ನವದೆಹಲಿ: ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಅಧಿಕಾರಿ ದವೀಂದರ್​ ಸಿಂಗ್​ ಅವರನ್ನು ಭಯೋತ್ಪಾದನಾ ತನಿಖಾ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ತನಿಖೆ ನಡೆಸಲಿದೆ.
ಪೊಲೀಸ್​ ಅಧಿಕಾರಿ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿರುವುದು ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕೇಂದ್ರ ಗೃಹಸಚಿವಾಲಯ ಎನ್​ಐಎಗೆ ಸೂಚಿಸಿದೆ.
ಪೊಲೀಸ್​ ಅಧಿಕಾರಿ ದವೀಂದರ್​ ಸಿಂಗ್​ ಜಮ್ಮುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂವರು ಉಗ್ರರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಡಿ ಭದ್ರತಾ ಪಡೆ ದವೀಂದರ್​ ಸಿಂಗ್​ ಅವರನ್ನು ಬಂಧಿಸಿತ್ತು. ಇವರ ಜೊತೆ ಹುಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಕಮಾಂಡರ್​ ನವೀದ್​ ಬಾಬು ಹಾಗೂ ಆಸೀಫ್​ ಅಹ್ಮದ್​ ಇದ್ದರು.
ಪೊಲೀಸ್​ ಅಧಿಕಾರಿ ದವೀಂದರ್​ ಸಿಂಗ್​ ಅವರನ್ನು ಭಯೋತ್ಪಾದನ ವಿರೋಧಿ ಚಟುವಟಿಕೆಗಳ ಕಾನೂನಿನ ಅಡಿ ಬಂಧಿಸಿ ಕೇಸು ದಾಖಲಿಸಲಾಗಿದೆ.
ಬಂಧಿತ ಪೊಲೀಸ್ ಅಧಿಕಾರಿ ಸಿಂಗ್​ ಹಾಗೂ 2001 ರ ಸಂಸತ್​ ಮೇಲೆ ನಡೆದ ದಾಳಿ ಪ್ರಕರಣದ ಪ್ರಮುಖ ಅಪರಾಧಿ ಅಫ್ಜಲ್ ಗುರು ನಡುವೆ ಸಂಬಂಧ ಇತ್ತು ಎಂಬ ಅನುಮಾನ ವ್ಯಕ್ತವಾಗಿದ್ದೂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮು ಕಾಶ್ಮೀರ ಪೊಲೀಸ್​ ಮುಖ್ಯಸ್ಥ ದಿಲ್ಬಾಗ್ ಸಿಂಗ್​ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಆಡಳಿತ ದವೀಂದರ್​ ಸಿಂಗ್​ ಅವರಿಗೆ ಶೌರ್ಯಕ್ಕಾಗಿ ನೀಡಿದ್ದ ಶೇರ್​ ಎ ಕಾಶ್ಮೀರ್​ ಪೊಲೀಸ್​ ಪದಕವನ್ನು ಹಿಂದಕ್ಕೆ ಪಡೆದಿದೆ.
ಉಗ್ರರ ಜೊತೆ ಪೊಲೀಸ್​ ಅಧಿಕಾರಿ ಸಂಪರ್ಕ ಹೊಂದಿರುವ ಪ್ರಕರಣ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌದರಿ ಅವರು ಈ ಪ್ರಕರಣ ಗಂಭೀರವಾಗಿದ್ದು ಸಮಗ್ರ ತನಿಖೆ ನಡೆಸಬೇಕು. ಕಳೆದ ವರ್ಷ ನಡೆದ ಪುಲ್ವಾಮಾ ದಾಳಿಯ ನಿಜವಾದ ಅಪರಾಧಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nine =
Remember me
