ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಇರುವ ಎಲ್ಲ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ನಿಲುವಿನ ಪರವಾಗಿಲ್ಲ. ಸ್ವತಂತ್ರ ಕಾಶ್ಮೀರದ ಕನಸು ಕಂಡವರು ಪಾಕಿಸ್ತಾನ, ಚೀನಾದ ಹಿಡನ್ ಅಜೆಂಡಾ ನೋಡಿ ಇತ್ತೀಚಿನ ವರ್ಷಗಳಲ್ಲಿ ಅವುಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ! ಗಿಲ್ಗಿಟ್​-ಬಾಲ್ಟಿಸ್ತಾನದ ಸ್ವಾಯತ್ತೆ ಮತ್ತು ವಿಲೀನ ವಿಚಾರಗಳಲ್ಲಿ ಭಿನ್ನಮತ ತೋರಿದ್ದೀಗ ಬಹಿರಂಗವಾಗಿದೆ.
ಈ ರೀತಿ ಭಿನ್ನಮತ ಇದೇ ಮೊದಲ ಸಲವೇನಲ್ಲ. ಆದಾಗ್ಯೂ, ಈ ಭಾರಿ ಪ್ರತ್ಯೇಕತಾದಿಗಳ ಬಣಗಳ ಸಂಖ್ಯೆ ಸ್ವಲ್ಪ ಹೆಚ್ಚಾದ ಕಾರಣ ಸುದ್ದಿ ದೊಡ್ಡ ಪ್ರಮಾಣದಲ್ಲೇ ಬಹಿರಂಗವಾಗಿದೆ. ಗೀಲಾನಿ ಬಣ, ಜೆಕೆಎಲ್​ಎಫ್​ ಬಣಗಳ ಪ್ರತಿನಿಧಿಗಳು ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಹಿಂದೆಯೂ ಪಾಕ್ ಅಧ್ಯಕ್ಷ ಪರ್ವೇಜ್ ಮುಷಾರಫ್ ಅವರ 4 ಅಂಶಗಳ ಕಾರ್ಯಸೂಚಿಯನ್ನೂ ಗೀಲಾನಿ ತಳ್ಳಿಹಾಕಿದ್ದರು. ಇದೇ ಕಾರಣಕ್ಕೆ ಗೀಲಾನಿಯವರ ಇಸ್ಲಮಾಬಾದ್​ ಮತ್ತು ಪಿಒಕೆ ಕಚೇರಿಗಳನ್ನು ಪಾಕ್​ ಸರ್ಕಾರ ಮುಚ್ಚಿಸಿತ್ತು.
ಇದನ್ನೂ ಓದಿ:ಪಿಒಕೆ, ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!
ಇದಾದ ನಂತರದಲ್ಲಿ ಗೀಲಾನಿಯ ಪ್ರತಿನಿಧಿ ಸ್ಥಾನವನ್ನೂ ಐಎಸ್ಐ ವಜಾಗೊಳಿಸಿತ್ತು. ಗೀಲಾನಿಯ ಪ್ರತಿನಿಧಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ತಾನೂ ರಾಜಕೀಯಕ್ಕೆ ಇಳಿದ. ಐಎಸ್​ಐ ಕುತಂತ್ರದ ವಿರುದ್ಧ ಹೋರಾಟ ನಡೆಸಲು ಕೈ ಜೋಡಿಸುವಂತೆ ಇತರೆ ಪ್ರತ್ಯೇಕತಾವಾದಿಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು ಕೂಡ ಈಗ ಬಯಲಾಗಿದೆ.
ಈ ಹೋರಾಟ ನಡೆಸುವ ಸಲುವಾಗಿಯೇ ಜೆಕೆಎಲ್​ಎಫ್​ನ ರಫೀಕ್ ಧರ್​, ಹುರಿಯತ್ ಮಿರ್​ವೇಜ್ ಗ್ರೂಪ್​ನ ಫೈಝ್ ನಖಾಶ್​ಬಂದಿ, ಹಿಜ್ಬುಲ್ ಕಮಾಂಡರ್ ಸಲಾಹುದಿನ್​, ಜಮಾತ್ ಏ ಇಸ್ಲಾಮಿಯ ನಬಿ ನೌಶರಿ ಸೇರಿ ಆರು ಸದಸ್ಯರ ಕೋರ್ ಕಮಿಟಿಯನ್ನೂ ರಚಿಸಿಕೊಂಡಿದ್ದಾರೆ. ಈ ಗುಂಪು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರದ ಪ್ರಧಾನ ಮಂತ್ರಿ ರಾಜಾ ಫರೂಕ್ ಹೈದರ್​ನನ್ನು ಬೆಂಬಲಿಸುತ್ತಿದೆ. ಇದರೊಂದಿಗೆ ಐಎಸ್​ಐ ಕೂಡ ಈ ಗುಂಪಿನ ವಿರುದ್ಧ ಕತ್ತಿಮಸೆಯಲಾರಂಭಿಸಿತು. ಪ್ರತ್ಯೇಕತಾವಾದಿಗಳು, ಪಾಕಿಸ್ತಾನ, ಚೀನಾ ಇವುಗಳ ಕಳ್ಳಾಟ ಬಹುತೇಕ ಬಯಲಾಗಿದ್ದು, ಅವನತಿಯ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. (ಏಜೆನ್ಸೀಸ್)
ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಗ್ಗುಲ ಮುಳ್ಳಾಗತೊಡಗಿವೆ ಚೀನಾ, ಪಾಕ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four × 5 =
Remember me
