ಹೈದರಾಬಾದ್​:ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಮಹಿಳೆಯೋರ್ವಳ ಒಡವೆಗಳೆಲ್ಲ ನಾಪತ್ತೆಯಾಗಿವೆ.
ಆಕೆಯ ಮೂಗಿನ ನತ್ತು, ಕಿವಿಯ ಓಲೆ, ಉಂಗುರ, ಚೈನ್​​ಗಳು ಕಾಣೆಯಾಗಿವೆ. ನತ್ತು ಹಾಗೂ ಕಿವಿಯ ಓಲೆಗಳು ವಜ್ರದ್ದಾಗಿದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಬಂಜಾರಾ ಹಿಲ್​ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆಯ ಮೈಮೇಲೆ ಇದ್ದ ಒಡವೆಗಳ ಒಟ್ಟು ಬೆಲೆ ಅಂದಾಜು 5 ಲಕ್ಷ ರೂ. ಎಂದು ಪೊಲೀಸರು ಹೇಳಿದ್ದಾರೆ.ಇದನ್ನೂ ಓದಿ:ಬಿಎಸ್‌ವೈ ಬದಲಿಸಿದರೆ ಬಿಜೆಪಿ ಅಸ್ತಿತ್ವಕ್ಕೆ ಧಕ್ಕೆ ; ಬೀದಿಗಿಳಿದು ಹೋರಾಟ ಮಾಡುವುದಾಗಿ ಮಠಾಧೀಶರ ಎಚ್ಚರಿಕೆ
ಒಡವೆಗಳು ಕಾಣೆಯಾದ ಬಗ್ಗೆ ಮಹಿಳೆಯ ಮಗ ಎಂ. ಪ್ರಕಾಶ್​ ಅವರು ದೂರು ನೀಡಿದ್ದರು. ಕೊವಿಡ್​-19 ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ನೋಡಿದರೆ ಅವರ ಮೈಮೇಲೆ ಇದ್ದ ಒಡವೆಗಳು ಒಂದೂ ಇರಲಿಲ್ಲ. ಅವರಿಗೆ ಸಂಬಂಧಪಟ್ಟ ಉಳಿದ ವಸ್ತುಗಳನ್ನೆಲ್ಲ ನಮಗೆ ಒಪ್ಪಿಸಿದ್ದಾರೆ. ಆದರೆ ಮೂಗಿನ ನತ್ತು, ಕಿವಿಯೋಲೆಗಳು, ಚೈನ್​, ಉಂಗುರಗಳನ್ನು ಕೊಡಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸರು ಆಸ್ಪತ್ರೆ ಸಿಬ್ಬಂದಿಯ ಬಳಿ ಕೇಳಿದ್ದಕ್ಕೆ, ನಾವು ಚಿಕಿತ್ಸೆ ಶುರು ಮಾಡುವ ಮೊದಲೇ ಎಲ್ಲವನ್ನೂ ಅವರ ಕುಟುಂಬದವರಿಗೆ ಕೊಟ್ಟಿದ್ದೇವೆ ಎಂದು ಉತ್ತರಿಸಿದ್ದಾರೆ.
ಹಾಗೇ, ಸಿಸಿಟಿವಿ ಫೂಟೇಜ್​ಗಳನ್ನು ನೋಡಿದರೂ ನಮಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಕುಟುಂಬದವರನ್ನು ಕೇಳಿದರೆ ನಮಗೆ ಕೊಡಲಿಲ್ಲ ಎನ್ನುತ್ತಾರೆ. ಆಸ್ಪತ್ರೆಯವರನ್ನು ಕೇಳಿದರೆ ನಾವು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಕೊವಿಡ್​-19 ಸೋಂಕಿಗೆ ಒಳಗಾದ ಅಮಿತ್​ ಷಾ ನಡೆ ಬಗ್ಗೆ ಅಚ್ಚರಿ, ಅನುಮಾನ ವ್ಯಕ್ತಪಡಿಸಿದ ಶಶಿ ತರೂರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 14 =
Remember me
