ಹೈದರಾಬಾದ್​:ಸಮಂತಾ ‘ಪುಷ್ಪ’ ಸಿನಿಮಾದಲ್ಲಿ ಐಟಂ ಸಾಂಗ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಆ ಹಾಡಿನ ಮೂಲಕ ಸಮಂತಾಗೆ ಭಾರೀ ಖ್ಯಾತಿಯೂ ಸಿಕ್ಕಿತ್ತು. ಈಗ ‘ಪುಷ್ಪಾ 2’ ಚಿತ್ರದಲ್ಲಿ ಅಂತಹ ಐಟಂ ಸಾಂಗ್ ಇದೆ ಎಂಬ ಸುದ್ದಿಯೊಂದು ವೈರಲ್ ಆಗಿದ್ದು, ಆ ಹಾಡಿನಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ದಿನದಿಂದ ದಿನಕ್ಕೆ ಕ್ರೇಜ್​ ಹೆಚ್ಚಾಗುವಂತೆ ಮಾಡುತ್ತಿದೆ. ಈ ಚಿತ್ರವನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶೂಟಿಂಗ್ ಕೂಡ ಶರವೇಗದಲ್ಲಿ ನಡೆಯುತ್ತಿದೆ. ‘ಪುಷ್ಪ’ ಮೊದಲ ಭಾಗದಲ್ಲಿ ಸಮಂತಾ ಅಭಿನಯದ ಐಟಂ ಸಾಂಗ್ ಭರ್ಜರಿ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಈಗ ಈ ಎರಡನೇ ಭಾಗದಲ್ಲೂ ಅಂಥದ್ದೇ ಐಟಂ ಸಾಂಗ್ ಇಡಲು ನಿರ್ಮಾಪಕ, ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಆದರೆ ಇತ್ತೀಚಿನವರೆಗೂ ದಿಶಾ ಪಟಾನಿ ಅಲ್ಲು ಅರ್ಜುನ್ ಜೊತೆ ಈ ಐಟಂ ಸಾಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಆ ಐಟಂ ಸಾಂಗ್‌ ನಲ್ಲಿ ನಟಿಸುತ್ತಿರುವುದು ಜಾನ್ವಿ ಕಪೂರ್‌ ಎಂದು ಹೇಳಲಾಗುತ್ತಿದೆ.
ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮೊದಲ ಭಾಗದಲ್ಲಿ ಐಟಂ ಸಾಂಗ್ ಜೊತೆಗೆ ಉಳಿದ ಹಾಡುಗಳೂ ಭಾರೀ ಹಿಟ್ ಆಗಿದ್ದವು.ಜಾಹ್ನವಿ ಕಪೂರ್ ಈ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡರೆ ಅವರ ತಾಯಿ ಶ್ರೀದೇವಿಗಿಂತ ಹೆಚ್ಚು ಜನಪ್ರಿಯರಾಗುತ್ತಾರೆ ಎಂಬ ಮಾತು ಉದ್ಯಮದಲ್ಲಿ ಕೇಳಿಬರುತ್ತಿದೆ. ಸದ್ಯ ಜಾಹ್ನವಿ ‘ದೇವರ’ ಚಿತ್ರದಲ್ಲಿ ಎನ್‌ಟಿಆರ್‌ಗೆ ಜೋಡಿಯಾಗಿ ನಟಿಸಿದ್ದು, ರಾಮ್ ಚರಣ್ ಜೊತೆ ಬುಚ್ಚಿ ಬಾಬು ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
‘400 ಸ್ಥಾನ ಗೆದ್ದು ಸಂವಿಧಾನ ಬದಲಿಸಲು ಹೊರಟಿದ್ದಾರೆ’..ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seventeen + eight =
Remember me
