ಲಖನೌ:ಗ್ರಾಮಗಳಲ್ಲಿ ವಿಚಿತ್ರ ವಿಚಿತ್ರ ನಿಯಮಗಳನ್ನು ಮಾಡಿಕೊಂಡು ಅದರ ಪರಿಪಾಲನೆ ಮಾಡುವುದನ್ನು ನೋಡಿರುತ್ತೀರಿ. ಆದರೆ ಯಾವುದೇ ನಿಯಮವಾದರೂ ಗ್ರಾಮದ ಒಳಿತಿಗಾಗಿ, ಜನರಿಗೆ ಅನುಕೂಲವಾಗುವಂತಿರಬೇಕಲ್ಲವೇ? ಇಲ್ಲೊಂದು ಗ್ರಾಮ ಪಂಚಾಯಿತಿಯಲ್ಲಿ ಮಾಡಿರುವ ನಿಯಮದಿಂದಾಗಿ ಗ್ರಾಮದ ಯುವಕ ಯುವತಿಯರಂತೂ ತಲೆ ಕೆಡಿಸಿಕೊಂಡು ಕುಳಿತುಬಿಟ್ಟಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯ ಖಾಪ್​ ಗ್ರಾಮ ಪಂಚಾಯಿತಿ ಒಂದು ಹೊಸ ರೀತಿಯ ನಿಯಮ ಜಾರಿ ಮಾಡಿದೆ. ಗ್ರಾಮದಲ್ಲಿ ಯಾವೊಬ್ಬ ಮಹಿಳೆ ಅಥವಾ ಯುವತಿಯು ಜೀನ್ಸ್​ ಪ್ಯಾಂಟ್, ಸ್ಕರ್ಟ್​ ಧರಿಸುವಂತಿಲ್ಲ. ಹಾಗೆಯೇ ಗಂಡು ಮಕ್ಕಳು ಶಾರ್ಟ್ಸ್​ ಹಾಕಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ನಿಮಮ ಮೀರಿ ಹಾಕಿಕೊಂಡಿದ್ದೇ ಆದಲ್ಲಿ ಅವರನ್ನು ಗ್ರಾಮದಿಂದ ಬಹಿಷ್ಕರಿಸಲಾಗುವುದು ಎನ್ನುವ ನಿಯಮವನ್ನು ಗ್ರಾಮ ಪಂಚಾಯಿತಿ ಮಾಡಿದೆ. ಈ ನಿಯಮ ಮಕ್ಕಳಿಗೆ ಇರುವುದಿಲ್ಲ. ವಯಸ್ಕರು ಯಾವುದೇ ಕಾರಣಕ್ಕೂ ಮೊಣಕಾಲಿಗಿಂತ ಮೇಲೆ ಬರುವ ಬಟ್ಟೆಗಳನ್ನು ಧರಿಸವಂತಿಲ್ಲ. ಈ ವಿಚಾರವವಾಗಿ ಶಾಲೆಗಳ ಆಡಳಿತದೊಂದಿಗೂ ಮಾತನಾಡಿರುವುದಾಗಿ ತಿಳಿಸಲಾಗಿದೆ.
ಜೀನ್ಸ್​, ಶಾರ್ಟ್ಸ್​, ಸ್ಕರ್ಟ್ ಎಲ್ಲ ನಮ್ಮ ಸಂಸ್ಕೃತಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಸಮಾಜ ಹಾಳಾಗುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರೆಲ್ಲ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಕಿಸಾಣ್​ ಸಂಘಟನೆ (ಬಿಕೆಎಸ್​) ಅಧ್ಯಕ್ಷ ಠಾಕೂರ್​ ಪುರಾಣ್​ ಸಿಂಗ್​ ತಿಳಿಸಿದ್ದಾರೆ.
ಈ ಕುರಿತಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ಗೆ ಮಾಹಿತಿ ತಲುಪಿದ್ದು, ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಶಿವರಾತ್ರಿ ಬೆನ್ನಲ್ಲೇ ಲಾಕ್​ಡೌನ್​ ಶಾಕ್​! ಮಾರ್ಚ್​ 15ರಿಂದ 21ರವರೆಗೆ ಲಾಕ್​ಡೌನ್​!

ಸೆಕ್ಸ್​ ಮಾಡದಿದ್ದರೂ ತಾಯಿಯಾದೆ! ವಿಚಿತ್ರ ಸನ್ನಿವೇಶದ ನೆನಪನ್ನು ಬಿಚ್ಚಿಟ್ಟ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 11 =
Remember me
