ಪಟನಾ:ಬಿಹಾರ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಜಂಟಿಯಾಗಿ ಚುನಾವಣೆ ಎದುರಿಸಲಿದ್ದು  ನಿನ್ನೆಯಷ್ಟೇ ಬಿಜೆಪಿ ತನ್ನ ಪಾಲಿನ 121 ಸೀಟ್​ಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದೀಗ ಜೆಡಿಯು ಕೂಡ ತನ್ನ 115 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆಗಸ್ಟ್​​ನಲ್ಲಿ ರಾಷ್ಟ್ರೀಯ ಜನತಾ ದಳ್​ (ಆರ್​ಜೆಡಿ)ದಿಂದ ಜೆಡಿಯುಗೆ ಸೇರಿದ್ದ ತೇಜ್​ ಪ್ರತಾಪ್​ ಯಾದವ್​ ಮಾವ ಚಂದ್ರಿಕಾ ರೈ ಅವರು ಪಾರ್ಸಾ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.ಇದನ್ನೂ ಓದಿ:ಈ ಊರಲ್ಲಿ ಒಕ್ಕಲಿಗರು ಬಿಟ್ಟು ಬೇರೆ ಸಮುದಾಯ ವಾಸಕ್ಕೆ ಬಂದ್ರೆ ಆಪತ್ತು ಖಚಿತ: ಇದು ನಿಗೂಢ ಗ್ರಾಮವಂತೆ..!?
ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 121ರಲ್ಲಿ ಬಿಜೆಪಿ ಮತ್ತು 122ರಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಜೆಡಿಯು ತನ್ನ ಪಾಲಿನೆ 122 ಸೀಟ್​ಗಳಲ್ಲಿ 7 ಕ್ಷೇತ್ರಗಳನ್ನು ಹಿಂದುಸ್ತಾನ್ ಅವಾಮಿ ಮೋರ್ಚಾಗೆ ಬಿಟ್ಟುಕೊಟ್ಟಿದ್ದು, ಆ ಪಕ್ಷ ಕೂಡ ಶೀಘ್ರದಲ್ಲೇ ಲಿಸ್ಟ್​ ಬಿಡುಗಡೆ ಮಾಡಲಿದೆ.ಈ ಬಾರಿಯೂ ಬಿಜೆಪಿ-ಜೆಡಿಯು ಮೈತ್ರಿ ಗೆದ್ದರೆ ಬಿಹಾರದಲ್ಲಿ ಮತ್ತೊಮ್ಮೆ ನಿತೀಶ್​ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. (ಏಜೆನ್ಸೀಸ್)
JD(U) releases a list of 115 candidates for the upcoming#BiharElections
Chandrika Rai to contest from Parsa Assembly constituency, Lalan Paswan from Chenari and Bima Bharti from Rupauli Assembly constituency.pic.twitter.com/PURE2Hkxk2
— ANI (@ANI)October 7, 2020

ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 16 =
Remember me
