ನವದೆಹಲಿ:ಪ್ರತಿಷ್ಠಿತ ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್​(JEE Advanced) 2021ರ ಫಲಿತಾಂಶವು ಹೊರಬಿದ್ದಿದೆ. ರಾಜಸ್ಥಾನದ ಜೈಪುರ ಮೂಲದ 18 ವರ್ಷದ ಮೃದುಲ್​ ಅಗರ್​​ವಾಲ್​, ಈವರೆಗೆ ಅತಿಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ರಚಿಸಿದ್ದಾನೆ. ದೆಹಲಿಯ ಕಾವ್ಯ ಚೋಪ್ರ ಎಂಬ ವಿದ್ಯಾರ್ಥಿನಿಯು ಬಾಲಕಿಯರಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದಾಕೆ.
ಅರ್ಹತಾ ಪರೀಕ್ಷೆಯಾದ ಜೆಇಇ ಮೇಯ್ಸ್​ನ ಮಾರ್ಚ್​ ಸುತ್ತಿನಲ್ಲಿ 100 ಪರ್ಸೆಂಟೈಲ್​ ಗಳಿಸಿ, ದೆಹಲಿ ಐಐಟಿ ವಲಯದಿಂದ ಜೆಇಇ ಅಡ್ವಾನ್ಸಡ್​ ಪರೀಕ್ಷೆ ಬರೆದಿದ್ದ ಮೃದುಲ್​ ಅಗರ್​ವಾಲ್​, 360 ಕ್ಕೆ 348 ಅಂಕಗಳನ್ನು ಗಳಿಸಿ ಪ್ರಥಮ ರಾಂಕ್​ ಪಡೆದಿದ್ದಾನೆ. ಇದು ಶೇಕಡ 96.6 ಅಂಕವಾಗಿದ್ದು ಐಐಟಿ ಪ್ರವೇಶ ಪರೀಕ್ಷೆಗಳಲ್ಲಿ ಈವರೆಗೆ ಯಾವುದೇ ಅಭ್ಯರ್ಥಿ ಗಳಿಸಿರುವ ಅತಿಹೆಚ್ಚಿನ ಅಂಕವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ನೇರಪ್ರಸಾರ: ಆಹಾ.. ಮೈಸೂರು ದಸರಾ ಎಷ್ಟೊಂದು ಸುಂದರಾ…
ಇಂದು ಹೊರಬಿದ್ದ ಫಲಿತಾಂಶದ ಪ್ರಕಾರ, ಜೆಇಇ (ಅಡ್ವಾನ್ಸಡ್​) 2021ರ ಎರಡೂ ಪತ್ರಿಕೆಗಳಿಗೆ ದೇಶದ ವಿವಿಧೆಡೆಗಳಿಂದ ಈ ಬಾರಿ ಒಟ್ಟು 1,41,699 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ 41,862 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದು, ಇವರಲ್ಲಿ 6,452 ವಿದ್ಯಾರ್ಥಿನಿಯರಿದ್ದಾರೆ. ಐಐಟಿ ದೆಹಲಿ ಜೋನ್​ಗೆ ಸಲ್ಲುವ ಕಾವ್ಯ ಚೋಪ್ರ, 360ಕ್ಕೆ 286 ಅಂಕಗಳನ್ನು ಪಡೆದು 98ನೇ ಸ್ಥಾನ ಗಳಿಸಿದ್ದಾಳೆ; ವಿದ್ಯಾರ್ಥಿನಿಯರಲ್ಲಿ ಮೊದಲಿಗಳಾಗಿದ್ದಾಳೆ.(ಏಜೆನ್ಸೀಸ್)
ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!

ಮಕ್ಕಳ ಕಣ್ಣಿನ ಸಮಸ್ಯೆ ದೊಡ್ಡದಾಗಲು ಬಿಡಬೇಡಿ: ವಿಜಯವಾಣಿ ಕ್ಲಬ್​ಹೌಸ್​ನಲ್ಲಿ ಡಾ.ಭುಜಂಗ ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
