ಜಮ್ಮು:ಭಾರತೀಯ ಯೋಧರೇ ಹಾಗೆ. ತಮ್ಮ ಜೀವವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ರಕ್ಷಕರು.
ಅಂಥದ್ದೇ ಒಂದು ಮನಕಲಕುವ ಘಟನೆ ಇಂದು ಜಮ್ಮುವಿನ ನೋಪೋರೆ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಆ ಘಟನೆ ಭಾರಿ ವೈರಲ್‌ ಆಗಿದೆ.
ಆಗಿದ್ದೇನೆಂದರೆ, ಈ ಪ್ರದೇಶದಲ್ಲಿ ಭಾರತೀಯ ಯೋಧರು ಮತ್ತು ಉಗ್ರರ ನಡುವೆ ಮುಖಾಮುಖಿ ಘರ್ಷಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯಾಗಿರುವ ಮೂರು ವರ್ಷದ ಮಗುವೊಂದು ಆಕಸ್ಮಿಕವಾಗಿ ಓಡೋಡಿ ಬಂದು ಬಿಟ್ಟಿದೆ.
ಅತ್ತ ಕಡೆಯಿಂದ ಉಗ್ರರು ಗುಂಡು ಹಾರಿಸುತ್ತಲೇ ಇದ್ದರು. ಅವರಿಗೆ ಮಗುವಾದರೇನು? ಯಾರಾದರೇನು? ಪ್ರಾಣ ತೆಗೆಯುವುದೇ ಅವರ ಕೆಲಸವಲ್ಲವೆ? ಆದರೆ ಭಾರತೀಯ ಯೋಧರು ಆ ಮಗುವನ್ನು ನೋಡಿದ್ದಾರೆ. ಇನ್ನು ಅರೆಕ್ಷಣವಾದರೂ ಉಗ್ರರ ಗುಂಡು ಆ ಮಗುವಿನ ಎದೆ ಸೀಳುವ ಹಂತದಲ್ಲಿತ್ತು.
ಇದನ್ನೂ ಓದಿ:ಪ್ಯಾಂಗಾಂಗ್​ ತ್ಸೊಗೆ ಹೆಚ್ಚಿನ ಸಾಮರ್ಥ್ಯದ ಸ್ಟೀಲ್​ ಬೋಟ್​ಗಳನ್ನು ರವಾನಿಸಲು ಭಾರತದ ಸಿದ್ಧತೆ
ಅಷ್ಟರಲ್ಲಿಯೇ ಯೋಧನೊಬ್ಬ ಓಡೋಡಿ ಬಂದು ಮಗುವನ್ನು ಎತ್ತಿಕೊಂಡು ಅದನ್ನು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಭಾರಿ ವೈರಲ್‌ ಆಗಿದ್ದು, ಭಾರತೀಯ ಯೋಧರ ಸಮಯಪ್ರಜ್ಞೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ನಡುವೆ, ಉಗ್ರರ ದಾಳಿಯಲ್ಲಿ ಭಾರತದ ಸಿಆರ್‌ಪಿಎಫ್‌ನ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ನಾಗರಿಕನೊಬ್ಬ ಬಲಿಯಾಗಿರುವುದಾಗಿ ಮೂಲಗಳು ತಿಳಿಸಿವೆ. ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಹಾಗೂ ಓರ್ವ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದರು, ಇವರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಮೊನ್ನೆ ಇದೇ ರೀತಿ ಘಟನೆ ನಡೆದಾಗ ಮಗುವೊಂದು ಪ್ರಾಣ ಕಳೆದುಕೊಂಡಿತ್ತು.(ಏಜೆನ್ಸೀಸ್‌)
JKP#rescueda three years old boy from getting hit by bullets during#terrorist#attackin#Sopore.@JmuKmrPolicepic.twitter.com/hzqGGvG7yN
— Kashmir Zone Police (@KashmirPolice)July 1, 2020

ಶೇ.83 ಅಂಕಗಳ ಖುಷಿಯಲ್ಲಿದ್ದಾಕೆ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಜಕ್ಕೂ ಶಾಕ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 6 =
Remember me
