ನವದೆಹಲಿ :ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಜಾತಿ ಗಣತಿಗೆ ಬೇಡಿಕೆ ಹೆಚ್ಚಾಗುತ್ತಿರುವಾಗಲೇ ಆಡಳಿತಾರೂಢ ಎನ್‌ಡಿಎಯಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯುಗೆ ಜಾತಿ ಲೆಕ್ಕಾಚಾರದ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸದಿರುವುದು ಅಸಮಾಧಾನ ತಂದಿದೆ.
ಇದನ್ನೂ ಓದಿ:ತಮಿಳಿನ ‘ಕಚ್ಚಿ ಸೆರಾ’ ಗೆ ಆಫ್ರಿಕಾದ ಕಿಲಿಪಾಲ್ ಆಕ್ಟ್..ಬೆರಗುಗೊಳಿಸುವ ಮುಖಭಾವಕ್ಕೆ ನೆಟ್ಟಿಗರು ಫಿದಾ!
ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಮತ್ತು ಅರ್ಹರಿಗೆ ಕಲ್ಯಾಣ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ನಾಯಕರು ಒತ್ತಾಯಿಸುತ್ತಿದ್ದಾರೆ. ಈಗ ಜೆಡಿಯು ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದೆ. ಗುರುವಾರ ಜೆಡಿಯು ಒಬಿಸಿಗಳ ಕಲ್ಯಾಣಕ್ಕಾಗಿ ಸಂಸದೀಯ ಸಮಿತಿಯನ್ನು ಸೇರಿದೆ.
ಡಿಎಂಕೆ ಸದಸ್ಯ ಟಿ.ಆರ್.ಬಾಲು ಮತ್ತು ಬಿಜೆಪಿ ಸದಸ್ಯ ಗಣೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮಾಣಿಕ್ಕಂ ಠಾಗೋರ್ ಅವರು ಜಾತಿ ಗಣತಿಯನ್ನು ಅಜೆಂಡಾದಲ್ಲಿ ಮೊದಲ ವಿಷಯವಾಗಿ ಸೇರಿಸಲು ಪ್ರಸ್ತಾಪಿಸಿದರು.
ಇದಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯ ಕಲ್ಯಾಣ್ ಬ್ಯಾನರ್ಜಿ ಬೆಂಬಲಿಸಿದರು. ಈ ಪ್ರಸ್ತಾವನೆಗೆ ಜೆಡಿಯು ಸದಸ್ಯ ಗಿರ್ಧಾರಿ ಯಾದವ್ ಬೆಂಬಲ ಸೂಚಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಜಾತಿ ಗಣತಿ ವಿಚಾರವಾಗಿ ಸಮಿತಿ ಚರ್ಚೆ ನಡೆಸಬೇಕಾದ ಅಗತ್ಯವನ್ನು ಬ್ಯಾನರ್ಜಿ ಒತ್ತಿ ಹೇಳಿದ್ದು, ಸಮಿತಿಯು ಔಪಚಾರಿಕವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಬೇಕಿದೆ ಎಂದು ಸಲಹೆ ಮಾಡಿದ್ದಾರೆ.
ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯರ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ..ಆರೋಪಿ ಲ್ಯಾಪ್‌ಟಾಪ್‌ನಲ್ಲಿ 300 ಅಶ್ಲೀಲ ವಿಡಿಯೋ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − ten =
Remember me
