ಸೂರತ್​:ಎರಡೂವರೆ ವರ್ಷದ ಮಗುವೊಂದು ತಾನು ಉಸಿರು ನಿಲ್ಲುಸುವುದಕ್ಕೂ ಮೊದಲು ಏಳು ಮಕ್ಕಳಿಗೆ ಜೀವ ನೀಡಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಮಗುವಿನ ಅಂಗಾಂಗಳನ್ನು ಏಳು ಮಕ್ಕಳಿಗೆ ದಾನ ಮಾಡಲಾಗಿದ್ದು, ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಆತ ಹೊರಹೊಮ್ಮಿದ್ದಾನೆ.
ಇದನ್ನೂ ಓದಿ:ಹಾಸಿಗೆಯಲ್ಲೇ ಮೂತ್ರ ಮಾಡಿದ ಮಗ; ಸಿಟ್ಟಿಗೆದ್ದ ಅಪ್ಪ ಮಗನ ಕಥೆಯನ್ನೇ ಮುಗಿಸಿದ!
ಸೂರತ್​ನ ಸಂಜೀವ್​ ಓಜಾ ಮತ್ತು ಅರ್ಚನಾ ಅವರ 2.5 ವರ್ಷ ವಯಸ್ಸಿನ ಮಗ ಜಾಶ್​ ಓಜಾ ಡಿಸೆಂಬರ್​ 9ರಂದು ಸಂಬಂಧಿಕರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದನು. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವವಾದ ಹಿನ್ನೆಲೆ ಬಾಲಕನ ಮೆದುಳು ಡಿಸೆಂಬರ್​ 14ರಂದು ಕೆಲಸ ನಿಲ್ಲಿಸಿದೆ. ಬಾಲಕನಲ್ಲಿ ಉಸಿರಾಟವಿತ್ತಾದರೂ ಆತನ ಮೆದುಳು ಸಂಪೂರ್ಣ ಸ್ತಬ್ಧವಾಗಿದೆ.
ಮಗ ಇನ್ನು ಬದುಕುವುದಿಲ್ಲ ಎನ್ನುವುದು ತಿಳಿದ ನಂತರ ಸಂಜೀವ್​ ದಂಪತಿ ಆತನ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಅದರಂತೆ ಮಗುವಿನ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್​, ಕಣ್ಣನ್ನು ದಾನ ಮಾಡಲಾಗಿದೆ.
ಇದನ್ನೂ ಓದಿ:ಕಬ್ಬಿನ ಗದ್ದೆಯಲ್ಲಿ ಕೊಳೆತ ಶವ ಪತ್ತೆಯಾದ ಬೆನ್ನಲ್ಲೇ ಅತ್ತಿಗೆ-ಮೈದುನನ ಮೈಯಲ್ಲಿ ಶುರುವಾಯ್ತು ನಡುಕ!
ಶ್ವಾಸಕೋಶ ಮತ್ತು ಹೃದಯವನ್ನು ಸೂರತ್​ನಿಂದ 160 ಕಿ.ಮೀ ದೂರದ ಚೆನ್ನೈಗೆ ಹೆಲಿಕಾಫ್ಟರ್​ ಮೂಲಕ ಸಾಗಿಸಲಾಗಿದೆ. ರಷ್ಯಾದ ನಾಲ್ಕು ವರ್ಷದ ಮಗುವಿಗೆ ಜಾಶ್​ನ ಹೃದಯವನ್ನು ಅಳವಡಿಸಲಾಗಿದೆ. ಉಕ್ರೇನ್​ನ ನಾಲ್ಕು ವರ್ಷದ ಮಗುವಿಗೆ ಜಾರ್ಶ್ನ ಶ್ವಾಸಕೋಶಗಳನ್ನು ಕಸಿ ಮಾಡಲಾಗಿದೆ. ಮೂತ್ರಪಿಂಡಗಳನ್ನು 265 ಕಿ.ಮೀ ದೂರದ ಅಹಮದಾಬಾದ್​ಗೆ ರವಾನಿಸಲಾಗಿದ್ದು, ಅಲ್ಲಿ 13 ವರ್ಷ ಮತ್ತು 17 ವರ್ಷದ ಇಬ್ಬರು ಬಾಲಕಿಯರಿಗೆ ಕಸಿ ಮಾಡಲಾಗಿದೆ. ಎರಡು ವರ್ಷದ ಬಾಲಕಿಗೆ ಜಾಶ್​ನ ಯಕೃತ್​​ನ್ನು ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)
ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

ಯಾರದ್ದೋ ಕಿರುಕುಳಕ್ಕೆ ಹೆದರಿ ದಂಪತಿ ನಾಪತ್ತೆ! 3 ಲಕ್ಷ ಡ್ರಾ ಮಾಡಿದವರು ಡೆತ್​ ನೋಟ್​ ಬರೆದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
