ವೈದ್ಯರ ವೃತ್ತಿಪರ ನಡವಳಿಕೆ ಕುರಿತು ರಾಷ್ಟ್ರೀಯ ವೈದ್ಯಕೀಯ ಆಯೋಗವು ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಯಲ್ಲಿನ ಮಹತ್ವದ ಅಂಶವೊಂದಕ್ಕೆ ವೈದ್ಯ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ವೈದ್ಯರು ಯಾವುದೇ ಒಂದು ನಿರ್ದಿಷ್ಟ ಬ್ರ್ಯಾಂಡ್​ನ ಔಷಧಿಯ ಹೆಸರನ್ನು ಬರೆದುಕೊಡುವ ಬದಲಿಗೆ ಔಷಧಿಗಳ ಸಾಮಾನ್ಯ ಹೆಸರುಗಳನ್ನು (ಜೆನರಿಕ್ ನೇಮ್ ಬರೆದುಕೊಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಂದರೆ, ತಮ್ಮ ಬಳಿ ಚಿಕಿತ್ಸೆ ಬರುವ ರೋಗಿಗಳಿಗೆ ಜನೌಷಧವನ್ನು ಕಡ್ಡಾಯವಾಗಿ ಬಳಸಲು ಸೂಚಿಸಬೇಕು. ವೈದ್ಯಕೀಯ ಆಯೋಗದ ಈ ಮಾರ್ಗಸೂಚಿಗೆ ವೈದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ‘ಈ ಮಾರ್ಗಸೂಚಿಯು ಹಳಿಗಳಿಲ್ಲದೆ ರೈಲುಗಳನ್ನು ಓಡಿಸುವುದಕ್ಕೆ ಸಮಾನವಾಗಿದೆ’ ಎಂದು ದೇಶದ ವೈದ್ಯರ ಅತಿದೊಡ್ಡ ಸಂಘಟನೆಯಾದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹೇಳಿಕೆಯಲ್ಲಿ ಆಕ್ಷೇಪಿಸಿದೆ. ಜೆನರಿಕ್ ಔಷಧಿಗಳನ್ನು (ಜನೌಷಧಗಳನ್ನು) ಅರ್ಥಪೂರ್ಣವಾಗಿ ಉತ್ತೇಜಿಸಲು ಯಾವುದೇ ನೀತಿಯನ್ನು ಜಾರಿಗೊಳಿಸುವ ಮೊದಲು, ಎಲ್ಲ ಔಷಧ ತಯಾರಕರು ಗುಣಮಟ್ಟ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಐಎಂಎ ಹೇಳಿದೆ.
ಮಾರ್ಗಸೂಚಿಗಳಲ್ಲಿ ಏನಿದೆ?:ವೈದ್ಯರು ಔಷಧಿಯ ಸಾಮಾನ್ಯ ಹೆಸರನ್ನು ಮಾತ್ರ ಪ್ರಿಸ್ಕ್ರಿಪ್ಷನ್​ನಲ್ಲಿ ಬರೆಯಬಹುದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಉದಾಹರಣೆಗೆ, ವೈದ್ಯರು ಜ್ವರಕ್ಕೆ ಪ್ಯಾರಸಿಟಮಾಲ್ ಅನ್ನು ಶಿಫಾರಸು ಮಾಡಬೇಕಾಗುತ್ತದೆ. ಡೋಲೋ ಅಥವಾ ಕ್ಯಾಲ್ಪೋಲ್ ಎಂದು ಔಷಧ ಬ್ರಾ್ಯಂಡ್ ಹೆಸರನ್ನು ಬರೆಯುವ ಹಾಗಿಲ್ಲ. ಜೆನರಿಕ್ ಹೆಸರುಗಳನ್ನು ಬಳಸಿಕೊಂಡು ಔಷಧಿಗಳನ್ನು ರೋಗಿಗಳಿಗೆ ಸೂಚಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ.
