ಆಂಧ್ರಪ್ರದೇಶ:ಮುಂದಿನ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ತಮ್ಮ ಪ್ರಚಾರದ ವಾಹನವನ್ನು ಅನಾವರಣಗೊಳಿಸಿದ್ದಾರೆ. ಪವನ್ ಕಲ್ಯಾಣ್ ತಮ್ಮ ಪ್ರಚಾರದ ವಾಹನಕ್ಕೆ ‘ವಾರಾಹಿ’ ಎಂದು ಹೆಸರಿಟ್ಟಿದ್ದಾರೆ.
‘ಚುನಾವಣಾ ಸಮರಕ್ಕೆ ವಾರಾಹಿ ಸಿದ್ಧವಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ಪವನ್ ಕಲ್ಯಾಣ್ ತಮ್ಮ ವಾಹನದ ಫೋಟೋವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಾಹನದ ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಭಧ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
‘Varahi’ is ready for Election Battle!pic.twitter.com/LygtMrp95N— Pawan Kalyan (@PawanKalyan)December 7, 2022
‘Varahi’ is ready for Election Battle!pic.twitter.com/LygtMrp95N
ಮಿಲಿಟರಿ ವಾಹನದ ಶೈಲಿಯನ್ನು ಹೋಲುವ ಈ ವಾಹನ ದೊಡ್ಡ ಗಾತ್ರದಲ್ಲಿದ್ದು, ವಾಹನದ ಸುತ್ತಲು ಲೈಟ್​​ಗಳನ್ನು ಹೊಂದಿದೆ. ಹೈಡ್ರಾಲಿಕ್ ಮೆಟ್ಟಿಲು, ಧ್ವನಿ ವರ್ಧಕದ ವ್ಯವಸ್ಥೆ ಹಾಗೂ ವಾಹನದ ಮೇಲ್ಭಾಗದಲ್ಲಿ ಸಣ್ಣ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಪವನ್ ಕಲ್ಯಾಣ್ ಹೊರತುಪಡಿಸಿ ಇಬ್ಬರು ವ್ಯಕ್ತಿಗಳಿಗೆ ಇದರಲ್ಲಿ ವಿಶ್ರಾಂತಿ ಪಡೆಯುವಷ್ಟು ಸ್ಥಳಾವಕಾಶವಿದೆ.
ಐಷಾರಾಮಿಯಾಗಿರುವ ಈ ಕ್ಯಾರವ್ಯಾನ್​ನ್ನು ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಸಲಾಗಿದ್ದು, ಇದಕ್ಕಾಗಿ ಬರೋಬ್ಬರಿ 6 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಹಿಂದೆ ಪವನ್ ಕಲ್ಯಾಣ ತಮ್ಮ ಬೆಂಗಾವಲು ಪಡೆಯ ಅಗತ್ಯಕ್ಕನುಗುಣವಾಗಿ ಎಂಟು ಮಹೀಂದ್ರಾ ಎಸ್​​ಯುವಿ ಕಾರುಗಳನ್ನು ಖರೀದಿಸಿದ್ದರು.
2024ರ ಚುನಾವಣೆಗೆ ಪೂರ್ವಭಾವಿಯಾಗಿ ಮತದಾರರನ್ನು ಸೆಳೆಯಲು ಪವನ್ ಕಲ್ಯಾಣ್ ಅವರು ವಾರಾಹಿ ಹೆಸರಿನ ವಾಹನದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿ ಪಕ್ಷ ಸಂಘಟಿಸಲು ಪವನ್ ಮುಂದಾಗಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
