ನವದೆಹಲಿ :ರಾಷ್ಟ್ರದ ಪ್ರತಿಷ್ಠಿತ ಟೆಕ್ನಾಲಜಿ ಇನ್​ಸ್ಟಿಟ್ಯೂಟ್​ಗಳಿಗೆ ಪ್ರವೇಶ ನೀಡುವ 2021 ರ ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ (ಜೆಇಇ ಮೇನ್ 2021)ನ ಎರಡು ಹಂತಗಳ ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಕರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಮೂರನೇ ಹಂತದ ಪರೀಕ್ಷೆಗಳು ನಿಗದಿಯಂತೆ, ಜುಲೈ 20 ರಿಂದ 25 ರವರೆಗೆ ನಡೆಯಲಿವೆ.
ಆದರೆ, ಜುಲೈ 27 ರಿಂದ ಆಗಸ್ಟ್​ 2 ರವರೆಗೆ ನಡೆಯಬೇಕೆಂದು ನಿಶ್ಚಯಿಸಲಾಗಿದ್ದ ನಾಲ್ಕನೇ ಹಂತದ ಪರೀಕ್ಷೆಗಳಿಗೆ ಇದೀಗ ಹೊಸ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. 4ನೇ ಹಂತದ ಪರೀಕ್ಷೆಗಳು​ ಆಗಸ್ಟ್​ 26 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿವೆ.
ಇದನ್ನೂ ಓದಿ:ಇಬ್ಬರು ಪತ್ನಿಯರಿದ್ದರೆ ಇಬ್ಬರ ಮಕ್ಕಳಿಗೂ ಆಸ್ತಿ ಸಮಪಾಲು ಸಿಗುತ್ತಾ?
ಈ ಬಗ್ಗೆ ನೂತನ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. “ವಿದ್ಯಾರ್ಥಿ ಸಮುದಾಯದ ಬೇಡಿಕೆಯಂತೆ ಪರೀಕ್ಷೆಗೆ ಉತ್ತಮ ಸಿದ್ಧತೆಗೆ ಅವಕಾಶ ನೀಡುವ ದೃಷ್ಟಿಯಿಂದ ನಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಗೆ 3ನೇ ಮತ್ತು 4ನೇ ಸೆಷನ್​ ನಡುವೆ ನಾಲ್ಕು ವಾರಗಳ ಅಂತರ ನೀಡಲು ಸೂಚಿಸಲಾಗಿದೆ” ಎಂದು ಸಚಿವರು ಹೇಳಿದ್ದಾರೆ.
ಅಂತೆಯೇ, ನಾಲ್ಕನೇ ಹಂತದ ಜೆಇಇ ಮೈನ್ ಪರೀಕ್ಷೆಗಳು ಆಗಸ್ಟ್​ 26, 27 ಮತ್ತು 31 ಹಾಗೂ ಸೆಪ್ಟೆಂಬರ್ 1 ಮತ್ತು 2 ನೇ ತಾರೀಖುಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. 4ನೇ ಹಂತಕ್ಕೆ ಈಗಾಗಲೇ 7.32 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಜುಲೈ 20 ರವರೆಗೆ ನೋಂದಣಿ ಸಮಯವನ್ನು ವಿಸ್ತರಿಸಲಾಗಿದೆ ಎಂದಿದ್ದಾರೆ.(ಏಜೆನ್ಸೀಸ್)
VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!

ಪಾಕ್​ ಗಡಿಯ ಪ್ರಮುಖ ಪಟ್ಟಣವನ್ನು ಆಕ್ರಮಿಸಿಕೊಂಡ ತಾಲಿಬಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
