ನವದೆಹಲಿ:ಯೂನಿಕಾರ್ನ್​ ಸ್ಟೆಲ್​ ವ್ಯವಸ್ಥೆಯನ್ನು ಜಪಾನ್​ ತಯಾರಿಸಿದ್ದು, ಭಾರತ ತನ್ನ ಯುದ್ಧನೌಕೆಗಳಲ್ಲಿ ಬಳಸಲು ನಿರ್ಧರಿಸಿದೆ. ಚೀನಾ ಯುದ್ಧನೌಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಭಾರತ ಜಪಾನ್​ನಿಂದ ಯುನಿಕಾರ್ನ್ ರಕ್ಷಣಾ ವ್ಯವಸ್ಥೆಯನ್ನು ಆಮದು ಮಾಡಲು ಮುಂದಾಗಿದೆ. ಇದು ನೋಡಲು ಒಂದು ಕೊಂಬಿನಂತೆ ಕಾಣುತ್ತದೆ. ಹೀಗಾಗಿ ಇದನ್ನು ಯುನಿಕಾರ್ನ್​ ಎಂದು ಕರೆಯಲಾಗುತ್ತದೆ. ಇದು ಏನು ಮಾಡುತ್ತದೆ ಎಂದು ಕೇಳುತ್ತೀರಾ?
ಯುನಿಕಾರನ್​ ರಕ್ಷಣಾ ವ್ಯವಸ್ಥೆ ನೌಕೆಯನ್ನು ಶತ್ರುಗಳ ರೆಡಾರ್​​ನಿಂದ ನಾಪತ್ತೆ ಮಾಡಿಬಿಡುತ್ತದೆ! ಶತ್ರುಗಳಿಗೆ ಮಿಸೈಲ್ ಅಪ್ಪಳಿಸುವ ತನಕ ನೌಕೆ ಯಾವ ದಿಕ್ಕಿನಲ್ಲಿದೆ ಎಂದು ಗೊತ್ತಾಗುವುದಿಲ್ಲ. ಇದರಿಂದ ಭಾರತದ ನೌಕೆ ತನ್ನ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಶತ್ರುಗಳ ಮೇಲೆ ದಾಳಿ ಮಾಡಲು ಇದು ಸಹಾಯ ಮಾಡುತ್ತದೆ.
ಇಂಡೋ ಫೆಸಿಫಿಕ್​ ಹಾಗೂ ಅರೆಬಿಯನ್​ ಸಮುದ್ರದಲ್ಲಿ ಭಾರತದ ಹೆಚ್ಚಿನ ಸರಕು ಸಾಗಟವಾಗುತ್ತದೆ. ಇಲ್ಲಿ ಚೀನಾ ಅನೇಕ ಬಂದರುಗಳನ್ನು ನಿರ್ಮಿಸಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಚೀನಾದಿಂದ ರಕ್ಷಣೆ ಪಡೆಯಲು ಯೂನಿಕಾರ್ನ್​ ಸಹಾಯ ಮಾಡಲಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 9 =
Remember me
