ನವದೆಹಲಿ:ಹೋಳಿ ಹಬ್ಬದಂದು ದೆಹಲಿಯಲ್ಲಿ ಜಪಾನಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಮಹಿಳೆ ಈವರೆಗೆ ದೂರು ದಾಖಲಿಸಿಲ್ಲ. ಅದಲ್ಲದೇ ನಿನ್ನೆ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಜಪಾನಿ ಯುವತಿ, ದೆಹಲಿಯ ಪಹರ್‌ಗಂಜ್‌ನಲ್ಲಿ ತಂಗಿದ್ದರು. ಮೂವರು ಆರೋಪಿಗಳು, ಒಬ್ಬ ಬಾಲಾಪರಾಧಿ ಕೂಡ ಅದೇ ಪ್ರದೇಶದವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ
ಮಹಿಳೆ ತಾನು ಬಾಂಗ್ಲಾದೇಶ ತಲುಪಿದ್ದು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಜನರು ಕರೆ ನೀಡಿದ್ದಾರೆ. ವೈರಲ್​ ಆಗಿರುವ ವಿಡಿಯೊದಲ್ಲಿ, ಕೆಲ ಯುವಕರು ಆ ಮಹಿಳೆಯನ್ನು ಹಿಡಿದುಕೊಂಡು “ಹೋಳಿ ಹೈ” ಎಂಬ ಘೋಷಣೆಗಳ ನಡುವೆ ಬಣ್ಣಗಳನ್ನು ಬಳಿಯುತ್ತಿದ್ದಾರೆ.
ಇದನ್ನೂ ಓದಿ:ಗಿನ್ನೆಸ್​ ದಾಖಲೆ | ಅವಳಿ ಸೋದರಿಯರ ನಡುವೆ 2.5 ಅಡಿ ಅಂತರ!
ಒಬ್ಬ ಹುಡುಗ ಅವಳ ತಲೆಯ ಮೇಲೆ ಮೊಟ್ಟೆಯನ್ನು ಒಡೆದು ಹಾಕುತ್ತಿರುವುದನ್ನು ಸಹ ಕಾಣಬಹುದು. ಅವಳು ಅಂತಿಮವಾಗಿ ದೂರ ಸರಿಯುವ ಮೊದಲು ತನ್ನನ್ನು ಹಿಡಿದಿಡಲು ಪ್ರಯತ್ನಿಸುವ ವ್ಯಕ್ತಿಗೆ ಅವಳು ಕಪಾಳಮೋಕ್ಷ ಮಾಡುತ್ತಾಳೆ. ಆ ವಿಡಿಯೋದ ಕೊನೆಗೆ ಆ ಮಹಿಳೆಯು ಈ ಕಿರಾತಕರ ದೌರ್ಜನ್ಯಕ್ಕೆ ಸುಸ್ತಾಗಿ ಹೋಗಿರುವುದು ವಿಡಿಯೋದಲ್ಲ ಕಾಣಬಹುದು.
ಇದನ್ನೂ ಓದಿ:ಚಂದ್ರಯಾನಕ್ಕೆ ಸಂಗಾತಿ ಬೇಕು ಎಂದಿದ್ದ ಜಪಾನಿನ ಬಿಲಿಯನೇರ್​ ಯುಸಾಕು ಮೇಜಾವಾ ಯೂಟರ್ನ್​
ಸ್ಥಳೀಯ ಗುಪ್ತಚರರ ಮೂಲಕ ಆರೋಪಿಗಳನ್ನು ಗುರುತಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಜಪಾನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.(ಏಜೆನ್ಸೀಸ್)
今バングラデシュに到着しました。知らぬ間に大変な事態になってしまい、大変申し訳ございませんでした。私は心身共に大丈夫です。また、説明などは、明日ツイートさせていただきます。— 🇮🇳めぐみこ (@megumiko_india)March 10, 2023
今バングラデシュに到着しました。知らぬ間に大変な事態になってしまい、大変申し訳ございませんでした。私は心身共に大丈夫です。また、説明などは、明日ツイートさせていただきます。
I have just arrived in Bangladesh. I'm really sorry that I didn't know it was a serious situation. I am fine in mind and body. I will explain more tomorrow.— 🇮🇳めぐみこ (@megumiko_india)March 10, 2023
I have just arrived in Bangladesh. I'm really sorry that I didn't know it was a serious situation. I am fine in mind and body. I will explain more tomorrow.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × four =
Remember me
