ಭೋಪಾಲ್:ಸ್ಟಾಂಡ್​ಅಪ್​ ಕಾಮೆಡಿಯನ್ ವೀರ್​ ದಾಸ್​​ರ ಭಾರತದ ಬಗೆಗಿನ ಭಾಷಣದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸ್​ ಕಂಪ್ಲೆಂಟುಗಳು ದಾಖಲಾಗಿವೆ. ಇದೀಗ ಅಮೆರಿಕ ಟೂರ್​ ನಡೆಸುತ್ತಿರುವ ದಾಸ್​ಗೆ ಮಧ್ಯಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ.
ಮುಂಬೈ ಮೂಲದ ದಾಸ್​ ಭಾರತದ ಪ್ರಸ್ತುತ ವಿಚಾರಗಳ ಕುರಿತಾಗಿ ಅಮೆರಿಕದ ಜೆಎಫ್​ ಕೆನೆಡಿ ಸೆಂಟರ್​ನಲ್ಲಿ ಮಾಡಿದ್ದ ತಮ್ಮ ಭಾಷಣದ ವಿಡಿಯೋ ತುಣುಕನ್ನು ಯೂಟ್ಯೂಬ್​ನಲ್ಲಿ ಶೇರ್​ ಮಾಡಿದ್ದರು. ಅದನ್ನು ವಿಡಂಬನೆ ಎಂದು ಅವರು ಹೇಳಿಕೊಂಡಿದ್ದರೂ, ದೇಶದ ಬಗ್ಗೆ ವಿದೇಶಕ್ಕೆ ಹೋಗಿ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್​ ಮಿಶ್ರ, “ಭಾರತಕ್ಕೆ ಅವಮಾನ ಮಾಡುವ ಇಂಥವರನ್ನು ನಾನು ವಿದೂಷಕರೆಂದು ಕರೆಯುತ್ತೇನೆ. ಇವರಿಗೆ ರಾಜ್ಯದಲ್ಲಿ ಪ್ರದರ್ಶನ ನೀಡಲು ಅವಕಾಶ ಕೊಡುವುದಿಲ್ಲ. ಕ್ಷಮಾಪಣೆ ಕೇಳಿದರೆ, ಅದರ ಬಗ್ಗೆ ಮತ್ತೆ ಯೋಚಿಸುತ್ತೇವೆ” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಮತ್ತೊಂದೆಡೆ, ತಮಗೆ ದೇಶಕ್ಕೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿಕೊಂಡಿರುವ ವೀರ್​ ದಾಸ್​​ಗೆ ಟಿಎಂಸಿ ಸದಸ್ಯ ಮಹುವಾ ಮೋಯಿತ್ರ, ಕಾಂಗ್ರೆಸ್​ ನಾಯಕರಾದ ಕಪಿಲ್​ ಸಿಬಾಲ್ ಮತ್ತು ಶಶಿ ತರೂರ್​ ಮುಂತಾದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)
ಚುನಾವಣೆ ಬಂದ್ರೆ ಹಿಂದು-ಮುಸ್ಲಿಂ ಅಂತೀರಿ! ಬಿಜೆಪಿ ವಿರುದ್ಧ ತೆಲಂಗಾಣ ಸಿಎಂ ಆಕ್ರೋಶ

VIDEO| ನಟಿ ನಯನತಾರಾ ಜನ್ಮದಿನ… ಹೀಗಿತ್ತು ಬರ್ತ್​​ಡೇ ಪಾರ್ಟಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 6 =
Remember me
