ನವದೆಹಲಿ:ಲಾಕ್​ಡೌನ್​ ನಡುವೆಯೂ ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗಿ ನಿಂತಿರುವ ಪಾಕಿಸ್ತಾನದ ಉಗ್ರರ ಹೆಣಗಳನ್ನು ಭಾರತೀಯ ಯೋಧರು ಉರುಳಿಸುತ್ತಲೇ ಇದ್ದಾರೆ. ಕಳೆದ ವಾರವಷ್ಟೇ ಕಾಶ್ಮೀರದ ಕುಲ್ಗಾಂವ್​ ಜಿಲ್ಲೆಯಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ನಿನ್ನೆ ಸಂಜೆ ಮತ್ತೆ ಇಬ್ಬರು ಉಗ್ರರನ್ನು ಯೋಧರು ಎನ್​ಕೌಂಟರ್​ ಮಾಡಿದ್ದಾರೆ.
ಈ ಇಬ್ಬರು ಉಗ್ರರನ್ನು ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಸದಸ್ಯರು ಎಂದು ಗುರುತಿಸಲಾಗಿದೆ. ಕುಲ್ಗಾಮ್‌ ಜಿಲ್ಲೆಯ ವಾನ್‌ಪೊರಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:VIDEO: ರೋಗ ನಿರೋಧಕ ಶಕ್ತಿಗೆ ಆಯುರ್ವೇದ, ಯೋಗ ಪರಿಣಾಮಕಾರಿ: ‘ಮನ್​ ಕೀ ಬಾತ್​’ನಲ್ಲಿ ಪ್ರಧಾನಿ
ವಾನ್​ಪೊರಾ ಪ್ರಾಂತ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಭಾರತೀಯ ಯೋಧರಿಗೆ ಮಾಹಿತಿ ಸಿಕ್ಕಿತ್ತು. ಇದರ ಜಾಡು ಹಿಡಿದ ಯೋಧರು ಶುಕ್ರವಾರವೇ ಉಗ್ರರ ಅಡಗುತಾಣದ ಸಮೀಪ ಹೋಗಿದ್ದರು. ಆಗ ಸುಮಾರು ಮಧ್ಯರಾತ್ರಿ 2 ಗಂಟೆಯ ಸಮಯ. ಏಕಾಏಕಿ ದಾಳಿ ಮಾಡದ ಯೋಧರು ಮೊದಲಿಗೆ, ಶರಣಾಗುವಂತೆ ಉಗ್ರರಿಗೆ ತಿಳಿಸಿದರು. ಆದರೆ ಉಗ್ರರು ಈ ಮಾತನ್ನು ಕೇಳಲಿಲ್ಲ. ಬದಲಿಗೆ ಜೀವದಾನ ಮಾಡಲು ಬಂದ ಭಾರತೀಯ ಯೋಧರ ಮೇಲೆಯೇ ಗುಂಡಿನ ಚಕಮಕಿ ನಡೆಸಿದರು.
ಈ ಚಕಮಕಿಯು ನಸುಕಿನ 5 ಗಂಟೆವರೆಗೂ ಜಾರಿಯಲ್ಲಿತ್ತು. ಈ ಸಮಯದಲ್ಲಿ ಕೂಡ ಯೋಧರು ಉಗ್ರರನ್ನು ಹೊಡೆದುರುಳಿಸಲಿಲ್ಲ. ಬದಲಿಗೆ ಮೊದಲೇ ಮಾಡಿಕೊಂಡ ಯೋಜನೆಯಂತೆ ಈ ಉಗ್ರರ ಪಾಲಕರನ್ನು ಕರೆಯೊಯ್ದು ಶರಣಾಗುವಂತೆ ಮನವಿ ಮಾಡಿಕೊಳ್ಳಲಾಯಿತು. ಪಾಲಕರು ಶರಣಾಗುವಂತೆ ಹೇಳಿದರೂ ಉಗ್ರರು ಕೇಳಲಿಲ್ಲ. ಅವರ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಅಷ್ಟೇ ಅಲ್ಲದೇ ಉಗ್ರರು ಪ್ರತಿ ದಾಳಿ ನಡೆಸಲು ಶುರು ಮಾಡಿದರು.
ಇದನ್ನೂ ಓದಿ:VIDEO: ಕರೊನಾ ಸ್ಯಾಂಪಲ್​ಗಳನ್ನೇ​ ಹೊತ್ತೊಯ್ದು ತಿಂದ ಮಂಗ! ವಿಡಿಯೋ ಆಗಿದೆ ಭಾರಿ ವೈರಲ್​
ಬೇರೆ ದಾರಿ ಕಾಣದ ಭಾರತೀಯ ಯೋಧರು ಎನ್​ಕೌಂಟರ್​ ಮಾಡಬೇಕಾಯಿತು. ಈ ಸಮಯದಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಜಮ್ಮು ಮತ್ತು ಕಾಶ್ಮೀರದ ಇನ್ಸ್‌ಪೆಕ್ಟರ್‌ ಜನರಲ್‌ ವಿಜಯ್‌ ಕುಮಾರ್‌ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 3 =
Remember me
