ನವದೆಹಲಿ:ನಗ್ರೋಟಾದಲ್ಲಿ ಎನ್​ಕೌಂಟರ್​ಗೆ ಬಲಿಯಾದ ಜೈಷ್ ಏ ಮೊಹಮ್ಮದ್ (ಜೆಇಎಂ) ಸಂಘಟನೆಯ ನಾಲ್ವರು ಉಗ್ರರ ಬಳಿ ಪಾಕಿಸ್ತಾನ ನಿರ್ಮಿತ ಫೋನ್ ಮತ್ತು ಸಿಮ್​ಗಳಿದ್ದವು. ಅವುಗಳ ಮೂಲ ಅವರು ಪಾಕಿಸ್ಥಾನದಲ್ಲಿರುವ ಉಗ್ರ ಸಂಘಟನೆಯ ನಾಯಕರು ಮತ್ತು ಸೇನೆಯ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ.
ಘಟನಾ ಸ್ಥಳದಿಂದ ಭದ್ರಾತಪಡೆ ವಶಪಡಿಸಿಕೊಂಡಿರುವ ವಸ್ತುಗಳಲ್ಲಿ ಮೊಬೈಲ್ ಹ್ಯಾಂಡ್​ಸೆಟ್​ (ಎಂಪಿಡಿ 2505 ಮಾದರಿ), ಡಿಜಿಟಲ್ ರೇಡಿಯೋ ಮತ್ತು ಪಾಕಿಸ್ತಾನಿ ಸಿಮ್​ ಕಾರ್ಡ್​ಗಳು, ವೈರ್​ಲೆಸ್ ಸೆಟ್​, ಜಿಪಿಎಸ್ ಡಿವೈಸ್, ಪಾಕ್ ನಿರ್ಮಿತ ಶೂಗಳು ಇವೆ. ಕರಾಚಿ ನಿರ್ಮಿತ ಔಷಧಗಳೂ ಸಿಕ್ಕಿವೆ. ಮೊಬೈಲ್​ ಫೋನ್​ಗೆ ಬಂದಿರುವ ಸಂದೇಶ ಇವುಗಳನ್ನೆಲ್ಲ ಗಮನಿಸಿದರೆ ಪಾಕ್ ಕೈವಾಡ ಕಂಡುಬಂದಿದೆ.
ಇದನ್ನೂ ಓದಿ:ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಯೋಧರು- ಹೆದ್ದಾರಿ ಕ್ಲೋಸ್​
ಫೋನ್​ನಲ್ಲಿದ್ದ ಕೆಲವು ಸಂದೇಶ ಹೀಗಿದೆ – “Kahan phnche, ya soorte haal hai. Koi mushkil toh nahi ” (ಎಲ್ಲಿಗೆ ತಲುಪಿದ್ರಿ, ಹೇಗಿದೆ ಪರಿಸ್ಥಿತಿ ಅಲ್ಲಿ. ಇದುವರೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಭಾವಿಸುತ್ತೇನೆ). ಇದಕ್ಕೆ ಉಗ್ರರು ಪ್ರತಿಕ್ರಿಯಿಸಿದ್ದು, ಇದುವರೆಗೆ ತೊಂದರೆ ಆಗಿಲ್ಲ. 2 ಗಂಟೆಗೆ ತಲುಪಿದ್ವಿ. ಆ ಮೇಲೆ ತಿಳಿಸುತ್ತೇವೆ ಎಲ್ಲ ವಿಚಾರ ಎಂಬ ಸಂದೇಶಗಳೂ ಕಾಣಿಸಿವೆ. (ಏಜೆನ್ಸೀಸ್)
🔴Messages recovered from terrorists satellite phone#IndianSecurity forces have recovered these devices from 4 killed#PakistaniJaish#terroristsin Nagrota. Message received from Sialkot/Shakargarh in Pakistan by their Jaish module handler Rauf.
By – Guarding the valley FBpic.twitter.com/pzR8orZ6c2
— Frontliner (@FrontlinerUV)November 21, 2020

26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !

ನಗ್ರೋಟಾ ಉಗ್ರರ ಉಸ್ತುವಾರಿ ನೋಡ್ಕೊಳ್ತಿದ್ದುದು ಜೆಇಎಂ ಮುಖ್ಯಸ್ಥ ಮಸೂದ್ ಅಜರ್​ನ ಸಹೋದರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + two =
Remember me
