ನವದೆಹಲಿ:ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಜಮ್ಮು- ಕಾಶ್ಮೀರದ ಡಿಎಸ್​ಪಿ ದೇವಿಂದರ್ ಸಿಂಗ್​ಗೂ 2001ರಲ್ಲಿ ನಡೆದ ಸಂಸತ್ ದಾಳಿಗೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇವಿಂದರ್ ಸಿಂಗ್​ರಿಂದ ಬೇರೆ ಉಗ್ರ ಕೃತ್ಯಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಜಮ್ಮು- ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಗ್ ಸಿಂಗ್ ಹೇಳಿದ್ದಾರೆ. ಸಂಸತ್ ದಾಳಿ ಸಂಚುಕೋರ ಉಗ್ರ ಅಫ್ಜಲ್ ಗುರುಗೆ ದೆಹಲಿಗೆ ತೆರಳಲು ಹಾಗೂ ಉಗ್ರರಿಗೆ ಅಲ್ಲಿ ತಂಗಲು ದೇವಿಂದರ್ ವ್ಯವಸ್ಥೆ ಮಾಡಿದ್ದರು ಎಂಬ ಅನುಮಾನಗಳು ಇವೆ. ಸಂಸತ್ ಮೇಲೆ ದಾಳಿ ನಡೆಸಲು ಹಾಗೂ ದೆಹಲಿಯಲ್ಲಿ ತಂಗಲು ಪೊಲೀಸ್ ಅಧಿಕಾರಿಯೊಬ್ಬರು ತನಗೆ ವ್ಯವಸ್ಥೆ ಮಾಡಿದ್ದರು ಎಂದು 2013ರಲ್ಲಿ ಮರಣದಂಡನೆಗೆ ಗುರಿಯಾಗುವ ಮುನ್ನ ಸ್ವತಃ ಅಫ್ಜಲ್ ಪತ್ರವೊಂದರಲ್ಲಿ ಉಲ್ಲೇಖಿಸಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್​ಐಎ) ವರ್ಗಾಹಿಸಲಾಗಿದ್ದು, ಉಗ್ರರ ಜತೆಗಿನ ನಂಟಿನ ಬಗ್ಗೆ ದೇವಿಂದರ್ ಸಿಂಗ್​ನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ವಾರ ದೇವಿಂದರ್ ಸಿಂಗ್ ಇಬ್ಬರು ಹಿಜ್ಬುಲ್ ಉಗ್ರರನ್ನು ಕಾರಿನಲ್ಲಿ ಕರೆದುಕೊಂಡು ಹೊರಟಿದ್ದಾಗ ಅವರನ್ನು ಪೊಲೀಸರು ಬಂಧಿಸಿದ್ದರು. ದೇವಿಂದರ್ ಸಿಂಗ್ ತಮ್ಮ ಮನೆಯಲ್ಲೇ ಉಗ್ರರಿಗೆ ವಸತಿ ವ್ಯವಸ್ಥೆ ಮಾಡಿದ್ದರು ಎಂಬುದೂ ತನಿಖೆ ವೇಳೆ ಹೊರಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eight =
Remember me
