ಪತ್ತನಂತಿಟ್ಟ :ಶಬರಿಮಲೆಯ ವಾರ್ಷಿಕ ಜಾತ್ರೆಗೆ ಸಿದ್ಧತೆಗಳು ಆರಂಭವಾಗಿದೆ. ಮುಂದಿನ ತಿಂಗಳು ಮಂಡಲಪೂಜೆಯೊಂದಿಗೆ ಕಾರ್ಯಕ್ರಮಗಳು ಶುರುವಾಗಲಿವೆ. ವಾಡಿಕೆಯಂತೆ ಒಂದು ವರ್ಷದ ಅವಧಿಗೆ ಶಬರಿಮಲೆ ಸನ್ನಿದಾನದ ಮೇಲ್ಶಾಂತಿಯ ಆಯ್ಕೆ ನಡೆದಿದ್ದು, ಈ ಬಾರಿ ವಿ.ಕೆ.ಜಯರಾಜನ್​ ಪೊಟ್ಟಿ ಮೇಲ್ಶಾಂತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಂಡಲ ಪೂಜೆಗೆ ಸನ್ನಿದಾನ ತೆರೆದುಕೊಳ್ಳುವ ನವೆಂಬರ್ 16 ರಿಂದ ಒಂದು ವರ್ಷದ ಅವಧಿಗೆ ಸನ್ನಿದಾನದಲ್ಲಿ ಪೂಜೆ ಸಲ್ಲಿಸುವ ಹೊಣೆಗಾರಿಕೆ ಜಯರಾಜನ್ ಅವರದ್ದು. ಮಾಳಿಗಪುರತ್ತಮ ದೇವಿ ಮಂದಿರದ ಪ್ರಧಾನ ಅರ್ಚಕರಾಗಿ ರಜಿಕುಮಾರ್ ಎಂ.ಎನ್​. ನಂಬೂದಿರಿ ನೇಮಕವಾಗಿದ್ದಾರೆ.
ಇದನ್ನೂ ಓದಿ:ಬಿಹಾರ ಚುನಾವಣೆ: ಮಹಾಮೈತ್ರಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ರು ತೇಜಸ್ವಿ ಯಾದವ್​
ತಿರುವಾಂಕೂರು ದೇವಸ್ವಂ ಮಂಡಳಿ ಅರ್ಚಕರ ಹೆಸರುಗಳ ಪಟ್ಟಿಯಿಂದ ಕೆಲವರನ್ನು ಆಯ್ಕೆ ಮಾಡಿ ಸಂದರ್ಶನ ನಡೆಸಿದ ಬಳಿಕ ಅವರಿಗೆ ಈ ಹೊಣೆಗಾರಿಕೆ ವಹಿಸಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್​ನ ವೃಶ್ಚಿಕ ತಿಂಗಳಲ್ಲಿ ಆರಂಭವಾಗುವ 41 ದಿನಗಳ ಮಂಡಲ ಪೂಜೆ ಸೀಸನ್ ಶುರುವಾಗುವುದರೊಂದಿಗೆ ಇವರ ಹೊಣೆಗಾರಿಕೆಯ ಅವಧಿಯೂ ಶುರುವಾಗುತ್ತದೆ ಎಂದು ಮಂಡಳಿ ತಿಳಿಸಿದೆ. (ಏಜೆನ್ಸೀಸ್)
ನರೇಗಾ ಕೂಲಿ ಪಡ್ಕೊಂಡ್ರು ‘ದೀಪಿಕಾ ಪಡುಕೋಣೆ’, ‘ಜಾಕ್ವೆಲಿನ್ ಫೆರ್ನಾಂಡೆಸ್’ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
