ನವದೆಹಲಿ:ಜನಗಣಮನ ಹಾಗೂ ವಂದೇ ಮಾತರಂ ಹಾಡುವ ಮೂಲಕ ಪಾಕಿಸ್ತಾನದ ಕೆಲವು ಕಾರ್ಯಕರ್ತರು ಅಚ್ಚರಿ ಮೂಡಿಸಿದ್ದಾರೆ.
ಅಷ್ಟಕ್ಕೂ ಇವರು ಭಾರತದ ರಾಷ್ಟ್ರಗೀತೆಗಳನ್ನು ಹಾಡಿರುವ ಹಿಂದೆ ಇರುವ ಕಾರಣ ಚೀನಾ. ಚೀನಾವನ್ನು ಬಹಿಷ್ಕರಿಸಿ ಎನ್ನುವ ಆಂದೋಲನದ ಭಾಗವಾಗಿ ಇದೇ 12ರಂದು ಲಂಡನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ಹೊರಗೆ ಭಾರತೀಯ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡ ಪಾಕಿಸ್ತಾನಿಯರು ರಾಷ್ಟ್ರಗೀತೆಗಳನ್ನು ಹಾಡಿದರು.
ಲಡಾಖ್‌ನ ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಭಾರತದಲ್ಲಿ ಚೀನಾದ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ಕೆಲವು ಪಾಕಿಸ್ತಾನಿಯರೂ ಅವರ ಜತೆ ಸೇರಿಕೊಂಡು ಚೀನಾ ವಿರೋಧಿ ಫಲಕಗಳನ್ನು ಪ್ರದರ್ಶಿಸಿದರು.
“ಇಂದು ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ವಂದೇ ಮಾತರಂ ಹಾಡಿದೆ. ತುಂಬಾ ಖುಷಿ ಎನಿಸುತ್ತಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಆರಿಫ್ ಅಜಾಕಿಯಾ ಹೇಳಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮಿರ್ಪುರ್ ಮೂಲದ ಅಮ್ಜದ್ ಅಯೂಬ್ ಮಿರ್ಜಾ ಕೂಡ ಇದ್ದರು. ಭಾರತದ ಸಾಥ್‌ ನೀಡಿದ ಅವರು, ರಾಷ್ಟ್ರಗೀತೆಗಳನ್ನು ಹಾಡುವ ಮೂಲಕ, ಪಿಒಕೆಯಲ್ಲಿ ವಾಸಿಸುತ್ತಿರುವ ಜನರ ಮೇಲಿನ ದಬ್ಬಾಳಿಕೆ ಮತ್ತು ಅನ್ಯಾಯದ ಕುರಿತು ವಿವರಣೆ ನೀಡಿದರು. ಅಲ್ಲಿಯ ಜನರು ಈ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿತ್ತಿರುವ ಬಗ್ಗೆಯೂ ಮಾತನಾಡಿದರು.
Jana gana mana at protestpic.twitter.com/LV9KosKDk7
— Arif Aajakia (@arifaajakia)July 12, 2020

ಚೀನಾ ವಿರುದ್ಧದ ಪ್ರತಿಭಟನೆಗೆ ಭಾರತಕ್ಕೆ ಸಾಥ್‌ ನೀಡಲು ಕರಾಚಿ ಹಾಗೂ ಇರಾನ್‌ನಿಂದಲೂ ಅನೇಕ ಜನ ಬಂದಿದ್ದರು. ಚೀನಾ ತಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ತಾವೆಲ್ಲರೂ ತೊಂದರೆಯಲ್ಲಿ ಸಿಲುಕಿರುವುದಾಗಿ ಎಲ್ಲರೂ ಹೇಳಿದರು.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಎಲ್ಲರೂ ಬಾವುಟ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ಮಾಡಿದರು. ಚೀನಾ ವಿರುದ್ಧ ಹೆಚ್ಚಿದ ಅಸಮಾಧಾನ ಲಂಡನ್‌ನ ಬೀದಿಗಳಲ್ಲಿಯೂ ಕಾಣಿಸಿಕೊಂಡಿತು. ಶನಿವಾರ ರಾತ್ರಿ ಸೆಂಟ್ರಲ್ ಲಂಡನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯ ಕಟ್ಟಡದ ಮೇಲೆ ‘ಫ್ರೀ ಟಿಬೆಟ್, ಫ್ರೀ ಹಾಂಗ್ ಕಾಂಗ್, ಫ್ರೀ ಉಯಿಗರ್’ ಎಂಬ ಚಿತ್ರಗಳು ಕಂಡು ಬಂದವು.
ಹಾಂಗ್ ಕಾಂಗ್ ಜನರ ವಿರುದ್ಧ ಚೀನಾದ ‘ಕ್ರೂರ, ವ್ಯಾಪಕ ದಾಳಿಯನ್ನು’ ಇದೇ ಸಂದರ್ಭದಲ್ಲಿ ಖಂಡಿಸಲಾಯಿತು.
ಕರೊನಾ ಔಷಧವೆಂದು ಮದ್ಯ ಕೊಟ್ಟು ‘ದೇವಮಾನವ’ ಮಾಡುತ್ತಿದ್ದುದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − two =
Remember me
