ನವದೆಹಲಿ:ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ 18 ವರ್ಷಗಳ ಕಾಲ ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಕೆಲಸ ಮಾಡಿದ್ದ ಜಾರ್ಖಂಡ್​ನ ಬುಡಕಟ್ಟು ಜಿಲ್ಲೆ ಜಯ್ತಾರಾ ಈಗ ಸೈಬರ್ ಅಪರಾಧದ ಕುಖ್ಯಾತ ಕೇಂದ್ರವಾಗಿ ಹೊಸ ಹೆಸರು ಗಳಿಸುತ್ತಿದೆ.
ಈ ಬಾರಿ, ಒಂದು ಭದ್ರತಾ ಸೇವಾ ಸಂಸ್ಥೆಯ ನಿರ್ದೇಶಕರ ಬ್ಯಾಂಕ್ ಖಾತೆಯಿಂದ ಇವರು 50 ಲಕ್ಷ ರೂ.ಗಳನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸೈಬರ್ ಕಳ್ಳರು ಒನ್-ಟೈಮ್ ಪಾಸ್ವರ್ಡ್ (OTP) ಕೇಳದೆ ವಹಿವಾಟು ನಡೆಸಿದ್ದು, ಸೈಬರ್ ಕಳ್ಳರು ಮೊಬೈಲ್ ಫೋನ್ ನಲ್ಲಿ ಪದೇ ಪದೇ ಮಿಸ್ ಕಾಲ್ ಗಳನ್ನು ನೀಡುವ ಮೂಲಕ 50 ಲಕ್ಷ ರೂ.ಗಳನ್ನು ಕದ್ದಿದ್ದಾರೆ ಎನ್ನಲಾಗಿದೆ. ಈ ವಂಚನೆಯ ಮಾಸ್ಟರ್ ಮೈಂಡ್ ಗಳು ಜಾರ್ಖಂಡ್ ನ ಜಯ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ.
ಏನಿದು ಸಿಮ್ ಸ್ಟ್ಯಾಪ್/ಸಿಮ್ ಕ್ಲೋನಿಂಗ್?ಸೈಬರ್​ ಅಪರಾಧಿಗಳು ಸಿಮ್ ಕಾರ್ಡ್ ಹ್ಯಾಕ್​ ಮಾಡುತ್ತಾರೆ. ಅಥವಾ ಬ್ಯಾಂಕ್ ಖಾತೆಗೆ ಸಂಪರ್ಕಿಸಲಾದ ನೋಂದಾಯಿತ ಮೊಬೈಲ್ ಸಂಖ್ಯೆಯ ನಕಲಿ ಸಿಮ್ ಕಾರ್ಡ್ ಅನ್ನು ತಯಾರಿಸುತ್ತಾರೆ. ವಂಚಕರು ಅನಧಿಕೃತ ವಹಿವಾಟುಗಳನ್ನು ನಡೆಸಲು ಅಂತಹ ನಕಲಿ ಸಿಮ್​ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ಬಳಸುತ್ತಾರೆ.
ಇವರು ಸಾಮಾನ್ಯವಾಗಿ ದೂರವಾಣಿ / ಮೊಬೈಲ್ ನೆಟ್ವರ್ಕ್ ಸಿಬ್ಬಂದಿ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಮೂಲಕ ಜನರಿಂದ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಾರೆ. ಅಥವಾ ‘ನಿಮ್ಮ ಸಿಮ್ ಕಾರ್ಡ್ ಅನ್ನು 3ಜಿ ಇಂದ 4ಜಿ ಗೆ ಉಚಿತವಾಗಿ ಮಾಡುತ್ತೇವೆ’ ಎಂದು ಹೇಳುತ್ತಾ ಜನರಿಂದ ತಮಗೆ ಬೇಕಾದ ಮಾಹಿತಿ ಸಂಗ್ರಹಿಸಿ ಖಾತೆಗೆ ಕನ್ನ ಹಾಕುತ್ತಾರೆ.
ವಂಚಕರು ‘ಸಿಮ್ ವಿನಿಮಯ’ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದು ಅವರು ಆರ್​ಟಿಜಿಎಸ್ ವರ್ಗಾವಣೆಯನ್ನು ಪ್ರಾರಂಭಿಸಿ ಫೋನ್ ಮೂಲಕ ಒಟಿಪಿಯನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − two =
Remember me
