ಟೋಕಿಯೊ:ಚಂದ್ರಯಾನಕ್ಕೆ ಸಂಗಾತಿ ಬೇಕು ಎಂದಿದ್ದ ಜಪಾನಿನ ಬಿಲಿಯನೇರ್​ ​ಯುಸಾಕು ಮೇಜಾವಾ, ಈಗ ಯೂಟರ್ನ್​ ಹೊಡೆದಿದ್ದಾರೆ.
2023ರಲ್ಲಿ ಚಂದ್ರಯಾನಕ್ಕೆ ತೆರಳಲು ಸಂಗಾತಿ ಬೇಕು ಎಂದು ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದರು. 20 ವರ್ಷದ ಯುವತಿಯರಿಗಾಗಿ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿ 28 ಸಾವಿರ ಯುವತಿಯರು ಅರ್ಜಿ ಸಲ್ಲಿಸಿದ್ದಾರೆ. ಅದಕ್ಕಾಗಿ ತಾವು ನೀಡಿದ್ದ ಆಹ್ವಾನವನ್ನು ವಾಪಸ್​ ಪಡೆದಿದ್ದಾರೆ.
ಇದನ್ನೂ ಓದಿ:ಚಂದ್ರಯಾನಕ್ಕೆ ತೆರಳಲು ಸಂಗಾತಿ ಬೇಕಾಗಿದ್ದಾಳೆ: ಅರ್ಜಿ ಸಲ್ಲಿಸಲು ಜನವರಿ 17 ಕೊನೇ ದಿನ!
ಇದರ ಬಗ್ಗೆ ಯುಸಾಕು ಮೇಜಾವಾ, ಹೀಗೆ ಅರ್ಜಿ ಕರೆದು ವಾಪಸ್​ ಪಡೆಯಲು ಅತ್ಯಂತ ಪಶ್ಚಾತಾಪವಾಗುತ್ತಿದೆ. ಅರ್ಜಿ ಹಾಕಿದವರು ಮತ್ತು ಅಬೆಮಾ ಟಿವಿಗೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. ಮೇಜಾವಾ ಅವರ ಚಂದ್ರಯಾನದ ಬಗ್ಗೆ ಅಬೆಮಾ ಟಿವಿ ಕಾರ್ಯಕ್ರಮವೊಂದನ್ನು ತಯಾರು ಮಾಡುತ್ತಿತ್ತು.
2023ರಲ್ಲಿ ಎಲೋನ್ ಮಸ್ಕ್‌ ಎಂಬಲ್ಲಿನ ಸ್ಪೇಸ್‌ಎಕ್ಸ್‌ನಿಂದ ಯುಸಾಕು ಮೇಜಾವಾ ಅವರು ಮೊದಲ ಖಾಸಗಿ ಪ್ರಯಾಣಿಕನಾಗಿ ಚಂದ್ರನ ಸುತ್ತ ಹಾರಾಟ ನಡೆಸಲಿದ್ದರು. ಈ ಬಗ್ಗೆ ಅಬೆಮಾ ಟಿವಿ ಕಾರ್ಯಕ್ರಮವೊಂದನ್ನು ತಯಾರಿಸಲಿದ್ದು, ಆ ಕಾರ್ಯಕ್ರಮಕ್ಕೆ “ಫುಲ್​ ಮೂನ್​ ಲವರ್ಸ್​” ಎಂದು ಹೆಸರಿಸಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
