ಪಂಜಾಬ್​:2002ರಲ್ಲಿ ಸುಖ್​ಪಾಲ್ ಸಿಂಗ್ ಎಂಬ ವ್ಯಕ್ತಿ ಜಪಾನ್ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಥೈಲಾಂಡ್​ನಲ್ಲಿ ಆಕೆಯನ್ನು ಮೊದಲ ಬಾರಿಗೆ ಭೇಟಿಯಾದ ಸಿಂಗ್, ಹೆಚ್ಚು ಸಮಯ ವ್ಯರ್ಥ ಮಾಡದೆ ತನ್ನ ಪ್ರೇಯಸಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲವೂ ಅಂದುಕೊಂಡಂತೆ ನಡೆಯದ ಹಿನ್ನಲೆ ಸುಖ್​ಪಾಲ್​ ಮತ್ತು ಅವರ ಪತ್ನಿ ಒಪ್ಪಂದದ ಮೇರೆಗೆ ಪರಸ್ಪರ ದೂರವಾದರು. ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ 2 ವರ್ಷದ ಮಗ ತನ್ನ ಹೆತ್ತವರಿಂದ ಅನಾಥನಾಗಿ, ಎಲ್ಲೋ ದೂರದಲ್ಲಿ ಬೆಳೆದು ಇಂದು 19 ವರ್ಷಗಳ ನಂತರ ತನ್ನ ತಂದೆಯನ್ನು ಸೇರಿದ್ದು ಇದೀಗ ನೋಡುಗರ ಕಣ್ಣನ್ನು ಒದ್ದೆ ಮಾಡಿದೆ.
ಇದನ್ನೂ ಓದಿ:ರೈತರಿಗೆ ನೀರಾವರಿ ಯೋಜನೆ ಕಲ್ಪಿಸಿದರೆ ಸ್ವಾಭಿಮಾನಿಗಳಾಗುತ್ತಾರೆ
ಮಗ ಮತ್ತು ಪತ್ನಿ ಜತೆ ಸಂಪರ್ಕ ಕಳೆದುಕೊಂಡ ಸುಖ್​ಪಾಲ್​ ಪಂಜಾಬ್​ನ ಅಮೃತ್​ಸರದಲ್ಲಿ ಉಳಿದುಕೊಂಡರು. ಅಂದಿನಿಂದ ಒಂದು ದಿನ ಕೂಡ ಮಗನನ್ನು ತಂದೆ ಕಾಣಲಿಲ್ಲ, ಪುತ್ರ ಅಪ್ಪನನ್ನು ನೋಡಲಿಲ್ಲ. ಜಪಾನ್​ನ​ ಟೋಕಿಯೋದಲ್ಲಿ ಜನಿಸಿದ ರಿನ್ ಟಕಾಹಟಾ, ಜನ್ಮ ಕೊಟ್ಟ ತಂದೆಯ ಮುಖ ನೋಡದೆ ಅವರ ಅನುಪಸ್ಥಿತಿಯಲ್ಲೇ ಬೆಳೆದರು. ಬೆಳೆದು ದೊಡ್ಡವನಾದ ರಿನ್,​ ಈಗಲಾದರೂ ನನ್ನಪ್ಪನ ಮುಖ ನೋಡುವ ಸಮಯ ಬಂದಿದೆ ಎಂದು ದೃಢವಾಗಿ ನಿರ್ಧರಿಸಿ ಭಾರತಕ್ಕೆ ಪ್ರಯಾಣಿಸಿದ್ದು, ಕಡೆಗೂ 19 ವರ್ಷಗಳ ನಂತರ ತಂದೆ ಸುಖ್​ಪಾಲ್​ರನ್ನು ಭೇಟಿಯಾಗಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
What a moment ❤️
Sukhpal Singh and his Japanese son Rin Takahata reunited after 19 years when Rin, inspired by a college assignment, traced his father to Amritsar, India. Rin was welcomed warmly by Sukhpal and his current family.pic.twitter.com/KExVBl6wwY
— Akashdeep Thind (@thind_akashdeep)August 24, 2024

ಅಪ್ಪ-ಮಗನ ಭಾವುಕ ಅಪ್ಪುಗೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೋಡುಗರ ಹೃದಯಸ್ಪರ್ಶಿಸಿದೆ. ಮಗನನ್ನು ಅಪ್ಪಿ, ಮುದ್ದಾಡಿದ ತಂದೆ ಸುಖ್​ಪಾಲ್​, ನನ್ನನ್ನು ನೋಡುವ ಸಲುವಾಗಿ ನನ್ನ ಪುತ್ರ ಅಷ್ಟು ದೂರದಿಂದ ಬಂದಿದ್ದಾನೆ. ನನ್ನು ಫೋಟೋ ಹಿಡಿದು ಜನರ ಬಳಿ ಕೇಳುತ, ನಿರಂತರವಾಗಿ ಹುಡುಕುತ ಕಡೆಗೂ ನನ್ನ ಸೇರಿದ್ದಾನೆ. ಇದು ನಿಜಕ್ಕೂ ಕನಸೋ ಅಥವಾ ನನಸೋ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).
ಇವರೇ ನೋಡಿ ಆಲ್ಕೋಹಾಲ್​ ಮುಟ್ಟದ ಟೀಮ್ ಇಂಡಿಯಾದ ಮೂವರು ಸ್ಟಾರ್​ ಕ್ರಿಕೆಟಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 6 =
Remember me
