ನವದೆಹಲಿ:ವಾತಾವರಣದಲ್ಲಿರುವ ಕರೊನಾ ವೈರಸ್​ಗಳನ್ನು ನಿಗ್ರಹಿಸಲು ಒಝೋನ್​ ಪರಿಣಾಮಕಾರಿಯಾಗಿದೆ…!
ಜಪಾನ್​ನ ತಜ್ಞರು ಕಂಡುಕೊಂಡಿರುವ ಸತ್ಯವಿದು. ಮುಚ್ಚಿದ ಚೇಂಬರ್​ನಲ್ಲಿ ಕರೊನಾ ವೈರಸ್​ನ ಮಾದರಿಗಳನ್ನು ಬಳಸಿ ನಡೆಸಿದ ಪ್ರಯೋಗದಲ್ಲಿ ಈ ಫಲಿತಾಂಶ ಕಂಡು ಬಂದಿದೆ. ಓಝೋನ್​ ಅನಿಲವು ಕರೊನಾ ವೈರಸ್​ ಕಣಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದು ಗೊತ್ತಾಗಿದೆ.
ಇದರಿಂದ ಆಸ್ಪತ್ರೆಗಳಲ್ಲಿ ರೋಗಿಯ ತಪಾಸಣೆ ಕೊಠಡಿ ಹಾಗೂ ನಿರೀಕ್ಷಣಾ ಪ್ರದೇಶಗಳಲ್ಲಿನ ಸೋಂಕು ನಿವಾರಿಸಲು ಈ ವಿಧಾನ ಅತ್ಯಂತ ಪ್ರಶಸ್ತವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ;ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಫುಜಿಟಾ ಆರೋಗ್ಯ ವಿವಿಯ ತಜ್ಞರು ಈ ವಿಷಯ ತಿಳಿಸಿದ್ದಾರೆ. ಒಝೋನ್​ ಅನಿಲದ 0.05ದಿಂದ 0.1 ಪಿಪಿಎಂ ( ಪಾರ್ಟ್ಸ್​ ಪರ್​ ಮಿಲಿಯನ್​) ಪ್ರಮಾಣವು ಮಾನವರಿಗೆ ಹಾನಿಕಾರಕವಲ್ಲ. ಆದರೆ, ಕರೊನಾ ವೈರಸ್​ಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಚ್ಚಿದ ಚೇಂಬರ್​ನಲ್ಲಿ ಕರೊನಾ ವೈರಸ್​ಗಳನ್ನು ಬಿಟ್ಟು, ಒಝೋನ್​ ಅನಿಲವನ್ನು ಹರಿಸಲಾಗಿತ್ತು. ಕಡಿಮೆ ಪ್ರಮಾಣದಲ್ಲಿ 10 ತಾಸುಗಳವರೆಗೆ ಹರಿಸಿದ ಅನಿಲದಿಂದಾಗಿ ಕರೊನಾ ವೈರಸ್​ ಪ್ರಮಾಣ ಶೇ.90 ಕಡಿಮೆಯಾಗಿರುವುದು ಕಂಡುಬಂದಿದೆ. ನಿರಂತರವಾಗಿ ಕಡಿಮೆ ಪ್ರಮಾಣದಲ್ಲಿ ಓಜೋನ್​ ಅನಿಲ ಹರಿಸುತ್ತಿದ್ದರೆ ಕರೊನಾ ವೈರಸ್​ಗಳನ್ನು ನಿಯಂತ್ರಿಸಬಹುದು. ಜನರಿರುವ ಸಂದರ್ಭದಲ್ಲೂ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ;ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!
ಅದರಲ್ಲೂ ಹೆಚ್ಚಿನ ಆರ್ರ್ದತೆ ಇರುವ ಸನ್ನಿವೇಶದಲ್ಲಿ ಅಥವಾ ವಾತಾವರಣದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಅವರು ಹೇಳಿದ್ದಾರೆ.ಒಝೋನ್​ ಆಮ್ಲಜನಕದ ಮಾಲಿಕ್ಯೂಲ್​ ಆಗಿದ್ದು, ಹಲವು ವೈರಸ್​ಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಹೊಂದಿದೆ. ಈ ಹಿಂದೆಯೂ ಇದರ ಹೆಚ್ಚಿನ ಸಾಂದ್ರತೆ (1- 6 ಪಿಪಿಎಂ) ಕರೊನಾಗೆ ಮಾರಕವಾಗಲಿದೆ ಎಂಬುದು ಗೊತ್ತಾಗಿತ್ತು. ಆದರೆ, ಅದರಿಂದ ಮಾನವರಿಗೂ ಅಪಾಯ ಸಂಭವಿಸಬಲ್ಲದು ಎಂದು ಕಂಡುಕೊಳ್ಳಲಾಗಿತ್ತು.ವೈದ್ಯರು ಬಳಸಿದ ಪಿಪಿಇ ಕಿಟ್​ನ ಸೋಂಕು ನಿವಾರಣೆಗೆ ಒಝೋನ್​ ಬಳಸಬಹುದು ಎಂದು ಜಾರ್ಜಿಯಾ ತಾಂತ್ರಿಕ ಸಂಸ್ಥೆ ಸಂಶೋಧಕರು ಹೇಳಿದ್ದರು.
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × three =
Remember me
