಕಿಶ್ತ್ವಾರ್​ ಮತ್ತು ಜಮ್ಮು) ಸಂವಾದ ನಡೆಸಿತು. ಏಪ್ರಿಲ್​ 4 ಮತ್ತು 5ರಂದು ಎರಡನೇ ಭೇಟಿ ವೇಳೆ ಜಮ್ಮು, ಶ್ರೀನಗರದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಭೆಗಳಲ್ಲಿ 1600 ಮಂದಿ ಭಾಗವಹಿಸಿ ತಮ್ಮ ಅಭಿಪ್ರಾಯ ಮುಂದಿಟ್ಟರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
