ಬೆಂಗಳೂರು:ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಜೆಎನ್​ಯು ಮರುನಾಮಕರಣದ ಚರ್ಚೆಗೆ ಕಿಚ್ಚು ಹಚ್ಚಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಎಂದು ಜೆಎನ್​ಯು ಮರುನಾಮಕರಣವಾಗಲಿ ಎಂಬ ಸಲಹೆಯನ್ನು ದೇಶದ ಜನರ ಮುಂದೆ ಇರಿಸಿದ್ದಾರೆ.
ಭಾರತ ಎಂಬ ಪರಿಕಲ್ಪನೆಯ ಹಿಂದಿರುವ ಮಹಾಪುರುಷ ಸ್ವಾಮಿ ವಿವೇಕಾನಂದ. ಅವರ ತತ್ತ್ವಶಾಸ್ತ್ರ ಮತ್ತು ಮೌಲ್ಯಾದರ್ಶನಗಳೇ ಭಾರತದ ಬಲ, ಶಕ್ತಿ. ಹೀಗಾಗಿ ಜವಹರಲಾಲ್ ನೆಹರೂ ಯೂನಿವರ್ಸಿಟಿಯನ್ನು ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಎಂದು ನಾಮಕರಣಮಾಡುವುದೇ ಸರಿಯಾದ ವಿಚಾರ. ರಾಷ್ಟ್ರಪ್ರೇಮಿ ಸಂತನ ಜೀವನ ತಲೆಮಾರುಗಳ ತನಕ ಪ್ರೇರಣೆ ನೀಡಲಿ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:VIDEO| ಪೂಜೆ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ​ಶಾಸಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!
ಅವರ ಈ ಟ್ವೀಟ್​ ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೇವಲ ಮರುನಾಮಕರಣದಿಂದ ಪ್ರಯೋಜನವಾಗುವುದಿಲ್ಲ. ಅಲ್ಲಿನ ಮೂಲ ವ್ಯವಸ್ಥೆಯನ್ನೇ ಪರಿಷ್ಕರಿಸಬೇಕು. ಆ ಯೂನಿವರ್ಸಿಟಿಯ ಪುನರುತ್ಥಾನವಾಗಬೇಕು. ಪಠ್ಯದಿಂದ ಹಿಡಿದು ಪ್ರತಿಯೊಂದೂ ಬದಲಾಗಬೇಕು. ಇಲ್ಲದೇ ಇದ್ದರೆ ಮರುನಾಮಕರಣ ಮಾಡಿದರೂ ಅದು ಸಂತರಿಗೆ ಮಾಡಿದ ಅವಮಾನವಾದೀತು ಎಂದು ಕೆ.ಸೆಂಥಿಲ್ ಕುಮಾರ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.
I beg to differ Ji.
Unless the entire set up of JNU changed – including cariculam, faculty, students composition, election rules, naming the university with Swamiji is insult to Him.
— K.SENTHIL KUMAR (@KSENTHI15551450)November 16, 2020

ಬಿಹಾರಕ್ಕೆ ಹೊಸ ಸರ್ಕಾರ: ನಿತೀಶ್ ಸಿಎಂ, ತಾರಕಿಶೋರ್, ರೇಣುದೇವಿ ಡಿಸಿಎಂ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × two =
Remember me
