ನವದೆಹಲಿ:ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ( 70 ) ಅವರು ಗುರುವಾರ ಬೆಳಗ್ಗೆ ಮುಂಬೈನಲ್ಲಿ ಕ್ಯಾನ್ಸರ್​ನಿಂದಾಗಿ ನಿಧನರಾದರು. ಅವರು ತಮ್ಮ ಪತಿ ಮತ್ತು ಇಬ್ಬರು ಮಕ್ಕಳಾದ ನಮ್ರತಾ ಮತ್ತು ನಿವಾನ್ ಗೋಯಲ್ ಅವರನ್ನು ಅಗಲಿದ್ದಾರೆ.
ಮೂರನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನಿತಾ ಅವರ ಆರೋಗ್ಯ ಕಳೆದ ಕೆಲವು ತಿಂಗಳುಗಳಿಂದ ಕ್ಷೀಣಿಸಿತ್ತು. ಜೆಟ್ ಏರ್‌ವೇಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅನಿತಾ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್​ ಗೋಯಲ್​ ಅವರನ್ನು ಸೆಪ್ಟೆಂಬರ್ 1, 2023 ರಂದು ಬಂಧಿಸಲಾಗಿತ್ತು. ಆದರೆ, ಪತ್ನಿಯ ಆನಾರೋಗ್ಯ ಕಾರಣದಿಂದಾಗಿ ಅವರ ಜತೆ ಇರಲು ಮಾನವೀಯತೆಯ ಆಧಾರದ ಮೇಲೆ ಈ ತಿಂಗಳ ಆರಂಭದಲ್ಲಿ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನರೇಶ್​ ಅವರಿಗೆ ಮಂಜೂರು ಮಾಡಿತ್ತು.
ಈ ಬ್ಯಾಂಕ್‌ಗಳಿಗೆ ಇನ್ನೂ 6,000 ಕೋಟಿ ರೂಪಾಯಿ ಹಣ ಪಾವತಿಸುವುದು ಬಾಕಿ ಇದ್ದರೂ ಜೆಟ್ ಏರ್‌ವೇಸ್ ತನ್ನ ದೈನಂದಿನ ಖರ್ಚುಗಳನ್ನು ನಿರ್ವಹಿಸಲು 10 ಬ್ಯಾಂಕ್‌ಗಳ ಒಕ್ಕೂಟದಿಂದ ಹಣವನ್ನು ಎರವಲು ಪಡೆದಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪಿಸಿದೆ.
1,152 ಕೋಟಿ ರೂ.ಗಳನ್ನು ಸಲಹಾ ಮತ್ತು ವೃತ್ತಿಪರ ಶುಲ್ಕದ ನೆಪದಲ್ಲಿ ಬೇರೆಡೆ ತಿರುಗಿಸಲಾಗಿದೆ. ಅಲ್ಲದೆ, 2,547.83 ಕೋಟಿ ರೂ.ಗಳನ್ನು ತನ್ನ ಸಹ ಸಂಸ್ಥೆ ಜೆಟ್ ಲೈಟ್ ಲಿಮಿಟೆಡ್‌ಗೆ ಅದರ ಸಾಲವನ್ನು ಕ್ಲಿಯರ್ ಮಾಡಲು ತಿರುಗಿಸಲಾಗಿದೆ ಎಂದು ಫೋರೆನ್ಸಿಕ್ ಆಡಿಟ್‌ನಲ್ಲಿ ತಿಳಿದುಬಂದಿದೆ ಎಂದು ಇ.ಡಿ. ಆಪಾದಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 18 =
Remember me
