ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮುಖ ಸಂಸ್ಥೆಯಾದ, ಪುದುಚೆರಿಯ ಜವಾಹರ್​ಲಾಲ್​ ಇನ್​ಸ್ಟಿಟ್ಯೂಟ್​ ಆಫ್​​ ಪೋಸ್ಟ್​ ಗ್ರಾಜುಯೇಟ್​ ಮೆಡಿಕಲ್​ ಎಜುಕೇಷನ್​ ಆ್ಯಂಡ್​ ರಿಸರ್ಚ್​ (ಜೆಐಪಿಎಂಇಆರ್​) ನಲ್ಲಿ ಬೋಧಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅನಾಟಮಿ, ಬಯೋಕೆಮಿಸ್ಟ್ರಿ, ಫಿಸಿಯಾಲಜಿ, ಪೆಥಾಲಜಿ ಮತ್ತು ಲ್ಯಾಬ್​ ಮೆಡಿಸಿನ್​, ಫಾರ್ಮಾಕೋಲಜಿ, ಕಮ್ಯೂನಿಟಿ ಆ್ಯಂಡ್​ ಫ್ಯಾಮಿಲಿ ಮೆಡಿಸಿನ್​, ಫೊರೆನ್ಸಿಕ್​ ಮೆಡಿಸಿನ್​ ಆ್ಯಂಡ್​ ಟಾಕ್ಸಿಕೋಲಜಿ, ಮೈಕ್ರೋಬಯಾಲಜಿ, ಪೀಡಿಯಾಟ್ರಿಕ್ಸ್​, ಜನರಲ್​ ಮೆಡಿಸಿನ್​, ಜನರಲ್​ ಸರ್ಜರಿ, ಒಬಿಜಿ, ಒಪ್ತಲ್ಮಾಲಜಿ, ಆಥೋರ್ಪೆಡಿಕ್ಸ್​, ಇಎನ್​ಟಿ, ರೇಡಿಯೋಡಯಾಗ್ನಸಿಸ್​ ವಿಭಾಗಗಳಲ್ಲಿಪ್ರಾಧ್ಯಾಪಕ &6, ಹೆಚ್ಚುವರಿ ಪ್ರಾಧ್ಯಾಪಕ&13, ಸಹ ಪ್ರಾಧ್ಯಾಪಕ&11 ಹಾಗೂ ಸಹಾಯಕ ಪ್ರಾಧ್ಯಾಪಕ & &23 ಹುದ್ದೆಗಳಿವೆ.
ವೈದ್ಯಕೀಯ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟೋರಲ್​ ಪದವಿ ಆಗಿರಬೇಕು. ಬೋಧನೆ ಹಾಗೂ ಸಂಶೋಧನಾ ಅನುಭವ ಹೊಂದಿರಬೇಕು. ಗುತ್ತಿಗೆ ಅವಧಿ 11 ತಿಂಗಳು. ಮಾಸಿಕ ಗೌರವ ಧನ ಪ್ರಾಧ್ಯಾಪಕ ಹುದ್ದೆಗೆ 2,20,000 ರೂ., ಹೆಚ್ಚುವರಿ ಪ್ರಾಧ್ಯಾಪಕ ಹುದ್ದೆಗೆ 2 ಲಕ್ಷ ರೂ., ಸಹ ಪ್ರಾಧ್ಯಾಪಕ ಹುದ್ದೆಗೆ 1,88,000 ರೂ. ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 1,42,506 ಇರುತ್ತದೆ.
ವಯೋಮಿತಿ ಪ್ರಾಧ್ಯಾಪಕ ಹಾಗೂ ಹೆಚ್ಚುವರಿ ಪ್ರಾಧ್ಯಾಪಕ ಹುದ್ದೆಗೆ 58 ವರ್ಷ ಹಾಗೂ ಇನ್ನುಳಿದ ಹುದ್ದೆಗಳಿಗೆ 50 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್​ಸಿ,ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋ ಸಡಿಲಿಕೆ ಇದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನ ನಡೆಸಲಾಗುತ್ತದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ ಹಾಗೂ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 250 ರೂ.
ಅರ್ಜಿ ಶುಲ್ಕವಿರುತ್ತದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯ ಅಜಿರ್ಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಏಪ್ರಿಲ್​ 27 ರೊಳಗೆ ಕಳುಹಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
