ಬೆಂಗಳೂರು:ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್​ ಗೆಲುವು ಸಾಧಿಸಲು ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​ ಕೆಲಸ ಮಾಡಲಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್​ ಗೆಲವಿಗೆ ತಂತ್ರ ರೂಪಿಸಲು ಪ್ರಶಾಂತ್​ ಕಿಶೋರ್​ ಅವರೊಂದಿಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅವರನ್ನು ಭೇಟಿಯಾಗುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಪ್ರಶಾಂತ್​ ಕಿಶೋರ್​ ಅವರ ಸಂಪರ್ಕಿಸುವಂತೆ ಪಕ್ಷದ ಕೆಲ ಯುವ ಮುಖಂಡರು ಸಲಹೆ ನೀಡಿದ್ದರು. ಈಗ ಪಕ್ಷ ಅವರನ್ನು ಸಂಪರ್ಕಿಸಿದೆ ಎಂದು ಎಚ್​​ಡಿಕೆ ಹೇಳಿದರು.
ಇತ್ತೀಚೆಗೆ ದೆಹಲಿ ಚುನಾವಣೆಯಲ್ಲಿ ಆಪ್​ ಗೆಲುವಿಗೆ ಮತ್ತು ಈ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ವೈಎಸ್​ಆರ್​ಪಿ ಪಕ್ಷ ಜಗನ್​ಮೋಹನ್​ ರೆಡ್ಡಿ ಗೆಲುವಿಗೆ ಪ್ರಶಾಂತ್​ ಕಾರ್ಯ ನಿರ್ವಹಿಸಿದ್ದರು.
ಜೆಡಿಎಸ್​ನ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರೇ ರಾಜ್ಯದ ಪಾಲಿಗೆ ಚುನಾವಣಾ ಚಾಣಕ್ಯ ಎಂದೆನಿಸಿಕೊಂಡಿದ್ದಾರೆ. ಆದರೆ ಅವರಂತಹ ಹಿರಿಯರೇ ಮುಂದಿನ ಬಾರಿ ಪ್ರಶಾಂತ್​ ಕಿಶೋರ್​ ಕಾರ್ಯತಂತ್ರ ರೂಪಿಸಲು ಸಮ್ಮತಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
