ನವದೆಹಲಿ:ಕೋವಿಡ್​ 19 ಲಾಕ್​ಡೌನ್​ನಿಂದಾಗಿ ಮುಂದೂಡಲ್ಪಟ್ಟಿರುವ ಜೆಇಇ ಮೇನ್​ ಹಾಗೂ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ನೀಟ್​ನ ಪರೀಕ್ಷಾ ದಿನಾಂಕಗಳ ಗೊಂದಲ ಶೀಘ್ರದಲ್ಲೇ ಬಗೆಹರಿಯುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.
ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಭಾನುವಾರ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೇಂದ್ರ ಸಚಿವ ರಮೇಶ್​ ಪೊಖ್ರಿಯಾಲ್​ ನಿಶಾಂಕ್​ ಅವರು ಮೇ 5ರಂದು ಪರೀಕ್ಷೆಯ ದಿನಾಂಕಗಳ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮುಕ್ತ ವಿವಿ ವಿದ್ಯಾರ್ಥಿಗಳೇ ಗಮನಿಸಿ, ಮನೆಯಿಂದಲೇ ಕಾಂಟಾಕ್ಟ್​ ಕ್ಲಾಸ್​ಗಳಿಗೆ ಹಾಜರಾಗಿ
ಈ ಮೊದಲು ಜೆಇಇ ಮೇನ್​ ಪರೀಕ್ಷೆಯನ್ನು ಏಪ್ರಿಲ್​ 5, 7, 8 ಮತ್ತು 11ರಂದು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ನಿರ್ಧರಿಸಿತ್ತು. ಆದರೆ, ಕೋವಿಡ್​ 19ನಿಂದಾಗಿ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆಯಾದ ಕಾರಣ ಪರೀಕ್ಷೆಗಳನ್ನು ಮೇ ಕೊನೆಯ ವಾರಕ್ಕೆ ಮುಂದೂಡಿತ್ತು. ಅದರಂತೆ ಮೇ 3ಕ್ಕೆ ನಿಗದಿಯಾಗಿದ್ದ ನೀಟ್​ ಪರೀಕ್ಷೆ ಕೂಡ ಮುಂದೂಡಿಕೆಯಾಗಿತ್ತು.
ಜೆಇಇ ಮೇನ್​ ಮತ್ತು ನೀಟ್​ ಪರೀಕ್ಷೆಗೆ ಸಲ್ಲಿಸಿದ ಅರ್ಜಿಗಳಲ್ಲಿ ದಾಖಲಿಸಿದ ವಿವರಗಳು ತಪ್ಪಾಗಿದ್ದರೆ ಅವನ್ನು ಸರಿಪಡಿಸಲು ಎನ್​ಟಿಎ ಮೇ 3ರವರೆಗೆ ಅವಕಾಶ ಮಾಡಿಕೊಟ್ಟಿತ್ತು.
ಪರೀಕ್ಷೆಗಳು ಯಾವಾಗ ನಡೆಯಬಹುದು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದ ಎನ್​ಟಿಎ, ಜೂನ್​ ಕೊನೆಯಲ್ಲಿ ಪರೀಕ್ಷೆಗಳು ನಡೆಯುವ ಸಾಧ್ಯತೆ ಇರುವುದಾಗಿ ಸುಳಿವು ನೀಡಿದೆ.
ನಿಸಾರ್​ ಅಹಮದ್​ ಎಂಬ ಕನ್ನಡ ಸಾಹಿತ್ಯ ಲೋಕದ ಉತ್ಸಾಹ ಚಿಲುಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + fifteen =
Remember me
