ನವದೆಹಲಿ:ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ರೆಡಿಯಾಗ್ತಿದ್ದಾರೆ. ನೂತನ ಪ್ರಧಾನಿ ಪದಗ್ರಹಣಕ್ಕೆ ಕೌಂಟ್‌ ಡೌನ್ ಶುರುವಾಗಿದೆ. ಈ ನಡುವೆ ವ್ಯಕ್ತಿಯೊಬ್ಬರು ಮೋದಿಗೆ ಉಡುಗೊರೆ ನೀಡಲು 3 ಕೆ.ಜಿ ಶುದ್ಧ ಬೆಳ್ಳಿಯಿಂದ ತಯಾರಿಸಿ ಕಮಲದ ಹೂವನ್ನು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ! ಕಾರಣ ಹೀಗಿದೆ ನೋಡಿ
ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದು ಇಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ. 500 ವರ್ಷಗಳ ಬಳಿಕ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ನರೇಂದ್ರ ಮೋದಿ ಅವರ ಆಡಳಿತವು ಉತ್ತಮವಾಗಿದೆ. ಹೀಗಾಗಿ ಅವರಿಗೆ ಏನಾದರು ಉಡುಗೊರೆ ನೀಡಬೇಕೆಂಬ ಆಲೋಚನೆ ಸದಾ ನನ್ನ ಮನಸ್ಸಿನಲ್ಲಿ ಮೂಡಿತ್ತು ಎಂದು ಹೇಳಿದರು.
ಇದರಿಂದ ಸ್ವತಃ ನಾನೇ ಪಕ್ಷದ ಚಿಹ್ನೆ ಕಮಲವನ್ನು ಸಾಂಕೇತಿಕವಾಗಿ ಎನ್ನುವಂತೆ ಕಮಲದ ಬೆಳ್ಳಿ ಕಲಾಕೃತಿಯನ್ನು ತಯಾರಿಸಿದ್ದೇನೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಆಭರಣ ವ್ಯಾಪರಿ ರಿಂಕು ಚೌಹಾಣ್ ಭಾನುವಾರ ತಿಳಿಸಿದ್ದಾರೆ.
ಬೆಳ್ಳಿ ಕಮಲದ ಕಲಾಕೃತಿಯನ್ನು ರಚಿಸಲು 15 ರಿಂದ 20 ದಿನಗಳು ಬೇಕಾಯಿತು. ನಾನು ವೈಯಕ್ತಿಕವಾಗಿ ಕಮಲದ ಹೂವನ್ನು ಬೆಳ್ಳಿಯಲ್ಲಿ ರಚಿಸಿದ್ದೇನೆ ಮತ್ತು ಅದನ್ನು ಮೋದಿ ಅವರಿಗೆ ನೀಡಲು ಕಾಯುತ್ತಿದ್ದೇನೆ ಎಂದು ಪಕ್ಷದ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ವಕ್ತಾರ ಚೌಹಾಣ್ ಅವರ ನಿವಾಸದಲ್ಲಿ ಪಿಟಿಐಗೆ ತಿಳಿಸಿದರು.
ಈ ಉಡುಗೊರೆಯನ್ನು ಹಸ್ತಾಂತರಿಸಲು ಪ್ರಧಾನಿ ಅವರನ್ನು ಭೇಟಿಯಾಗುವ ಅವಕಾಶಕ್ಕಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಅವರ ಪತ್ನಿ ಅಂಜಲಿ ಚೌಹಾಣ್ ಹೇಳಿದ್ದಾರೆ.
ಒಡಿಶಾದಲ್ಲಿ ಬಿಜೆಡಿ ಸೋಲು: ರಾಜಕೀಯಕ್ಕೆ ಗುಡ್ ಬೈ ಹೇಳಿದ ನವೀನ್ ಪಟ್ನಾಯಕ್ ಆಪ್ತ ವಿ.ಕೆ. ಪಾಂಡಿಯನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