ಡೋಸೇಜ್​ನಲ್ಲಿನ ಸಣ್ಣ ವ್ಯತ್ಯಾಸವಾದರೂ ಪ್ರತಿಕೂಲ ಪರಿಣಾಮ ಬೀರಬಹುದಾದ ಕೆಲವೊಂದು ಔಷಧಗಳ ಮೂಲಕ ನೀಡಲಾಗುವ ಚಿಕಿತ್ಸೆಗಳ ಸಂದರ್ಭದಲ್ಲಿ ಮಾತ್ರ ಇದಕ್ಕೆ ವಿನಾಯಿತಿಯನ್ನು ಮಾರ್ಗಸೂಚಿಯಲ್ಲಿ ನೀಡಲಾಗಿದೆ. ಬಯೋಸಿಮಿಲರ್​ಗಳು (ಜೀವಂತ ವ್ಯವಸ್ಥೆಗಳಲ್ಲಿ ತಯಾರಿಸಲಾಗುವ ಜೈವಿಕ ಉತ್ಪನ್ನಗಳ ವಿಭಿನ್ನ ಆವೃತ್ತಿ) ಮತ್ತು ಇತರ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಈ ಅಭ್ಯಾಸವನ್ನು ಸಡಿಲಗೊಳಿಸಲು, ವಿನಾಯಿತಿ ನೀಡಲು ಮಾರ್ಗಸೂಚಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಬಂಧಪಟ್ಟವರೊಂದಿಗೆ ಸಮಾಲೋಚಿಸದೆ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದೆ. ಹೀಗಾಗಿ, ವ್ಯಾಪಕ ಸಮಾಲೋಚನೆ ನಡೆಸಿದ ನಂತರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಮಾರ್ಗಸೂಚಿ ಜಾರಿಯನ್ನು ಕೇಂದ್ರ ಸರ್ಕಾರ ಮುಂದೂಡಬೇಕು ಎಂದು ಐಎಂಎ ಒತ್ತಾಯಿಸಿದೆ.
‘ಒಬ್ಬ ವ್ಯಕ್ತಿಯು ನಾನು ಶಿಫಾರಸು ಮಾಡಿದ ಜನೌಷಧಿಯನ್ನು ತೆಗೆದುಕೊಂಡು ಗುಣಮುಖನಾಗದಿದ್ದರೆ, ಆತ ನಂತರ ಔಷಧಾ ಲಯದಿಂದ ಬ್ರ್ಯಾಂಡ್ ಆವೃತ್ತಿಯನ್ನು ಖರೀದಿಸಿ ಗುಣಮುಖನಾದರೆ ಏನಾಗುತ್ತದೆ? ಇದು ನನ್ನ ಖ್ಯಾತಿಗೆ ಅಡ್ಡಿಯಾಗುತ್ತದೆ. ಆಸ್ಪತ್ರೆಗೆ ದಾಖಲಾದ ರೋಗಿಗಳ ಬಗ್ಗೆ ಏನು ಮಾಡುವುದು? ನಾನು ಅವರಿಗೆ ಜನೌಷಧಿ ನೀಡುತ್ತೇನೆ. ಅವರು ಗುಣಮುಖ ವಾಗುವುದಿಲ್ಲ. ಆಗ ರೋಗಿಗಳ ಕುಟುಂಬದವರು, ಯಾವುದಾದರೂ ಔಷಧಿಯಾಗಿದ್ದರೂ ನಾವು ಪಾವತಿಸಲು ಸಿದ್ಧರಿದ್ದೇವು ಎಂದು ಹೇಳುತ್ತಾರೆ. ಇದು ಹಿಂಸಾಚಾರಕ್ಕೆ ಕಾರಣವಾಗುತ್ತದೆ.
| ಡಾ. ಶರದ್ ಅಗರ್ವಾಲ್, ಐಎಂಎ ಅಧ್ಯಕ್ಷ
ಶೇ. 80ರವರೆಗೆ ಅಗ್ಗ:ಬ್ರಾ ್ಯಡೆಡ್ ಔಷಧಗಳಿಗೆ ಹೋಲಿಸಿದರೆ ಜನೌಷಧಿಗಳು ಸರಾಸರಿ ಶೇಕಡಾ 30 ರಿಂದ ಶೇಕಡಾ 80ರವರೆಗೆ ಅಗ್ಗವಾಗಿವೆ. ಹೀಗಾಗಿ, ಜನೌಷಧಗಳ ಬಳಕೆ ಮೂಲಕ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ ಎಂದೂ ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.
