ಮುಂಬೈ:ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪ್ರಸ್ತುತ ಶಿಖರ್ ಪಹಾರಿಯಾ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿನ ಚರ್ಚೆಯ ಪ್ರಕಾರ ಈಗ ಜಾಹ್ನವಿ ಮತ್ತು ಶಿಖರ್ ನಡುವೆ ಸಂಬಂಧವಿರುವುದು ಖಚಿತವಾದಂತಾಗಿದೆ.
ಇದನ್ನೂ ಓದಿ:ಶಮಿ ಯಶಸ್ಸೇ ನನಗೆ ಬಂಡವಾಳ! ಭಾರತಕ್ಕೆ ಒಳ್ಳೆಯದಾಗಲಿ ಆತನಿಗಲ್ಲ, ಮಾಜಿ ಪತ್ನಿಯ ಸ್ಫೋಟಕ ಹೇಳಿಕೆ
ಶಿಖರ್​ ಇತ್ತೀಚೆಗೆ ಸ್ಟಾರ್ ಮಕ್ಕಳು ಮತ್ತು ದೊಡ್ಡ ತಾರೆಗಳೊಂದಿಗೆ ಕಾಣಿಸಿಕೊಂಡ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಜಾಹ್ನವಿ ಮಾಡಿರುವ ಕಾಮೆಂಟ್‌ ಮತ್ತು ಅದಕ್ಕೆ ಶಿಕರ್​ ಪ್ರತಿಕ್ರಿಯಿಸಿರುವ ರೀತಿ ಗಮನಿಸಿದವರಿಗೆ “ಇಬ್ಬರ ನಡುವೆ ಖಂಡಿತವಾಗಿಯೂ ಏನೋ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿನ ಕಾಮೆಂಟ್​ಗಳ ಪ್ರಕಾರ ಶಿಖರ್ ಈಗ ಜಾಹ್ನವಿಯನ್ನು ತನ್ನ ಗೆಳತಿ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾನೆ ಎಂದು ಅಭಿಮಾನಿಗಳು ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಇವರಿಬ್ಬರು ಡೇಟಿಂಗ್​ನಲ್ಲಿದ್ದಾರೆಂಬ ವದಂತಿಗಳ ನಡುವೆ ಶಿಖರ್ ಈಗ ಅಧಿಕೃತವಾಗಿ ಜಾಹ್ನವಿ ಜೊತೆಗಿನ ಸಂಬಂಧವನ್ನು ಘೋಷಿಸಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಲಾಗಿರುವ ವೀಡಿಯೊದಲ್ಲಿ ಶಿಖರ್ ಬೇರೊಂದು ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅವಳು ಗುಲಾಬಿ ಉಡುಗೆ ಧರಿಸಿದ್ದಾಳೆ. ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಜಾಹ್ನವಿ, ‘ಈ ಹುಡುಗಿ ಯಾರು?’ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಿರುವ ಶಿಖರ್​ ‘ನಾನು ನಿಮ್ಮವನು ಮಾತ್ರ…’ ಎಂದು ಪ್ರತಿಕ್ರಿಯಿಸಿದ್ದಾನೆ. ಶಿಖರ್​ನ ಈ ಕಾಮೆಂಟ್ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.
ಇನ್ನು ಜಾಹ್ನವಿ ಮುಂದಿನ ಸಿನಿಮಾಗಾಗಿ ದಕ್ಷಿಣದತ್ತ ಮುಖ ಮಾಡಿದ್ದಾರೆ. ದೇವರಾ ಅವರ ಈ ಚಿತ್ರದಲ್ಲಿ ಜಾಹ್ನವಿ ಅಭಿನಯಿಸಲಿದ್ದು, ಜೂ.ಎನ್ ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ, ಈ ನಟಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಯೋಜನೆಯ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಬಾಬಿ – ನೀಲಂ ಸಂಬಂಧ ಮುರಿದುಬಿದ್ದಿದ್ದೇಕೆ? ನಟಿ ಹೆದರಿದ್ದು ಧರ್ಮೇಂದ್ರಗೇನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nine =
Remember me
