ಶ್ರೀನಗರ:ಕರೊನಾ ವೈರಸ್​ ನಡುವೆಯೂ ಪಾಕಿಸ್ತಾನದ ಉಗ್ರರ ಕಾಟ ಮಾತ್ರ ತಪ್ಪಲಿಲ್ಲ. ದಿನನಿತ್ಯವೂ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಉಗ್ರರಿಗೆ ಇದಾಗಲೇ ಭಾರತೀಯ ಯೋಧರು ಬುದ್ಧಿ ಕಲಿಸುತ್ತಿದ್ದಾರೆ.
ಇದರ ಹೊರತಾಗಿಯೂ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಉಗ್ರರ ಪೈಕಿ ಒಂಬತ್ತು ಮಂದಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಕಳೆದ 24 ಗಂಟೆಗಳಲ್ಲಿ ನಡೆದ ಕಾರ್ಯಾಚರಣೆಯನ್ನು 9 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ.
ಇದನ್ನೂ ಓದಿ:ಪಾಲಕರನ್ನು ಕರೆದೊಯ್ದರೂ ಶರಣಾಗದ ಉಗ್ರರನ್ನು ಹೊಡೆದುರುಳಿಸಿದ ಸೇನೆ
ಭಾನುವಾರ ಮತ್ತು ಸೋಮವಾರ ಜಮ್ಮು ಮತ್ತು ಕಾಶ್ಮೀರ ಭಾಗದ ಶೋಪಿಯಾನ ಭಾಗದಲ್ಲಿ ನಡೆದಿರುವ ಚಕಮಕಿಯಲ್ಲಿ ಭಾರತೀಯ ಸೇನೆಯ ಗುಂಡಿಗೆ ಈ ಉಗ್ರರು ಹತರಾಗಿದ್ದಾರೆ. ಎರಡು ದಿನಗಳಲ್ಲಿ ಎರಡೆರಡು ಬಾರಿ ಎನ್​ಕೌಂಟರ್​ ನಡೆದಿದೆ. ದಕ್ಷಿಣ ಕಾಶ್ಮೀರದ ಪಿನ್ಜೋರಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ಪಡೆದ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಗೆ ಇಳಿದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶೋಧ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ನಡುವೆಯೇ ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಉಗ್ರರು ಸತ್ತಿದ್ದಾರೆ.
ಇದನ್ನೂ ಓದಿ:ಲಾಕ್​ಡೌನ್​ನಲ್ಲಿ 46 ಉಗ್ರರ ಹೊಡೆದುರುಳಿಸಿದ ಸೇನೆ: ಇಂದು ಮೂವರ ಹತ್ಯೆ
ಯುವಕರು ಉಗ್ರ ಸಂಘಟನೆಗೆ ಸೇರಬಾರದು ಎಂಬ ಹೊಸ ನಿಯಮ ಇರುವ ಹಿನ್ನೆಲೆಯಲ್ಲಿ ಪೊಲೀಸರು ಉಗ್ರರ ಗುರುತನ್ನು ಬಹಿರಂಗಪಡಿಸಿಲ್ಲ, ಅಷ್ಟೇ ಅಲ್ಲದೇ ಅವರು ಯಾವ ಸಂಘಟನೆಗೆ ಸೇರಿದ್ದಾರೆಂಬ ಮಾಹಿತಿ ಕೂಡ ಗೌಪ್ಯವಾಗಿ ಇರಿಸಲಾಗಿದೆ.
VIDEO: ಕರೊನಾದಿಂದ ಗುಣಮುಖರಾಗಿ ರೋಡ್​ ಷೋ: ಇಮ್ರಾನ್​ ಪಾಷಾ ಅರೆಸ್ಟ್​- ಜಮೀರ್​ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
