ಜಮ್ಮು:ಇಂದು ಬೆಳಗ್ಗೆ ಜಮ್ಮುವಿನ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನ ಉನ್ನತ ಕಮಾಂಡರ್ ಹಿಜ್ಬ್-ಉಲ್-ಮುಜಾಹಿದ್ದೀನ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಕಳೆದ ಕೆಲವು ದಿನಗಳಿಂದ ಭಾರತೀಯ ಸೇನೆ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಂದೊಂದೇ ಉಗ್ರರನ್ನು ಹೊಡೆದುರುಳಿಸುತ್ತಲೇ ಬಂದಿದೆ. ಇದೀಗ ಹಿಜ್ಬುಲ್ ಕಮಾಂಡರ್ ಮಸೂದ್ ಸೇರಿದಂತೆ ಇಬ್ಬರು ಎಲ್ಇಟಿ ಭಯೋತ್ಪಾದಕರು ಹತರಾಗಿದ್ದಾರೆ.
ಇವರೆಲ್ಲಾ ಜಮ್ಮು ವಲಯದ ದೋಡಾ ಜಿಲ್ಲೆಗೆ ಸೇರಿದವರು. ಇವರೆಲ್ಲರೂ ಹತ್ಯೆಗೀಡಾಗಿರುವ ಹಿನ್ನೆಲೆಯಲ್ಲಿ ದೋಡಾ ಜಿಲ್ಲೆ ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತವಾಗಿವೆ. ಮಸೂದ್ ದೋಡಾ ಜಿಲ್ಲೆಯ ಕೊನೆಯ ಭಯೋತ್ಪಾದಕನಾಗಿದ್ದರಿಂದ ಈತನ ಸಾವಿನೊಂದಿಗೆ ಇಡೀ ಜಿಲ್ಲೆ ಉಗ್ರರಿಂದ ಮುಕ್ತಗೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಉಫ್‌…! ಮೇಕೆಯ ಕಾಪಾಡಲು ಇದೆಂಥ ಸಾಹಸನಪ್ಪಾ..?ವಿಡಿಯೋ ನೋಡಿ…
ಈ ಭಾಗದಲ್ಲಿ ಕೇಳಿಬಂದ ಭಯೋತ್ಪಾದನಾ ಚಟುವಟಿಕೆ ಮಾತ್ರವಲ್ಲದೇ ಅತ್ಯಾಚಾರ ಪ್ರಕರಣಗಳಲ್ಲಿಯೂ ಬೇಕಾಗಿದ್ದ ಮಸೂದ‌ ಪರಾರಿಯಾಗಿದ್ದ. ನಂತರ ಈತ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ. ಇದೀಗ ಆತನನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಈತನ ಜತೆ, ಇಂದು ಲಾಲ್ ಚೌಕ್‌ನ ತಾರಿಕ್ ಖಾನ್, ಅನಂತ್‌ನಾಗ್ ಮತ್ತು ಕುಲ್ಗಂನ ನದೀಮ್‌ ಕೂಡ ಹತ್ಯೆಯಾಗಿದ್ದಾನೆ ಎಂದು ಮೂಲಗಳು ಗುರುತಿಸಿವೆ. ಈ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಹೊರಬೀಳಬೇಕಿದೆ.
ಈ ಮೂವರ ಹತ್ಯೆಯ ಬಳಿಕ ಈ ವರ್ಷದಲ್ಲಿ ಕಣಿವೆಯಲ್ಲಿ ಹತ್ಯೆಗೊಂಡ ಭಯೋತ್ಪಾದಕರ ಸಂಖ್ಯೆ 116ಕ್ಕೆ ತಲುಪಿದೆ.
ಇದು ಜೂನ್ ತಿಂಗಳಲ್ಲಿ ನಡೆದ 13 ನೇ ಮುಖಾಮುಖಿಯಾಗಿದ್ದು, ಈ ತಿಂಗಳಲ್ಲಿ ಈವರೆಗೆ 40 ಕ್ಕೂ ಹೆಚ್ಚು ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಹತರಾಗಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಹಿಜ್ಬುಲ್ ಮುಜಾಹಿದ್ದೀನ್ ಸದ್ಯ ಭಾರತದ ಭದ್ರತಾ ಪಡೆಗಳ ಮುಖ್ಯ ಗುರಿಯಾಗಿದೆ. ಈ ಗುಂಪಿನ ಕಮಾಂಡರ್ ರಿಯಾಜ್ ನಾಯ್ಕು ಇದಾಗಲೇ ಮೃತಪಟ್ಟಿದ್ದಾನೆ.
‘ಆಫೀಸ್‌ 39’! ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ನ ಭಯಾನಕ ರಹಸ್ಯವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 18 =
Remember me
