ನವದೆಹಲಿ:ಜಾಹ್ನವಿ ಕಪೂರ್, ತನ್ನ ಫೋಟೋವನ್ನು ಎಡಿಟ್‍ ಮಾಡಿ ಸೊಂಟದ ಆಕಾರವನ್ನು ಇನ್ನಷ್ಟು ಸುಂದರವಾಗಿಸಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಎಡಿಟ್‍ ಮಾಡಿದ ಕುರುಹುಗಳನ್ನು ಪತ್ತೆಹಚ್ಚಿದ ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಈ ನಟಿಗೆ ‘ಸೊಂಟದ ವಿಷ್ಯ ಬ್ಯಾಡ’ ಎನ್ನುವವರು ಯಾರೂ ಇಲ್ಲವಾಗಿದ್ದಾರಾ ಎನ್ನುವ ಪ್ರಶ್ನೆ ಫೋಟೊ ನೋಡಿದಾಗ ಮೂಡುವುದಂತೂ ಸುಳ್ಳಲ್ಲ…

ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟು ನಿರ್ದಯವಾಗಿ ಟ್ರೋಲ್ ಮಾಡಲಾಗುತ್ತಿದೆ ಎಂದರೆ ನಟಿಯದ್ದು ಕುದುರೆ ಕಾಲು ಎಂದು ಕಾಲೆಳೆದಿದ್ದಾರೆ. ಜಾಹ್ನವಿ ಕಪೂರ್, ತನ್ನ ಮುಂಬರುವ ಚಿತ್ರ ಬವಾಲ್ ಪ್ರಚಾರದಲ್ಲಿ ನಿರತರಾಗಿದ್ದು ಈ ನಡುವೆಯೇ ಟ್ರೋಲಿಂಗ್‍ಗೆ ಒಳಗಾಗಿದ್ದಾರೆ.

ಚಲನಚಿತ್ರಗಳ ಪ್ರಚಾರ ಮಾಡುವುದು ಎಂದರೆ ಅದರಲ್ಲಿ ದೈನಂದಿನ ಘಟನೆಗಳು ಸೇರುತ್ತವೆ. ಅಂದರೆ ಚಿತ್ರೀಕರಣದ ನಂತರ ಹೊಸ ಉಡುಪುಗಳೊಂದಿಗೆ ಫೋಟೊ ಹೊಡೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದೂ ಒಂದು. ಎಂದಿನಂತೆ, ಅವರು ಇತ್ತೀಚಿನ ಚಿತ್ರೀಕರಣದ ಕೆಲ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಜಾಹ್ನವಿ ಕಪೂರ್ ಅವರ ಸೊಂಟವನ್ನು ಇನ್ನಷ್ಟು ತೆಳ್ಳಗಾಗಿ ಕಾಣುವಂತೆ ಎಡಿಟ್‍ ಮಾಡಲಾಗಿದೆ.

ಪೋಸ್ಟ್ ಮಾಡಿದ್ದ ಮೊದಲಿಗೆ ಹೆಚ್ಚಿನ ಜನರು ನಟಿಯ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡಿದ್ದರು. ಆದರೆ ಕೆಲವರು ನಟಿ ಬಳಸಿದ ಎಡಿಟಿಂಗ್ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದ್ದಾರೆ. ಕೆಲವರು “ಯಾರೋ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ” ಎಂದು ಜಾಹ್ನವ ಕಪೂರ್ ಅವರ ಫೋಟೋವನ್ನು ಪೋಸ್ಟ್ ಮಾಡುವಾಗ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ “ಅವಳ ಕಾಲು ಕುದುರೆಯ ಕಾಲುಗಳಂತೆ ಕಾಣುತ್ತದೆ. ಅವುಗಳು ಕೋಲಿನಂತೆ ತೆಳ್ಳಗಿವೆ” ಎಂದು ನಿರ್ದಯವಾಗಿ ಟ್ರೋಲ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, “ಅವರಿಗೆ ಎಡಿಟಿಂಗ್ ಯಾಕೆ ಬೇಕಿತ್ತು?” ಎಂದು ಪ್ರಶ್ನಿಸಿದ್ದಾರೆ.
ಜಾಹ್ನವಿ ಕಪೂರ್, ತಮ್ಮ ಸೊಂಟವನ್ನು ಇನ್ನಷ್ಟು ಚಿಕ್ಕದಾಗಿ ಕಾಣಿಸುವ ಪ್ರಯತ್ನವನ್ನು ಫೋಟೊಶಾಪ್‍ನಲ್ಲಿ ಮಾಡಿದ್ದಾರೆ. ಆದರೆ ಆ ಸಂದರ್ಭ, ಸೊಂಟದ ಹಿಂಭಾಗದಲ್ಲಿ ಕಾಣಿಸುತ್ತಿರುವ ಸೋಫಾದ ಕಾಲು ಕೂಡ ಬೆಂಡ್ ಆಗಿದೆ. ಸೋಫಾದ ಆ ಕಾಲಿಗೂ ಅದರ ಇನ್ನೊಂದು ಕಾಲು ಇರುವ ರೀತಿಗೂ ಸಾಮ್ಯತೆ ಇಲ್ಲ.
ಟ್ರೋಲ್‍ ಮಾಡಿ ಪೋಸ್ಟ್ ಮಾಡಿರುವ ಟ್ವೀಟ್‍ಗಳು ಹೀಗಿವೆ ನೋಡಿ:
Someone is going to lose their job.pic.twitter.com/ptOhPLJ0Wm— Aditi. (@Sassy_Soul_)July 15, 2023
Someone is going to lose their job.pic.twitter.com/ptOhPLJ0Wm
Someone is going to lose their job.pic.twitter.com/ptOhPLJ0Wm— Aditi. (@Sassy_Soul_)July 15, 2023
Someone is going to lose their job.pic.twitter.com/ptOhPLJ0Wm
Someone is going to lose their job.pic.twitter.com/ptOhPLJ0Wm— Aditi. (@Sassy_Soul_)July 15, 2023
Someone is going to lose their job.pic.twitter.com/ptOhPLJ0Wm
Highly edited pics . Not sure how these people maintain such a perfect body with pillate.— indrajit swain (@indrajeetswain)July 16, 2023
Highly edited pics . Not sure how these people maintain such a perfect body with pillate.
ಇನ್ನು ಜಾಹ್ನವಿ ಕಪೂರ್ ಅಪ್ಲೋಡ್‍ ಮಾಡಿದ್ದ ಚಿತ್ರ ಹೀಗಿದೆ ನೋಡಿ:


A post shared by Janhvi Kapoor (@janhvikapoor)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 6 =
Remember me
