ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಉಪಟಳ ಇನ್ನೂ ನಿಂತಿಲ್ಲ.. ತೆರೆಮರೆಯಲ್ಲಿ ಭಯೋತ್ಪಾದಕರು ಸಂಚು ನಡೆಸುತ್ತಲೇ ಇದ್ದಾರೆ. ಜೈಷ್-ಇ-ಮೊಹಮದ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಮೂವರನ್ನು ಬುಧವಾರ ಜಮ್ಮು-ಕಾಶ್ಮೀರದ ಕೇಂದ್ರ ಬುಡ್ಗಾಮ್​ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಮೂವರ ಪೈಕಿ ಇಬ್ಬರನ್ನು ದಿಲವರ್ ಸೊಫಿ, ಸಮೀರ್ ಯೂಸಫ್ ಎಂದು ಗುರುತಿಸಲಾಗಿದ್ದು, ಚದೂರಾ ತೆಹಸಿಲ್​ ಮತ್ತು ಬುಡ್ಗಾಮ್​ ಜಿಲ್ಲೆಗೆ ಸೇರಿದವರಾಗಿದ್ದಾರೆ. ಮತ್ತೊಬ್ಬ ಅಪ್ರಾಪ್ತನಾಗಿರುವುದರಿಂದ ಆತನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಇವರು ಭಯೋತ್ಪಾದನೆಗೆ ಸಹಕಾರ ಮತ್ತು ಜೆಇಎಮ್​ ಉಗ್ರರಿಗೆ ಆಶ್ರಯ ನೀಡಿದ್ದರು. ಹೀಗಾಗಿ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು,ಸಿಆರ್​ಪಿಎಫ್​ , ಭದ್ರತಾ ಪಡೆಗಳು ಉಗ್ರರ ಮೂವರು ಸಹಚರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಮನೆಯಲ್ಲಿ ಕೆಲವು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://www.vijayavani.net/sbi-breaking-news-no-minimum-balance-required-for-savings-account/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 19 =
Remember me