ಗುಣಮಟ್ಟಕ್ಕಿಲ್ಲ ಖಾತರಿ:ವೈದ್ಯರು ಮಾರ್ಗಸೂಚಿಗಳನ್ನು ವಿರೋಧಿಸಲು ಮುಖ್ಯ ಕಾರಣ ಜನೌಷಧಿಗಳ ಗುಣಮಟ್ಟ, ಜನೌಷಧಿಗಳ ದೊಡ್ಡ ಅಡಚಣೆಯೆಂದರೆ ಅದರ ಗುಣಮಟ್ಟದ ಕುರಿತ ಅನಿಶ್ಚಿತತೆ. ದೇಶದಲ್ಲಿ ಗುಣಮಟ್ಟದ ಔಷಧಿಗಳ ನಿಯಂತ್ರಣವು ತುಂಬಾ ದುರ್ಬಲವಾಗಿದೆ. ವಾಸ್ತವವಾಗಿ ಔಷಧಗಳ ಗುಣಮಟ್ಟಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಖಚಿತವಾದ ಗುಣಮಟ್ಟವಿಲ್ಲದೆ ಔಷಧಿಗಳನ್ನು ಶಿಫಾರಸು ಮಾಡುವುದು ರೋಗಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಐಎಂಎ ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ ಜನೌಷಧಿಗಳ ಗುಣಮಟ್ಟ ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವೈದ್ಯರು, ಔಷಧ ತಯಾರಕರು ಮತ್ತು ಸರ್ಕಾರ ಇವರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಕೇವಲ ಶೇಕಡಾ 0.1 ಔಷಧಿಗಳನ್ನು ಮಾತ್ರ ಗುಣಮಟ್ಟದ ತಪಾಸಣೆಗಾಗಿ ಪರೀಕ್ಷಿಸುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಔಷಧದ ಪ್ರತಿ ಬ್ಯಾಚ್ ಅನ್ನು ಪರೀಕ್ಷಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಔಷಧ ತಯಾರಕರು ಹೇಳುತ್ತಾರೆ. ಉತ್ತಮ ಉತ್ಪಾದನಾ ಅಭ್ಯಾಸಗಳನ್ನು ಅನುಸರಿಸಿ ವಿನ್ಯಾಸದ ಮೂಲಕ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬಹುದು ಎಂಬುದು ಅವರ ವಾದವಾಗಿದೆ. ಜನೌಷಧಗಳ ತಯಾರಿಕೆಗೆ ಅನುಮೋದನೆ ಪಡೆಯಲು ಕಂಪನಿಯು ಮಾಡಬೇಕಾದ ಪರೀಕ್ಷೆಗಳನ್ನು ಸಹ ಹಲವರು ಪ್ರಶ್ನಿಸುತ್ತಾರೆ. ಕೆಲವು ವರ್ಷಗಳ ಹಿಂದೆ, ಜನೌಷಧ ತಯಾರಿಸುವ ಕಂಪನಿಗಳಿಗೆ ಜೈವಿಕ ಸಮಾನತೆ ಅಥವಾ ಸ್ಥಿರತೆಯ ಅಧ್ಯಯನವನ್ನು ಕೈಗೊಳ್ಳುವುದು ಕಡ್ಡಾಯವಾಗಿರಲಿಲ್ಲ. ಜನೌಷಧವು ಬ್ರಾ್ಯಂಡೆಡ್ ಆವೃತ್ತಿಯಂತೆಯೇ ಅದೇ ಫಲಿತಾಂಶವನ್ನು ನೀಡುತ್ತದೆ ಎಂದು ಪರೀಕ್ಷಿಸಲು ಜೈವಿಕ ಸಮಾನತೆಯ ಅಧ್ಯಯನಗಳನ್ನು ಮಾಡಲಾಗುತ್ತದೆ. ನಿರ್ದಿಷ್ಟ ಪರಿಸರ, ಪರಿಸ್ಥಿತಿಗಳಲ್ಲಿ ಔಷಧದ ಗುಣಮಟ್ಟವು ಒಂದು ಅವಧಿಯಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ನೋಡಲು ಸ್ಥಿರತೆಯ ಅಧ್ಯಯನಗಳನ್ನು ಕೂಡ ಮಾಡಲಾಗುತ್ತದೆ. ಈ ಅಧ್ಯಯನಗಳಿಗೆ ಒಳಗಾಗದ ಔಷಧಿಗಳು ಮಾರುಕಟ್ಟೆಯಲ್ಲಿ ಇನ್ನೂ ಇವೆ ಎಂದು ಔಷಧೀಯ ವಲಯದ ತಜ್ಞರು ಕೂಡ ಒಪ್ಪಿಕೊಳ್ಳುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಪರೀಕ್ಷಿಸಲಾದ ಜೆನರಿಕ್, ಬ್ರಾಂಡೆಡ್ ಜೆನರಿಕ್ ಮತ್ತು ಬ್ರಾ ್ಯಡೆಡ್ ಔಷಧಿಗಳು ಸೇರಿದಂತೆ ಎಲ್ಲಾ ಔಷಧಿಗಳ ಪೈಕಿ ಅಂದಾಜು ಶೇಕಡಾ 3ರಷ್ಟು ಔಷಧಿಗಳು ಸೂಕ್ತ ಗುಣಮಟ್ಟವನ್ನು ಹೊಂದಿಲ್ಲ ಎಂದು ಕಂಡುಬಂದಿದೆ ಎಂಬುದನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳೇ ಸೂಚಿಸುತ್ತವೆ.
