ನವದೆಹಲಿ:ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ತಮ್ಮ ನಟನೆಯ ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದ್ದಾರೆ. ಜಯಾ ಬಚ್ಚನ್ ಇನ್ನೂ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ನಟನಾ ಲೋಕಕ್ಕೆ ಕಾಲಿಟ್ಟ ಜಯಾ ಬಚ್ಚನ್ ಅವರಿಗೀಗ 75 ವರ್ಷ. ಚಿತ್ರರಂಗಕ್ಕೆ ಬಂದು 60 ವರ್ಷಗಳಾಗಿವೆ. ಸಮಾಜವಾದಿ ಪಕ್ಷದಿಂದ ಅವರು ನಾಲ್ಕು ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. ಐದನೇ ಬಾರಿಗೆ ಸಮಾಜವಾದಿ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ. ಅಂದಹಾಗೆ ಜಯಾ ಬಚ್ಚನ್ ತಮ್ಮ ಚಲನಚಿತ್ರ ಮತ್ತು ರಾಜಕೀಯ ಜೀವನದಲ್ಲಿ ಸಾಕಷ್ಟು ಹಣ ಗಳಿಸಿದ್ದು, ಜಯಾ ಬಚ್ಚನ್ ಸಲ್ಲಿಸಿರುವ ಅಫಿಡವಿಟ್‌ನಿಂದ ಇವರ ನಿವ್ವಳ ಮೌಲ್ಯ ಮಾಹಿತಿ ಲಭಿಸಿದೆ.
ಜಯಾ ಬಚ್ಚನ್ 1500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯ ಮಾಲೀಕರಾಗಿದ್ದಾರೆ. ಜಯಾ ಬಚ್ಚನ್ ಬಳಿ ಕೇವಲ ದುಬಾರಿ ಕಾರುಗಳು ಮಾತ್ರವಲ್ಲದೆ 5 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ವಾಚ್ ಗಳಿವೆ. ಲಕ್ನೋದಲ್ಲಿ ಹಲವಾರು ಬಿಘಾಗಳ ಫಾರ್ಮ್ ಹೌಸ್ ಹೊಂದಿದ್ದಾರೆ.
ವಿವಿಧ ಬ್ಯಾಂಕ್‌ಗಳಿಂದ ಹಲವಾರು ಕೋಟಿ ಸಾಲವನ್ನು ಪಡೆದಿದ್ದಾರೆ. ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಮಾಹಿತಿಯ ಪ್ರಕಾರ, ಜಯಾ ಬಚ್ಚನ್ ಮತ್ತು ಅವರ ಪತಿ ಅಮಿತಾಬ್ ಬಚ್ಚನ್ ಇಬ್ಬರೂ ಒಟ್ಟಾಗಿ 1,578 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಜಯಾ ಬಚ್ಚನ್ ಮತ್ತು ಅವರ ಪತಿ ಸುಮಾರು 95 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಇದರಲ್ಲಿ ಜಯಾ ಬಚ್ಚನ್ ಬಳಿ 40.97 ಕೋಟಿ ಹಾಗೂ ಅಮಿತಾಬ್ ಬಳಿ 54.77 ಕೋಟಿ ಮೌಲ್ಯದ ಆಭರಣಗಳಿವೆ.
ಅಮಿತಾಬ್ ಬಚ್ಚನ್ ಬಳಿ 16 ಕಾರುಗಳಿದ್ದು, ಇದರ ಒಟ್ಟು ಮೌಲ್ಯ 17.66 ಕೋಟಿ ರೂ. ಇವುಗಳಲ್ಲಿ 2 ಮರ್ಸಿಡಿಸ್ ಮತ್ತು 1 ರೇಂಜ್ ರೋವರ್ ಸೇರಿವೆ.
ಜಯಾ ಬಚ್ಚನ್ ಅವರ ಬಳಿ 57,507 ನಗದು ಮತ್ತು 10,11,33,172 ರೂ. ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದೆ. ಪತಿ ಅಮಿತಾಭ್ ಬಚ್ಚನ್ ಬಳಿ 12,75,446 ನಗದು ಮತ್ತು ಬ್ಯಾಂಕ್ ಠೇವಣಿ 20,45,62,83 ರೂ ಇದೆ.
ರಾಜ್ಯ ರೈತರನ್ನು ಕೂಡಲೇ ಬಿಡುಗಡೆಗೊಳಿಸಿ; ಮಧ್ಯಪ್ರದೇಶ ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
