ಮೂರು ವರ್ಷಗಳಹಿಂದೆ ಸ್ಥಗಿತಗೊಂಡಿದ್ದ ಜೆಟ್​ ಏರ್​ವೇಸ್​ ಗುರುವಾರ ಪರೀಕ್ಷಾರ್ಥ ಹಾರಾಟ ನಡೆಸಿತು. ಇದರೊಂದಿಗೆ ಈ ವರ್ಷ ಅಕ್ಟೋಬರ್​ನಲ್ಲಿ ವಾಣಿಜ್ಯ ಹಾರಾಟಕ್ಕೆ ಸಿದ್ಧತೆ ಆರಂಭಿಸಿದೆ. ಜೆಟ್​ ಏರ್​ವೇಸ್​ 2019ರ ಏಪ್ರಿಲ್​ನಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತನ್ನ ಎಲ್ಲ ಹಾರಾಟವನ್ನು ನಿಲ್ಲಿಸಿತ್ತು. ಗುರುವಾರ ಟೆಸ್ಟ್​ ್ಲೆ$ಟ್​ ಮೂಲಕ ವಿಮಾನಗಳ ಸುರಕ್ಷತೆಯನ್ನು ಪರಿಶೀಲಿಸಿದೆ.
ಜೆಟ್​ ಏರ್​ವೇಸ್​ ದಿವಾಳಿ ಪ್ರಕ್ರಿಯೆ ಪೂರ್ಣ ಗೊಳಿಸಿದ ಎರಡು ವರ್ಷಗಳ ನಂತರ, ಜಲಾನ್​ ಕಾಲ್​ರಾಕ್​ನ ಪರಿಹಾರ ಸೂತ್ರಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) 2021ರ ಜೂನ್​ನಲ್ಲಿ ಹಸಿರು ನಿಶಾನೆ ತೋರಿತ್ತು.
* ಮೇ 5 ನಮ್ಮ 29ನೇ ಜನ್ಮದಿನ. ನಮ್ಮ ಪಾಲಿಗೆ ಇದು ಭಾವನಾತ್ಮಕ ದಿನ. ಮತ್ತೆ ಹಾರಾಟ ನಡೆಸುವ, ಕೆಲಸ ಮಾಡಲು ಶುರುಮಾಡುವುದನ್ನು ನಾವು ಎದುರು ನೋಡುತ್ತಿದ್ದೆವು. ಈ ದಿನಕ್ಕಾಗಿ ನಾವು ಪ್ರಾರ್ಥಿಸುತ್ತಿದ್ದೆವು. ಜೆಟ್​ನ ನಿಷ್ಠಾವಂತ ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗುತ್ತಿದ್ದೇವೆ ಎಂದು ಜೆಟ್​ ಏರ್​ವೇಸ್​ ಹೇಳಿದೆ.
* ನಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಸ್ಥೆಯ ಖರೀದಿ ಬಿಡ್​ನಲ್ಲಿ ಜಲಾನ್​ ಕಾಲ್​ರಾಕ್​ ಕನ್ಸೋರ್ಟಿಯಂ ಗೆದ್ದುಕೊಂಡಿದ್ದು, ಜೆಟ್​ ಏರ್​ವೇಸ್​ನ ಕೇಂದ್ರ ಕಚೇರಿ ಮುಂಬೈ ಬದಲು ದೆಹಲಿಯಲ್ಲಿ ಇರಲಿದೆ ಎಂದು ಹೇಳಿತ್ತು.
* ಜೆಟ್​ ಏರ್​ವೇಸ್​ನ ಮೊದಲ ವಿಮಾನ ದೆಹಲಿ&ಮುಂಬೈ ಮಾರ್ಗದಲ್ಲಿ ಸಂಚರಿಸಲಿದೆ. ಸಂಚಾರವನ್ನು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಗಿತಗೊಳಿಸಿದ್ದ ವಿಮಾನಯಾನ ಸಂಸ್ಥೆಯೊಂದು ಸೇವೆಯನ್ನು ಪುನಶ್ಚೇತನಗೊಳಿಸುತ್ತಿರುವುದು ವಿಮಾನ ಯಾನ ಇತಿಹಾಸದಲ್ಲಿ ಇದೇ ಮೊದಲ ಸಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − six =
Remember me
