ತಮಿಳುನಾಡು:ಲಂಚ ನೀಡಿಲ್ಲವೆಂದು ಬಾಡಿಗೆ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದ ಪೌರಾಯುಕ್ತನ ವಿರುದ್ಧ ಅಸಮಾಧಾನಗೊಂಡ ಜೆಸಿಬಿ ಮಾಲೀಕನೊಬ್ಬ ಪುರಸಭೆ ಕಚೇರಿಯೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ತಿರುವರೂರು ಜಿಲ್ಲೆಯಲ್ಲಿ ನಡೆದಿದೆ.
ಜೆಸಿಬಿ ಕೆಲಸದ ಹಣ ಪಾವತಿಸದೆ ಪುರಸಭೆ ಅಧಿಕಾರಿಗಳು ಸತಾಯಿಸುತ್ತಿದ್ದರು. ಬಾಕಿ ಹಣ ಬಿಡುಗಡೆ ಮಾಡಲು ಪೌರಾಯುಕ್ತ ಎಸ್.ಕುಮಾರಿಮನ್ನನ್ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಕೋಪಗೊಂಡ ಜೆಸಿಬಿ ಮಾಲೀಕ ವಿಜಯರಾಘವನ್ ಅವರು ಕೂತನಲ್ಲೂರು ಪುರಸಭೆಯ ಕಚೇರಿಯೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ:ಸಚಿವೆ ನಿರ್ಮಲಾ ಸೀತಾರಾಮನ್ ಅಳಿಯ ಪಿಎಂಒ ಅಧಿಕಾರಿ; ಇವರಿಗಿರುವ ಮಹತ್ವದ ಜವಾಬ್ದಾರಿ ಏನು? ಇಲ್ಲಿದೆ ಮಾಹಿತಿ…
ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಒಂಬುಡ್ಸ್‌ಮನ್, ವಿಜಯರಾಘವನ್ ಸೇರಬೇಕಾಗಿದ್ದ ಬಾಕಿಯನ್ನು ಹಣವನ್ನು ಆಯುಕ್ತರಿಂದ ವಸೂಲಿ ಮಾಡಿದ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಸೂಚನೆ ನೀಡಿದ್ದಾರೆ.
ವಿಜಯರಾಘವನ್ ತನಗೆ ಸೇರಬೇಕಾಗಿದ್ದ ಬಾಕಿ ಹಣ ಕೇಳಲು ಹೋದಾಗ ಅಧಿಕಾರಿಗಳು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬ ಸಮೇತ ಕೂತನಲ್ಲೂರು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಎಲ್ಲಾ ಘಟನೆಯ ನಂತರ ಪಾಲಿಕೆ ಆಯುಕ್ತ ಕುಮಾರಿಮನ್ನನ್ ಅಮಾನತುಗೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
