ಜಪಾನ್​(ಟೋಕಿಯೋ): ಜಪಾನ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಕಳೆದ ಕೆಲ ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ. ಆದರೆ ಸತತ 3ನೇ ಬಾರಿಯೂ ಜಪಾನ್ ಲ್ಯಾಂಡರ್ ಉಡಾವಣೆ ರದ್ದು ಮಾಡಿದೆ. ಉಡಾವಣೆಗೂ 30 ನಿಮಿಷ ಮೊದಲು ಜಪಾನ್ ತನ್ನ ಉಡಾವಣೆಯನ್ನು ರದ್ದುಗೊಳಿಸಿದೆ.
ಚಂದ್ರನ ಮೇಲೆ ಲ್ಯಾಂಡ್ ಇಳಿಸುವ ಈ ಯೋಜನೆಗೆ ಜಪಾನ್ ಮೂನ್‌ ಸ್ನೈಪರ್‌ ಎಂದು ಹೆಸರಿಟ್ಟಿತ್ತು. ಇಂದು(ಆ.28) ಬೆಳಿಗ್ಗೆ 5.25ರ (ಭಾರತೀಯ ಕಾಲಮಾನ)ವೇಳೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ತೀವ್ರ ಗಾಳಿ ಹಾಗೂ ಪ್ರಕ್ಷುಬ್ದ ವಾತಾವರಣ ಕಾರಣದಿಂದ ಜಪಾನ್ ಉಡಾವಣೆ ರದ್ದು ಮಾಡಿದೆ.
ಚಿಕ್ಕ ಲ್ಯಾಂಡರ್​​ ಚಂದ್ರನ ಮೇಲೆ ಇಳಿಸಿ ದಾಖಲೆ ನಿರ್ಮಿಸಲು ಜಪಾನ್​ ಮುಂದಾಗಿದ್ದು, ಚಂದ್ರನ ಮೇಲೆ ಇಳಿದ 5ನೇ ದೇಶ ಅನ್ನೋ ಕೀರ್ತಿ ಪಡೆಯುವ ಗುರಿಯನ್ನೂ ಜಪಾನ್​ ಹೊಂದಿತ್ತು.
ಹವಾಮಾನದ ಕಾರಣದಿಂದಾಗಿ ಮೂನ್​ ಸ್ನೈಪರ್​​ ಯೋಜನೆಯನ್ನ ಈ ಹಿಂದೆಯೂ ಮುಂದೂಡಲಾಗಿತ್ತು. ಮೂನ್ ಸ್ನೈಪರ್ ಚಂದ್ರನ ಮೇಲೆ ತಲುಪಲುಬರೋಬ್ಬರಿ 4 ರಿಂದ 6 ತಿಂಗಳು ಬೇಕಿತ್ತು. ಈ ಯೋಜನೆ ಅಂಗೈ ಅಗಲದ ರೋವರ್‌ ಮಾತ್ರ ಹೊಂದಿದ್ದು, ಇದು ಚಂದ್ರನ ಮೇಲಿರುವ ವಸ್ತುಗಳನ್ನು ಅಧ್ಯಯನ ಮಾಡುವ ಚಂದ್ರನ ಉಗಮವನ್ನು ಪತ್ತೆ ಮಾಡಲಿದೆ ಎಂದು ಸಂಸ್ಥೆ ಮಾಹಿತಿಯನ್ನೂ ನೀಡಿದೆ.
ಸಣ್ಣ ಸಣ್ಣ ಲ್ಯಾಂಡರ್‌ಗಳನ್ನು ಮಂಗಳ ಸೇರಿದಂತೆ ಇತರ ಗ್ರಹಗಳು ಮೇಲೆ ಜಪಾನ್ ಉಡಾವಣೆ ಮಾಡಿದೆ. 46 ಪ್ರಯತ್ನದಲ್ಲಿ 45 ಪ್ರಯತ್ನಗಳು ಯಶಸ್ವಿಯಾಗಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಲೇ ಇದೆ.
ಹವಾಮಾನ ಕಾರಣದಿಂದ ಉಡಾವಣೆಗೆ 30 ನಿಮಿಷ ಮೊದಲು ರದ್ದು ಮಾಡಲಾಗಿದೆ. ಮುಂದಿನ ಉಡಾವಣೆ ದಿನಾಂಕ ಶೀಘ್ರದಲ್ಲೇ ಘೋಷಿಸಲಾಗುತ್ತದೆ. ಇಂಧನ ತುಂಬಿಸುವುದು, ಸೇರಿದಂತೆ ಇತರ ಕೆಲಸಗಳು ನಡೆಯುತ್ತಿದೆ. ಸೆಪ್ಟೆಂಬರ್ 15ರ ವೇಳೆಗೆ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಜಪಾನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಲು 2022ರಲ್ಲೂ ಜಪಾನ್‌ ಪ್ರಯತ್ನ ಮಾಡಿ ವಿಫಲವಾಗಿತ್ತು.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
