ನವದೆಹಲಿ:ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜು ಹಾಗೂ ಐಐಟಿ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಜಾಯಿಂಟ್​ ಎಂಟ್ರೆನ್ಸ್​ ಎಕ್ಸಾಂ- ಮೇನ್​ ( ಜೆಇಇ) ಪರೀಕ್ಷೆಯನ್ನು ಜೂನ್​ನಲ್ಲಿ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಕ್ರಿಯಾಲ್​ ತಿಳಿಸಿದ್ದಾರೆ.
ಲಾಕ್​ಡೌನ್​ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಿದ ಕಾರಣದಿಂದಾಗಿ ಪರೀಕ್ಷೆಯನ್ನು ಅನಿವಾರ್ಯವಾಗಿ ಜೂನ್​ಗೆ ಮುಂದೂಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಅಂತಿಮ ದಿನಾಂಕವನ್ನು ನಿಗದಿಪಡಿಸುವ ಮುನ್ನ, ವಿವಿಧ ರಾಜ್ಯಗಳ ಶಿಕ್ಷಣ ಮಂಡಳಿಗಳು, ಐಐಟಿ ಸಂಸ್ಥೆಗಳು ಸಂಬಂಧಪಟ್ಟ ಇತರರೊಂದಿಗೆ ಚರ್ಚಿಸಲಾಗುವುದು. ಬಳಿಕ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪೋಕ್ರಿಯಾಲ್​ ಹೇಳಿದ್ದಾರೆ.
ಜೆಇಇ ಮೇನ್​ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಈ ಮೊದಲು ಏಪ್ರಿಲ್​ 5, 7, 9 ಹಾಗೂ 11ರಂದು ಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಿತ್ತು. ಬಳಿಕ ಲಾಕ್​ಡೌನ್​ ಹಿನ್ನೆಲೆ ಮೇ ಅಂತ್ಯಕ್ಕೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಎರಡನೇ ಹಂತದ ಲಾಕ್​ಡೌನ್​ ಹಿನ್ನೆಲೆ ಜೂನ್​ನಲ್ಲಿ ನಡೆಸುವುದಾಗಿ ಸಚಿವರು ಘೋಷಿಸಿದ್ದಾರೆ.
ಪ್ಯಾರಿಸ್​ನ ನೀರಿನಲ್ಲೂ ಕರೊನಾ ವೈರಸ್​, ಪೂರೈಕೆ ಬಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