ಹೊಸ ಮಾರ್ಗಸೂಚಿಗಳು ನಿರ್ದಿಷ್ಟ ಬ್ರಾ ್ಯಡ್ ಅನ್ನು ಬರೆಯಲು ವೈದ್ಯರಿಗೆ ಅನುಮತಿಸುವುದಿಲ್ಲ, ಅಂದರೆ ಸಂಬಂಧಿತ ಸಕ್ರಿಯ ಘಟಕಾಂಶದೊಂದಿಗೆ ಫಾರ್ಮಸಿಯಲ್ಲಿ ಲಭ್ಯವಿರುವ ಯಾವುದೇ ಕಂಪನಿಯ ಔಷಧಿಯನ್ನು ರೋಗಿಗಳು ಪಡೆಯಬಹುದಾಗಿದೆ. ಒಂದು ವೇಳೆ ಫಾರ್ಮಸಿಯವರು ಔಷಧದ ಜೆನರಿಕ್ ಆವೃತ್ತಿಯನ್ನು ಹೊಂದಿಲ್ಲದಿದ್ದರೆ (ಕಡಿಮೆ ಲಾಭಾಂಶದ ಕಾರಣದಿಂದಾಗಿ ಔಷಧ ಅಂಗಡಿಗಳಲ್ಲಿ ಸಾಮಾನ್ಯವಾಗಿ ಜನೌಷಧಿಗಳನ್ನು ಸ್ಟಾಕ್ ಮಾಡಿರುವುದಿಲ್ಲ) ಬೇರಾವುದೇ ಬ್ರಾ ್ಯಡ್ ಔಷಧದೊಂದಿಗೆ ಅದನ್ನು ಬದಲಿಸುವ ಜವಾಬ್ದಾರಿಯು ವೈದ್ಯರ ಬದಲಿಗೆ ಔಷಧ ಅಂಗಡಿಯವರ ಮೇಲಿರುತ್ತದೆ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. ಎಷ್ಟು ಉತ್ತಮವಾಗಿವೆ ಎಂಬುದನ್ನು ಲೆಕ್ಕಿಸದೆಯೇ ಉತ್ತಮ ಲಾಭಾಂಶವನ್ನು ಹೊಂದಿರುವ ಬ್ರಾ್ಯಂಡ್​ಗಳನ್ನು ಮಾರಾಟ ಮಾಡಲು ಫಾರ್ಮಸಿಯವರನ್ನು ಉತ್ತೇಜಿಸಲು ಇದು ಕಾರಣವಾಗಬಹುದಾಗಿದೆ ಎಂದು ದೆಹಲಿ ವೈದ್ಯಕೀಯ ಕೌನ್ಸಿಲ್ ಅಧ್ಯಕ್ಷ ಡಾ ಅರುಣ್ ಗುಪ್ತಾ ಆತಂಕ ವ್ಯಕ್ತಪಡಿಸುತ್ತಾರೆ. ರೋಗಿಗೆ ಉತ್ತಮವೆಂದು ತಾವು ಭಾವಿಸುವ ಔಷಧಿಯನ್ನು ಶಿಫಾರಸು ಮಾಡುವ ಆಯ್ಕೆಯನ್ನು ಇದು ಮೊಟಕುಗೊಳಿಸುತ್ತದೆ ಎಂದೂ ವೈದ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಜನೌಷಧಿಗಳ ಗುಣಮಟ್ಟವು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಾಗುವ ಹಿನ್ನೆಲೆಯಲ್ಲಿ ಇದು ನಿಷ್ಪರಿಣಾಮಕಾರಿ ಚಿಕಿತ್ಸೆಗೆ ಕಾರಣವಾಗಬಹುದು ಎಂಬ ಆತಂಕವೂ ವೈದ್ಯರದ್ದಾಗಿದೆ.
ಆಣೆ ಮಾಡುವ ಹಂತಕ್ಕೆ ತಲುಪಿತು ಸೌಜನ್ಯಾ ಪ್ರಕರಣ; ಇಬ್ಬರ ಮಧ್ಯೆ ಆರೋಪ, ದೇವರ ಮುಂದೆ ಪ್ರಮಾಣ!

ನೇಲ್​ ಕಟರ್ ನುಂಗಿ ಮರೆತಿದ್ದ ವ್ಯಕ್ತಿ; 8 ವರ್ಷಗಳ ಮೇಲೆ ಹೊರತೆಗೆದ್ರು ಬೆಂಗಳೂರಿನ ವೈದ್ಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
