ನವದೆಹಲಿ:ಅನಾರೋಗ್ಯದಿಂದ ಬಳಲುತ್ತಿರುವ ಜಪಾನ್​ ಪ್ರಧಾನಮಂತ್ರಿ ಶಿಂಜೋ ಅಬೆಯವರು ಆಗಸ್ಟ್​ 28ರಂದು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ. ಸುದೀರ್ಘ ಚಿಕಿತ್ಸೆ ಅಗತ್ಯ ಇರುವ ಕಾರಣಕ್ಕೆ ಪ್ರಧಾನಿ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಆಗಸ್ಟ್​ 28ರಂದು ಶಿಂಜೋ ಅಬೆ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಜಗತ್ತಿನ ಹಲವು ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಹಾಗೇ ಶೀಘ್ರವೇ ಗುಣಮುಖರಾಗಿ ಎಂದು ಹಾರೈಸಿದ್ದರು. ಅದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಟ್ವೀಟ್​ ಮಾಡಿ, ಆತ್ಮೀಯ ಸ್ನೇಹಿತ ಶಿಂಜೋ ಅಬೆ ಅವರ ಅನಾರೋಗ್ಯದ ಬಗ್ಗೆ ಕೇಳಲು ನೋವಾಗುತ್ತದೆ. ಅವರ ಬುದ್ಧಿವಂತಿಕೆ, ವೈಯಕ್ತಿಕ ಬದ್ಧತೆಗಳಿಂದ ಭಾರತ-ಜಪಾನ್​ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿತ್ತು ಎಂದು ಹೇಳಿದ್ದರು. ಹಾಗೇ ಅವರೊಂದಿಗೆ ಇದ್ದ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು.
ಇದೀಗ ಶಿಂಜೋ ಅವರು ಸೆಪ್ಟೆಂಬರ್​ 11ರಂದು ಪ್ರಧಾನಿ ಮೋದಿಯವರೊಂದಿಗೆ ತಾವು ಇರುವ ನಾಲ್ಕು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಸೆಲ್ಫಿಯನ್ನೂ ಪೋಸ್ಟ್​ ಮಾಡಿದ್ದಾರೆ. ಜಪಾನ್ ಭಾರತದೊಂದಿಗೆ ಸ್ವಾಧೀನ ಮತ್ತು ಕ್ರಾಸ್​ ಸರ್ವೀಸಿಂಗ್​ (ಎಸಿಎಸ್​ಎ) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಿಂದ ನಮ್ಮ ರಕ್ಷಣಾ ಪಡೆ ಮತ್ತು ಭಾರತೀಯ ಸೇನಾಪಡೆಗಳ ನಡುವಿನ ಸಹಕಾರ ಉತ್ತೇಜನಗೊಳ್ಳಲಿದೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡಲು ಭಾರತ ಮತ್ತು ಜಪಾನ್​​ಗಳಿಗೆ ಮೂಲಾಧಾರವಾಗಲಿದೆ ಎಂದು ಶಿಂಜೋ ಟ್ವೀಟ್ ಮಾಡಿದ್ದಾರೆ.
ಶಿಂಜೋ ಅವರು ಪೋಸ್ಟ್ ಮಾಡಿರುವ ತಮ್ಮಿಬ್ಬರ ಫೋಟೋಗಳನ್ನು ರೀಟ್ವೀಟ್ ಮಾಡಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಶಿಂಜೋ ಅವರ ಟ್ವೀಟ್​​ಗಳು ಭಾರತ-ಜಪಾನ್​ ನಡುವಿನ ಸ್ನೇಹದ ದೃಢತೆಗೆ ಸಾಕ್ಷಿಯಾಗಿವೆ. ಈ ಫೋಟೋಗಳಿಂದ ನಮ್ಮ ಹಳೆಯ ಮಾತುಕತೆಗಳು ನೆನಪಾದವು ಎಂದಿದ್ದಾರೆ. (ಏಜೆನ್ಸೀಸ್​)
インドとの物品役務相互提供協定に署名しました。これにより、自衛隊とインド軍との緊密な連携が促進され、日印両国が協力して、国際社会の平和と安全に積極的に貢献していく。その大きな礎となるものです。pic.twitter.com/aTbtYMvcaB
— 安倍晋三 (@AbeShinzo)September 11, 2020

さらには米国や豪州など普遍的価値を共有する国々と手を携えて、日本は、この地域と世界の平和と安定に、これからも大きな役割を果たしていかなければならない。そう考えています。pic.twitter.com/YHFLUAvIhL
— 安倍晋三 (@AbeShinzo)September 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 4 =
Remember me
